ಹಾಂಗ್‌ಝೌ (ಚೀನಾ): ಚೀನಾದ ಹಾಂಗ್‌ಝೌ ನಗರದಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿದ್ದು, ಭಾರತಕ್ಕೆ ಇಂದು ಮೂರನೇ ಪದಕ ಒಲಿದು ಬಂದಿದೆ. ವಿಷ್ಣು ಸರವಣನ್ ಪುರುಷರ ಡಿಂಗಿ - ILCA7 ಈವೆಂಟ್‌ನಲ್ಲಿ 34 ಸ್ಕೋರ್‌ನೊಂದಿಗೆ ಕಂಚು ಗೆದ್ದಿದ್ದಾರೆ. ಇದಕ್ಕೂ ಮುನ್ನ ಪುರುಷರ ವಿಂಡ್‌ಸರ್ಫರ್ ಆರ್‌ಎಸ್: ಎಕ್ಸ್ ಈವೆಂಟ್‌ನಲ್ಲಿ 52 ಸ್ಕೋರ್‌ನೊಂದಿಗೆ ಭಾರತ ಮೂರನೇ ಸ್ಥಾನ ಪಡೆದಿದ್ದು, ಇಬಾದ್ ಅಲಿ ಕಂಚಿನ ಪದಕ ತಂದುಕೊಟ್ಟರು. ಏಷ್ಯನ್ ಕ್ರೀಡಾಕೂಟದ ಮೂರನೇ ದಿನ ಭಾರತಕ್ಕೆ ಇದು ಎರಡನೇ ಪದಕವಾಗಿದೆ.
ಇದಕ್ಕೂ ಮುನ್ನ ಸೈಲಿಂಗ್ ವಿಭಾಗದಲ್ಲಿ ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನಾವಿಕ ನೇಹಾ ಠಾಕೂರ್ 11 ರೇಸ್ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಗೆದ್ದಿದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕಕ್ಕೆ ಕೊರಳೊಡ್ಡಿದರೆ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿಗೆ ತೃಪ್ತಿಪಟ್ಟುಕೊಂಡರು.
-
🇮🇳's Eabad Ali has set sail to success at the #AsianGames2022!🥉⛵
— SAI Media (@Media_SAI) September 26, 2023 " class="align-text-top noRightClick twitterSection" data="
He's won a BRONZE MEDAL in the RS:X Men category, showcasing his remarkable windsurfing skills. Let's celebrate this incredible achievement and the winds of victory in his favor! 🏆🇮🇳
Kudos, Champ!!… pic.twitter.com/NbIHGwGGog
">🇮🇳's Eabad Ali has set sail to success at the #AsianGames2022!🥉⛵
— SAI Media (@Media_SAI) September 26, 2023
He's won a BRONZE MEDAL in the RS:X Men category, showcasing his remarkable windsurfing skills. Let's celebrate this incredible achievement and the winds of victory in his favor! 🏆🇮🇳
Kudos, Champ!!… pic.twitter.com/NbIHGwGGog🇮🇳's Eabad Ali has set sail to success at the #AsianGames2022!🥉⛵
— SAI Media (@Media_SAI) September 26, 2023
He's won a BRONZE MEDAL in the RS:X Men category, showcasing his remarkable windsurfing skills. Let's celebrate this incredible achievement and the winds of victory in his favor! 🏆🇮🇳
Kudos, Champ!!… pic.twitter.com/NbIHGwGGog
ಪುರುಷರ ಹಾಕಿ ಪಂದ್ಯದಲ್ಲಿ ಭಾರತ ತಂಡ ಇಂದು ಸಿಂಗಾಪುರವನ್ನು ಮಣಿಸಿದೆ. ಬಾಕ್ಸಿಂಗ್‌ನಲ್ಲಿ ಸಚಿನ್ ಸಿವಾಚ್ 57 ಕೆ.ಜಿ ವಿಭಾಗದಲ್ಲಿ ಅಭಿಯಾನ ಆರಂಭಿಸಲಿದ್ದಾರೆ. ಭವಾನಿ ದೇವಿ ಫೆನ್ಸಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಕ್ವಾರ್ಟರ್ ಫೈನಲ್ನಲ್ಲಿ ನಿರಾಸೆ ಮೂಡಿಸಿದರು. ಸ್ಕ್ವಾಷ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿತು.
ಹಾಕಿಯಲ್ಲಿ ಪ್ರಚಂಡ ಜಯಭೇರಿ: ಹಾಕಿಯಲ್ಲಿ ಭಾರತವು ಸಿಂಗಾಪುರ ವಿರುದ್ಧ 16-1 ಗೋಲುಗಳೊಂದಿಗೆ ಅಮೋಘ ಜಯಭೇರಿ ಬಾರಿಸಿತು. ಮೊದಲ ಪಂದ್ಯದಲ್ಲಿ ತಂಡವು ಉಜ್ಬೇಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತ್ತು. 16-0 ಅಂತರದ ಭರ್ಜರಿ ಜಯ ದಾಖಲಿಸಿದ ಭಾರತ ತಂಡ ಇಂದು ಸಿಂಗಾಪುರ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡಿದೆ.
