ETV Bharat / sports

Asian Games: ಬೆಳ್ಳಿ ಗೆದ್ದ ಶೂಟರ್ ಅನಂತ್ ಜೀತ್ ಸಿಂಗ್.. ಶೂಟಿಂಗ್​ನಲ್ಲಿ ಭಾರತಕ್ಕೆ 12ನೇ ಪದಕ - ETV Bharath Karnataka

19ನೇ ಏಷ್ಯನ್ ಗೇಮ್ಸ್​ನಲ್ಲಿ ಭಾರತ ಶೂಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಎರಡು ಚಿನ್ನ ಈ ವಿಭಾಗದಿಂದ ಬಂದರೆ, ಒಟ್ಟಾರೆ 12 ಪದಕ ಶೂಟಿಂಗ್​ನಿಂದ ಭಾರತದ ಪಾಲಾಗಿದೆ.

Asian Games
Asian Games
author img

By ETV Bharat Karnataka Team

Published : Sep 27, 2023, 3:58 PM IST

ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್‌ನಲ್ಲಿ ಶೂಟರ್ ಅನಂತ್ ಜೀತ್ ಸಿಂಗ್ ನರುಕಾ ಬುಧವಾರ ನಡೆದ ಪುರುಷರ ಸ್ಕೀಟ್ ವೈಯಕ್ತಿಕ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಖಚಿತಪಡಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಸೇರಿಸಿದರು. ಅವರು 58 ಅಂಕಗಳನ್ನು ಪಡೆದರು. ಕುವೈತ್‌ನ ಅಬ್ದುಲ್ಲಾ ಅಲ್ರಾಶಿದಿ 60 ಅಂಕ ಗಳಿಸಿ ಭಾರತದ ಅಂಗದ್ ವೀರ್ ಸಿಂಗ್ ಅವರ ವಿಶ್ವ ದಾಖಲೆಯೊಂದಿಗೆ ಸಮಬಲ ಸಾಧಿಸಿ ಚಿನ್ನದ ಪದಕ ಪಡೆದರು. ಕತಾರ್‌ನ ನಾಸರ್ ಅಲ್-ಅತ್ತಿಯಾ 46 ಅಂಕಗಳೊಂದಿಗೆ ಕಂಚು ಪಡೆದರು. 1974ರಲ್ಲಿ ಟೆಹ್ರಾನ್‌ನಲ್ಲಿ ನಡೆದ ಆವೃತ್ತಿಯಲ್ಲಿ ಡಾ. ಕರ್ಣಿ ಸಿಂಗ್ ಕಂಚಿನ ಪದಕ ಗೆದ್ದ ನಂತರ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಭಾರತ ಗೆದ್ದ ಎರಡನೇ ಪದಕ ಇದಾಗಿದೆ.

  • 🥈SILVER IN SKEET MEN⚡

    🇮🇳 Shooter and #KheloIndiaAthlete Anantjeet adds another SILVER medal in India's medal haul🌟🎯

    This is the 1️⃣st time ever in the history of the Asian Games that India has won a silver in this event. Our shooters' combined excellence is making India… pic.twitter.com/5178kedO1u

    — SAI Media (@Media_SAI) September 27, 2023 " class="align-text-top noRightClick twitterSection" data=" ">

ಇದು ಹ್ಯಾಂಗ್‌ಝೌ ಕೂಟದಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ 12 ನೇ ಪದಕವಾಗಿದೆ. 2018 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್​ನಲ್ಲಿ ಒಂಬತ್ತು ಪದಕಗಳನ್ನು ಗೆದ್ದುಕೊಂಡಿತ್ತು. ಪಿಸ್ತೂಲ್ ಶೂಟರ್ ಇಶಾ ಸಿಂಗ್ 25 ಮೀ. ಮಹಿಳೆಯರ ಪಿಸ್ತೂಲ್ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದರು. ಒಟ್ಟು 34 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡರು. 38 ಅಂಕ ಗಳಿಸಿದ ಚೀನಾದ ರುಯಿ ಲಿಯು ಚಿನ್ನದ ಪದಕ ಪಡೆದರು. 29 ಅಂಕಗಳೊಂದಿಗೆ ದಕ್ಷಿಣ ಕೊರಿಯಾದ ಜಿಯಿನ್ ಯಾಂಗ್ ಕಂಚಿನ ಪದಕ ಪಡೆದರು. ಇಶಾ ಸಿಂಗ್ ಅವರು ಕೇವಲ 21 ಅಂಕಗಳೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡರು.

