ಹ್ಯಾಂಗ್ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಸ್ಕ್ವಾಷ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಮಲೇಷ್ಯಾದ ಈನ್ ಯೋವ್ ಎನ್ಜಿ ವಿರುದ್ಧ ಭಾರತದ ಸೌರವ್ ಘೋಸಲ್ 1-2 ಅಂಕಗಳಿಂದ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
-
Ageless Wonder!
— SAI Media (@Media_SAI) October 5, 2023 " class="align-text-top noRightClick twitterSection" data="
Presenting the heartthrob of 🇮🇳 Squash, @SauravGhosal, who is now an #AsianGames2022 #Silver🥈Medalist🥳
With this, Saurav becomes the 1️⃣st 🇮🇳 Squash player to win 5⃣ consecutive individual medals at #AsianGames since 2006!
Congratulations on making history… pic.twitter.com/4G01zCyh6F
">Ageless Wonder!
— SAI Media (@Media_SAI) October 5, 2023

Congratulations on making history… pic.twitter.com/4G01zCyh6FAgeless Wonder!
— SAI Media (@Media_SAI) October 5, 2023
Presenting the heartthrob of 🇮🇳 Squash, @SauravGhosal, who is now an #AsianGames2022 #Silver🥈Medalist🥳
With this, Saurav becomes the 1️⃣st 🇮🇳 Squash player to win 5⃣ consecutive individual medals at #AsianGames since 2006!
Congratulations on making history… pic.twitter.com/4G01zCyh6F
ಇನ್ನೊಂದೆಡೆ, 53 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಅಂತಿಮ್ ಪಂಘಾಲ್ ಕಂಚಿನ ಪದಕ ತಮ್ಮದಾಗಿಸಿಕೊಂಡರು. 86 ಪದಕಗಳನ್ನು ಗೆಲ್ಲುವ ಮೂಲಕ ಭಾರತ 100 ರ ಗಡಿಯತ್ತ ಮುನ್ನುಗ್ಗುತ್ತಿದೆ.
ಸ್ಕ್ವಾಷ್ನಲ್ಲಿ ಕೈ ತಪ್ಪಿದ ಚಿನ್ನ: ಗುರುವಾರ ಇಲ್ಲಿ ನಡೆದ ಸ್ಕ್ವಾಷ್ ಪುರುಷರ ಸಿಂಗಲ್ಸ್ನಲ್ಲಿ ಸೌರವ್ ಘೋಸಲ್ ಚಿನ್ನದ ನಿರೀಕ್ಷೆ ಮೂಡಿಸಿದ್ದರು. ಆದರೆ, ಮಲೇಷ್ಯಾದ ಈನ್ ಯೋವ್ ಎನ್ಜಿ ವಿ ವಿರುದ್ಧದ ಸೆಣಸಾಟದಲ್ಲಿ ಸೋಲು ಕಂಡರು. ಮೊದಲ ಸೆಟ್ನ ಆರಂಭದಲ್ಲಿ 1-6 ರಿಂದ ಹಿನ್ನಡೆ ಅನುಭವಿಸಿದ ಸೌರವ್, ಬಳಿಕ ಪುಟಿದೆದ್ದು 9-11 ರಲ್ಲಿ ಮೊದಲ ಸೆಟ್ ಗೆದ್ದರು.
1-0 ಮುನ್ನಡೆ ಸಾಧಿಸಿದ ಸೌರವ್ ಎರಡನೇ ಸೆಟ್ನಲ್ಲಿ ಮಲೇಷ್ಯಾದ ಆಟಗಾರನ ಆಕ್ರಮಣಕಾರಿ ಆಟದ ಮುಂದೆ 11-9 ಅಂಕಗಳಿಂದ ಸೋತರು. ಮೂರನೇ ಸೆಟ್ನಲ್ಲೂ ಭರ್ಜರಿ ಆಟವಾಡಿದ ಮಲೇಷ್ಯಾದ ಈನ್ ಯೋವ್ ಎನ್ಜಿ 11-5 ರಿಂದ ಗೆದ್ದು ಪಂದ್ಯವನ್ನು ವಶಪಡಿಸಿಕೊಂಡರು. ಕೊನೆಯ ಎರಡು ಸೆಟ್ನಲ್ಲಿ ಭರ್ಜರಿ ಹೊಡೆತಗಳ ಮೂಲಕ ಭಾರತೀಯ ಆಟಗಾರನನ್ನು ಕಾಡಿದ ಮಲೇಷ್ಯಾ ಸ್ಕ್ಯಾಷರ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
-
.@OlyAntim shines with a brilliant #Bronze🥉with her debut at #AsianGames2022
— SAI Media (@Media_SAI) October 5, 2023 " class="align-text-top noRightClick twitterSection" data="