-
🥈🌊 Sailing Success!
— SAI Media (@Media_SAI) September 26, 2023 " class="align-text-top noRightClick twitterSection" data="
Neha Thakur, representing India in the Girl's Dinghy - ILCA 4 category, secured the SILVER MEDAL at the #AsianGames2022 after 11 races⛵
This is India's 1️⃣st medal in Sailing🤩👍
Her consistent performance throughout the competition has earned her a… pic.twitter.com/0ybargTEXI
">🥈🌊 Sailing Success!
— SAI Media (@Media_SAI) September 26, 2023
Neha Thakur, representing India in the Girl's Dinghy - ILCA 4 category, secured the SILVER MEDAL at the #AsianGames2022 after 11 races⛵
This is India's 1️⃣st medal in Sailing🤩👍
Her consistent performance throughout the competition has earned her a… pic.twitter.com/0ybargTEXI🥈🌊 Sailing Success!
— SAI Media (@Media_SAI) September 26, 2023
Neha Thakur, representing India in the Girl's Dinghy - ILCA 4 category, secured the SILVER MEDAL at the #AsianGames2022 after 11 races⛵
This is India's 1️⃣st medal in Sailing🤩👍
Her consistent performance throughout the competition has earned her a… pic.twitter.com/0ybargTEXI
ಫೆನ್ಸಿಂಗ್‌ನಲ್ಲಿ ಭವಾನಿಗೆ ಸೋಲು: ಭಾರತದ ಫೆನ್ಸರ್ ಭವಾನಿ ದೇವಿ ಅಜೇಯ ದಾಖಲೆಯೊಂದಿಗೆ ಗುಂಪು ಹಂತ ಪೂರ್ಣಗೊಳಿಸಿದ್ದರು. ತಮ್ಮ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶದ ರೊಕ್ಸಾನಾ ಖತುನ್ ಅವರನ್ನು 5-1 ರಿಂದ ಪರಾಭವಗೊಳಿಸಿದರು. ಈ ಗೆಲುವಿನ ಮೂಲಕ ನಾಕೌಟ್ ಹಂತಕ್ಕೆ ಅಗ್ರ ಶ್ರೇಯಾಂಕಿತೆಯಾಗಿ ಕಾಲಿಟ್ಟಿದ್ದರು. ಇದೀಗ 8ನೇ ಸುತ್ತಿನಲ್ಲಿ ಚೀನಾ ಸ್ಪರ್ಧೆಯೆದುರು ಸೋಲು ಕಂಡು ಪದಕ ರೇಸ್‌ನಿಂದ ಹೊರಬಿದ್ದರು.
ಶೂಟಿಂಗ್ನಲ್ಲಿ ಕಂಚಿಗಾಗಿ ಹೋರಾಟ: ದಿವ್ಯಾಂಶ್-ರಮಿತಾ ಎರಡನೇ ಕಂಚಿನ ಪದಕಕ್ಕೆ ಅರ್ಹತೆ ಪಡೆದಿದ್ದಾರೆ. ಈ ಜೋಡಿ ಅರ್ಹತಾ ಸುತ್ತಿನಲ್ಲಿ 628.2 ಅಂಕ ಗಳಿಸಿ ಆರನೇ ಸ್ಥಾನ ಪಡೆಯಿತು. ಪದಕ ಸುತ್ತಿಗೆ ಪ್ರವೇಶಿಸಲು ಅಂತಿಮ ಸ್ಥಾನ ತನ್ನದಾಗಿಸಿಕೊಂಡಿತು. ಭಾರತವು ಕಂಚಿನ ಪದಕಕ್ಕಾಗಿ ರಿಪಬ್ಲಿಕ್ ಕೊರಿಯಾ ತಂಡವನ್ನು ಎದುರಿಸಲಿದ್ದು, ಪಂದ್ಯ ಬೆಳಗ್ಗೆ 8:40ಕ್ಕೆ ಆರಂಭವಾಗಲಿದೆ.
ಸ್ಕ್ವಾಷ್‌ನಲ್ಲಿ ಗೆಲುವು: ಪಾಕಿಸ್ತಾನ ವಿರುದ್ಧದ ಸ್ಕ್ವಾಷ್‌ನಲ್ಲಿ ಭಾರತ ಕೂಡ ಶುಭಾರಂಭ ಮಾಡಿದೆ. ಅನಂತ್ ಸಿಂಗ್ ಮೊದಲ ಪಂದ್ಯವನ್ನು 3-0 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಸಿಂಗಾಪುರ ಮಟ್ಟ 'ಹಾಕಿ'ದ ಭಾರತ, ಫೆನ್ಸಿಂಗ್‌ನಲ್ಲಿ ನಿರಾಸೆ ಮೂಡಿಸಿದ ಭವಾನಿ