ಇದಕ್ಕೂ ಮುನ್ನ ಅಂಗದ್ ವೀರ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಅವರ ಪುರುಷರ ಸ್ಕೀಟ್ ತಂಡ ಬುಧವಾರ ಕಂಚಿನ ಪದಕ ಗೆದ್ದುಕೊಂಡಿತು. 355 ಅಂಕಗಳೊಂದಿಗೆ ಭಾರತ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿತು. 362 ಅಂಕಗಳೊಂದಿಗೆ ಚೀನಾ ಚಿನ್ನದ ಪದಕ ಮತ್ತು 359 ಅಂಕಗಳೊಂದಿಗೆ ಕತಾರ್ ಬೆಳ್ಳಿ ಪದಕವನ್ನು ಖಚಿತಪಡಿಸಿತು.

ವಿಷ್ಣು ಸರವಣನ್ ಕಂಚಿನ ಸಾಧನೆ: ಒಲಿಂಪಿಯನ್ ವಿಷ್ಣು ಸರವಣನ್ ಪುರುಷರ ಡಿಂಗಿ ಐಎಲ್‌ಸಿಎ 7ರಲ್ಲಿ 34 ಅಂಕ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ. ಕೊರಿಯಾದ ಹಾ ಜೀಮಿನ್ 33 ಬೆಳ್ಳಿ ಗೆದ್ದರೆ, ಸಿಂಗಾಪುರದ ಲೊ ಜುನ್ ಹಾನ್ ರಿಯಾನ್ 26 ಚಿನ್ನ ಪಡೆದರು. ಮತ್ತೊಂದೆಡೆ, ನೇತ್ರಾ ಕುಮನನಾ ನಾಲ್ಕನೇ ಮಹಿಳಾ ಸಿಂಗಲ್ ಡಿಂಗಿ ಐಎಲ್​ಸಿಎ6 (ILCA6) ಅನ್ನು ಮುಗಿಸಿದರು.

  • MEDAL RUSH IN SHOOTING CONTINUES FOR 🇮🇳

    Kudos to Anant Jeet Singh Naruka, Gurjoat Singh Khangura, and Angad Vir Singh Bajwa on bagging a well-deserved 🥉in the Men's Skeet Team event, with a collective score of 355 points!

    With unwavering focus, discipline, and precision, they… pic.twitter.com/n8gnx5Gyxe

    — Anurag Thakur (@ianuragthakur) September 27, 2023 " class="align-text-top noRightClick twitterSection" data=" ">

ಮಂಗಳವಾರ ನಡೆದ ಸ್ಪರ್ಧೆಯಲ್ಲಿ 17 ವರ್ಷದ ನೇಹಾ ಠಾಕೂರ್ ಡಿಂಗಿ ಐಎಲ್​ಸಿಎ4 (ILCA4) ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದರು ಮತ್ತು ಆರ್ಮಿಮ್ಯಾನ್ ಇಯಾಬಾದ್ ಅಲಿ ಕಂಚಿನ ಪುರುಷರ RS:X ಸ್ಪರ್ಧೆಯನ್ನು ಪಡೆದರು. ಭಾರತ ಇದುವರೆಗೆ ಸೇಲಿಂಗ್ ನಲ್ಲಿ ಒಂದು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ ಮೂರು ಪದಕಗಳನ್ನು ಗೆದ್ದಿದೆ. ಇಲ್ಲಿಯವರೆಗೆ, ಭಾರತ ಐದು ಚಿನ್ನ, ಬೆಳ್ಳಿ ಮತ್ತು 10 ಕಂಚಿನೊಂದಿಗೆ 20 ಪದಕಗಳನ್ನು ಗೆದ್ದಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್: 50 ಮೀಟರ್ ರೈಫಲ್​ನಲ್ಲಿ ಸಿಫ್ಟ್ ಕೌರ್ ಸಮ್ರಾಗೆ ವಿಶ್ವದಾಖಲೆಯ ಚಿನ್ನ; ಆಶಿ ಚೌಕ್ಸೆಗೆ ಕಂಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.