The #TOPSchemeAthlete & U20 World Champion defeated 🇲🇳's Bolortuya Bat-Ochir in Women's Freestyle 53kg weight category 🥳
Many congratulations Antim💪🏻
Keep shining💪🏻👏👏#Cheer4India#HallaBol… pic.twitter.com/f1sFck8JBx
">.@OlyAntim shines with a brilliant #Bronze🥉with her debut at #AsianGames2022
— SAI Media (@Media_SAI) October 5, 2023
The #TOPSchemeAthlete & U20 World Champion defeated 🇲🇳's Bolortuya Bat-Ochir in Women's Freestyle 53kg weight category 🥳
Many congratulations Antim💪🏻
Keep shining💪🏻👏👏#Cheer4India#HallaBol… pic.twitter.com/f1sFck8JBx.@OlyAntim shines with a brilliant #Bronze🥉with her debut at #AsianGames2022
— SAI Media (@Media_SAI) October 5, 2023
The #TOPSchemeAthlete & U20 World Champion defeated 🇲🇳's Bolortuya Bat-Ochir in Women's Freestyle 53kg weight category 🥳
Many congratulations Antim💪🏻
Keep shining💪🏻👏👏#Cheer4India#HallaBol… pic.twitter.com/f1sFck8JBx
ಮೊದಲ ಏಷ್ಯನ್ ಕುಸ್ತಿಯಲ್ಲಿ ಅಂತಿಮ್ಗೆ ಕಂಚು: ವಿಶ್ವ ಕುಸ್ತಿಯಲ್ಲಿ ಕಂಚಿನ ಪದಕ ವಿಜೇತೆ, 19 ವರ್ಷದ ಅಂತಿಮ್ ಪಂಘಾಲ್ ತಮ್ಮ ಮೊದಲ ಏಷ್ಯನ್ ಗೇಮ್ಸ್ ಕೂಟದ 53 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಕಂಚಿನ ಪದಕ ಸಾಧನೆ ಮಾಡಿದರು. ಮಂಗೋಲಿಯಾದ ಬ್ಯಾಟ್ ಒಚಿರಿನ್ ಬೊಲೊರ್ಟುಯಾ ವಿರುದ್ಧ 3-0 ಅಂತರದಲ್ಲಿ ಎತ್ತಿ ಕೆಡವಿದ ಪೈಲ್ವಾನ್ ಕಂಚಿಗೆ ಕೊರಳೊಡ್ಡಿದರು.
ಚುರುಕಿನ ಚಲನೆಗಳಿಂದ ಪಂಘಾಲ್ ಎದುರಾಳಿಯ ಮೇಲೆ ಸತತ ದಾಳಿ ನಡೆಸಿದರು. ಕಾಲುಗಳನ್ನೇ ಗುರಿಯಾಗಿಸಿಕೊಂಡಿದ್ದರಿಂದ ಬೊಲೊರ್ಟುಯಾ ಸುಸ್ತಾದರು. ಇದರಿಂದ ಮಂಗೋಲಿಯನ್ ಪೈಲ್ವಾನ್ ಒಂದು ಋಣಾತ್ಮಕ ಅಂಕ ಪಡೆದರು. ಇದರಿಂದ ಅಂತಿಮ್ 1-0 ಮುನ್ನಡೆ ಪಡೆದರು. ಬಳಿಕವೇ ಚಾಣಾಕ್ಷ ಪಟ್ಟಿನಿಂದ ಎದುರಾಳಿಯನ್ನು ಚಿತ್ ಮಾಡಿದ ಅಂತಿಮ್ ಮತ್ತೊಂದು ಗಳಿಸಿದರು. ಮೊದಲ ಸುತ್ತಿನ ಅಂತ್ಯಕ್ಕೆ 3-0ಯಲ್ಲಿ ಮುಂದಿದ್ದರು.
86ಕ್ಕೇರಿದ ಪದಕಗಳ ಸಂಖ್ಯೆ: ಎರಡನೇ ಸುತ್ತಿನಲ್ಲಿ ಭಾರತೀಯ ಪೈಲ್ವಾನ್ ತಪ್ಪಿನಿಂದಾಗಿ ಒಂದು ಅಂಕ ಕಳೆದುಕೊಂಡರು. ಎದುರಾಲಿಗೆ ಬಿಟ್ಟುಕೊಟ್ಟ ಏಕೈಕ ಪಾಯಿಂಟ್ ಇದಾಗಿತ್ತು. ನಂತರ ಅಂತಿಮ್ ಮತ್ತೊಂದು ಅಂಕ ಪಡೆದರು. ಕೊನೆಯಲ್ಲಿ ಇಬ್ಬರೂ ಸಮಾನವಾಗಿ ಕಾದಾಡಿದ್ದರಿಂದ ಯಾರಿಗೂ ಅಂಕ ಸಿಗಲಿಲ್ಲ. ಈ ಗೆಲುವಿನೊಂದಿಗೆ ಅಂತಿಮ್ 2024 ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು. ಇತ್ತ ಭಾರತದ ಪದಕಗಳ ಸಂಖ್ಯೆಯೂ 86 ಕ್ಕೆ ಹಿಗ್ಗಿತು.
ಇದನ್ನೂ ಓದಿ: ಹಾಕಿ ಸೆಮಿಫೈನಲ್: ಚೀನಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ 0-4 ರಿಂದ ಸೋಲು; ಕಂಚಿಗಾಗಿ ಹೋರಾಟ