ETV Bharat / sports

ಆತ್ಮವಿಶ್ವಾಸವೇ ನಮ್ಮ ಗುರಿ ಸಾಧನೆಗೆ ಸೋಪಾನ: ಭರ್ಚಿ ದೊರೆ ನೀರಜ್​ ಚೋಪ್ರಾ - ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ

ಭಾರತದ ಭರ್ಚಿ ದೊರೆ ನೀರಜ್​ ಚೋಪ್ರಾ ಕ್ರೀಡೆ, ಅದರಲ್ಲಿನ ಸವಾಲುಗಳ ಬಗ್ಗೆ ಈಟಿವಿ ಭಾರತ್​ ಜೊತೆ ವಿಶೇಷ ಸಂವಾದ ನಡೆಸಿದ್ದಾರೆ.

ನೀರಜ್​ ಚೋಪ್ರಾ
ನೀರಜ್​ ಚೋಪ್ರಾ
author img

By ETV Bharat Karnataka Team

Published : Oct 7, 2023, 10:40 PM IST

ಪಾಣಿಪತ್ (ಹರಿಯಾಣ) : ನೀರಜ್​ ಚೋಪ್ರಾ.. ಸದ್ಯದ ಕ್ರೀಡಾ ಜಗತ್ತಿನ ಐಕಾನ್​. ಚೋಪ್ರಾ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದ್ದು, ಪ್ರತಿ ಕೂಟದಲ್ಲೂ ಅವರು ಚಿನ್ನದ ಪದಕ ಪಡೆಯುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಭರ್ಚಿ ಎಸೆದಿದ್ದರು. ಫೈನಲ್‌ನಲ್ಲಿ 88.88 ಮೀಟರ್‌ಗಳ ದೂರ ಜಾವೆಲಿನ್​ ಎಸೆಯುವ ಮೂಲಕ ಪದಕ ಸಾಧನೆ ಮಾಡಿದ್ದರು. ತಮ್ಮ ಮುಂದಿನ ಗುರಿ ಮತ್ತು ಕ್ರೀಡೆಯ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ್ದಾರೆ.

ನಮಗೆ ನಮ್ಮ ಮೇಲೆ ನಂಬಿಕೆ ಮುಖ್ಯವಾಗಿರಬೇಕು. ಒಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗುವ ಪ್ರಯಾಣವು ಬಹಳಷ್ಟು ಕಠಿಣ ಪರಿಶ್ರಮವನ್ನು ಒಳಗೊಂಡಿರುತ್ತದೆ. ಪ್ರತಿಯೊಬ್ಬ ಆಟಗಾರನಂತೆ ನಾನು ದೇಶವನ್ನು ಪ್ರತಿನಿಧಿಸುವ ಮತ್ತು ಪದಕಗಳನ್ನು ಗಳಿಸುವ ಕನಸು ಹೊಂದಿದ್ದೆ. ನನ್ನ ಪ್ರಯತ್ನಗಳು ಆ ಗುರಿಯನ್ನು ಸಾಧಿಸಲು ನೆರವಾದರು ಎಂದು ಚೋಪ್ರಾ ಅಭಿಪ್ರಾಯಪಟ್ಟರು.

ಒಲಿಂಪಿಕ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರಾ ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ. ಅದು ಅವರ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದೆ. ಕುಟುಂಬದ ಸದಸ್ಯರ ಬೆಂಬಲ ಅಗಾಧವಾಗಿದೆ. ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಯಶಸ್ಸಿನಲ್ಲಿ ಕುಟುಂಬ ಪ್ರಮುಖ ಪಾತ್ರ ಬಹುಮುಖ್ಯವಾಗಿದೆ ಎಂದು ನೀರಜ್ ಹೇಳಿದರು.

ಬದಲಾದ ಕ್ರೀಡಾ ಸನ್ನಿವೇಶಗಳು: ಭಾರತೀಯ ಜಾವೆಲಿನ್ ಸನ್ನಿವೇಶ ಬಹಳಷ್ಟು ಬದಲಾಗುತ್ತಿದೆ. ನಾನು ಯುವಕರಿಗೆ ಸಲಹೆ ನೀಡೋದೇನೆಂದರೆ, ನಾವು ಪದಕಗಳನ್ನು ಗೆದ್ದಾಗ ಅದು ತರುವ ಪ್ರಚಾರದ ಹಿಂದೆ ಬೀಳಬಾರದು. ಆಟದಲ್ಲಿರುವ ಆಸಕ್ತಿಯಿಂದ ಮಾತ್ರ ಕ್ರೀಡೆಯಲ್ಲಿ ಮುಂದುವರಿಯಬೇಕು. ಪ್ರತಿಯೊಬ್ಬರೂ ಉತ್ಸಾಹದಲ್ಲಿ ಕೆಲಸ ಮಾಡಬೇಕು. ಕ್ರೀಡೆಯು ಜೀವನದ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದು ಗಂಟೆ ಸಮಯವನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.

ನಿಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆ ಮಾಡಿ. ಅದರಲ್ಲಿ ಕ್ರೀಡೆಯಾಗಿದ್ದರೆ, ಹೆಚ್ಚಿನ ಶ್ರಮ ವಹಿಸಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಯನ್ನಾದರೂ ನೀವು ಅದಕ್ಕೆ ವಿನಿಯೋಗಿಸಬೇಕು. ನಿಮ್ಮ ಫಿಟ್‌ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಗುಣಮಟ್ಟ ಸಾಧಿಸಲು ಕ್ರೀಡೆ ಪ್ರಮುಖ ಸಾಧನ ಎಂದು ಅವರು ಅಭಿಪ್ರಾಯಪಟ್ಟರು.

ಕಿಶೋರ್ ಜೆನಾಗೆ ಶ್ಲಾಘನೆ: 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ಪಾಕಿಸ್ತಾನದ ಅರ್ಷದ್ ನದೀಮ್ ಗಾಯದ ಕಾರಣದಿಂದ ಕೂಟದಿಂದ ತಪ್ಪಿಸಿಕೊಂಡಿದ್ದು ದುರದೃಷ್ಟಕರ. ಅವರು ಅದ್ಭುತವಾದ ಆಟಗಾರ ಎಂದು ಹೊಗಳಿದರು. ಜೊತೆಗೆ ತಮ್ಮೊಂದಿಗೆ ಏಷ್ಯನ್​ ಗೇಮ್ಸ್​ನಲ್ಲಿ ಟಕ್ಕರ್​ ನೀಡಿದ ಒಡಿಶಾದ ಕಿಶೋರ್ ಕುಮಾರ್​ ಜೆನಾ ಅವರ ಆಟವನ್ನೂ ಶ್ಲಾಘಿಸಿದರು.

ಕಿಶೋರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನೇ ಮುಂದುವರಿಸಿಕೊಂಡು ಹೋಗಬೇಕು. ನಾನು ಏಷ್ಯನ್ ಚಾಂಪಿಯನ್‌ಶಿಪ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ಕೌಶಲ್ಯಗಳನ್ನು ಸಮೀಪದಿಂದಲೇ ಕಂಡಿದ್ದೇನೆ. ಅವರು ಇನ್ನಷ್ಟು ಪದಕಗಳನ್ನು ಗೆಲ್ಲಲಿದ್ದಾರೆ ಎಂದು ಚೋಪ್ರಾ ಹೇಳಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌, ಜಾವೆಲಿನ್‌ ಥ್ರೋ: ನೀರಜ್‌ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್‌; 4x400 ಮೀ ರಿಲೇಯಲ್ಲಿ ಚಿನ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.