ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯನ್ ಗೇಮ್ಸ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಇಂದು ಮೊದಲ ಚಿನ್ನದ ಸಾಧನೆ ಮಾಡಿದೆ. ಶೂಟಿಂಗ್ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ರುದ್ರಾಂಶ್, ಐಶ್ವರ್ಯ್ ಮತ್ತು ದಿವ್ಯಾಂಶ್ ಚಿನ್ನ ಗೆದ್ದರು. ಇದೇ ಆಟದಲ್ಲಿ ಈ ಮೂವರು ಹೊಸ ವಿಶ್ವದಾಖಲೆಯನ್ನೂ ನಿರ್ಮಿಸಿದರು.
ಶೂಟಿಂಗ್: 25 ಮೀಟರ್ ಪುರುಷರ ರ್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ವಿಜಯವೀರ್ ಸಿಧು, ಅನೀಶ್ ಮತ್ತು ಆದರ್ಶ್ ಸಿಂಗ್ ಅವರಿದ್ದ ತಂಡ 1718 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಇನ್ನು ವಿಜಯವೀರ್ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದು, ಭಾರತ ಮತ್ತೊಂದು ಪದಕದ ನಿರೀಕ್ಷೆಯಲ್ಲಿದೆ.
-
Bronze with Incredible precision🎯
— SAI Media (@Media_SAI) September 25, 2023 " class="align-text-top noRightClick twitterSection" data="
Our 25m Rapid Fire Pistol Men's Team, comprising @anish__bhanwala, @VijayveerSidhu, and Adarsh Singh, has clinched the bronze 🥉medal. Let's celebrate this outstanding achievement! 🌟🎯
Kudos, guys🫡💪🏻 #Cheer4India#Hallabol#JeetegaBharat… pic.twitter.com/zXdGev6JKY
">Bronze with Incredible precision🎯
— SAI Media (@Media_SAI) September 25, 2023
Our 25m Rapid Fire Pistol Men's Team, comprising @anish__bhanwala, @VijayveerSidhu, and Adarsh Singh, has clinched the bronze 🥉medal. Let's celebrate this outstanding achievement! 🌟🎯
Kudos, guys🫡💪🏻 #Cheer4India#Hallabol#JeetegaBharat… pic.twitter.com/zXdGev6JKYBronze with Incredible precision🎯
— SAI Media (@Media_SAI) September 25, 2023
Our 25m Rapid Fire Pistol Men's Team, comprising @anish__bhanwala, @VijayveerSidhu, and Adarsh Singh, has clinched the bronze 🥉medal. Let's celebrate this outstanding achievement! 🌟🎯
Kudos, guys🫡💪🏻 #Cheer4India#Hallabol#JeetegaBharat… pic.twitter.com/zXdGev6JKY
ಶೂಟಿಂಗ್- ವೈಯಕ್ತಿಕ ವಿಭಾಗದಲ್ಲಿ ಕಂಚು: ಇದೀಗ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕ ದೊರೆತಿದೆ. 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೂಲಕ ಭಾರತ 8ನೇ ಪದಕ ಸಾಧನೆ ಮಾಡಿದೆ. ರುದ್ರಾಂಶ್ ಪಾಟೀಲ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಕ್ರೀಡಾಕೂಟದಲ್ಲಿ ಚೀನಾ ಚಿನ್ನ ಮತ್ತು ದಕ್ಷಿಣ ಕೊರಿಯಾ ಬೆಳ್ಳಿ ಸಾಧನೆ ತೋರಿದೆ.
ರೋಯಿಂಗ್‌ನಲ್ಲಿ ಕಂಚು: ರೋಯಿಂಗ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಪುರುಷರ 4 ವಿಭಾಗದಲ್ಲಿ ಜಸ್ವಿಂದರ್, ಭೀಮ್, ಪುನೀತ್ ಮತ್ತು ಆಶಿಶ್ 6:10.81 ಸಮಯದಲ್ಲಿ 3ನೇ ತಂಡವಾಗಿ ಗುರಿ ತಲುಪಿದರು.
ಮಹಿಳಾ ಟಿ20ಯಲ್ಲಿ ಚಿನ್ನ ನಿರೀಕ್ಷೆ: ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಭಾರತ ಇಂದು ಎರಡನೇ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದ್ದು, ಕೆಲವೇ ಕ್ಷಣಗಳಲ್ಲಿ ಪಂದ್ಯ ಶುರುವಾಗಲಿದೆ.
ಏಷ್ಯನ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಸ್ಕಲ್ಸ್ ಸ್ಪರ್ಧೆಯ ಫೈನಲ್‌ನಲ್ಲಿ ಭಾರತದ ರೋವರ್ ಬಲರಾಜ್ ಪನ್ವಾರ್ ನಾಲ್ಕನೇ ಸ್ಥಾನ ಪಡೆದರು. ಚಿನ್ನದ ಪದಕ ಚೀನಾದ ಲಿಯಾಂಗ್ ಜಾಂಗ್ (6:57.06) ಮತ್ತು ರ್ಯುತಾ ಅರಕಾವಾ (6:59.79) ಬೆಳ್ಳಿ ಗೆದ್ದರು. ಕಂಚು ಹಾಂಕಾಂಗ್‌ನ ಚುನ್ ಹಿನ್ ಚಿಯು (7:00.55) ಪಾಲಾಯಿತು.
ಟೆನಿಸ್ ಪಂದ್ಯಾರಂಭಕ್ಕೂ ಮುನ್ನ ಭಾರತಕ್ಕೆ ವಾಕ್ಓವರ್ ಅವಕಾಶ ಸಿಕ್ಕಿದೆ. ಎರಡನೇ ಸುತ್ತಿನಲ್ಲಿ ರಾಮ್‌ಕುಮಾರ್ ರಾಮನಾಥನ್ ಅವರು ತಮ್ಮ ಎದುರಾಳಿ ತಜಕಿಸ್ತಾನದ ಸುನಾತುಲೊ ಇಸ್ರೈಲೋವ್ ವಿರುದ್ಧ ಸೆಣಸಬೇಕಿತ್ತು. ಆದ್ರೆ ಸುನಾತುಲೊ ಇಸ್ರೈಲೋವ್ ಪಂದ್ಯಾರಂಭಕ್ಕೂ ಮುನ್ನ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿಯಾದರು.
ಈಜು ಸ್ಪರ್ಧೆಯ 100ಮೀ ಪುರುಷರ ಬ್ರೆಸ್ಟ್‌ಸ್ಟ್ರೋಕ್ ಫೈನಲ್‌ನಲ್ಲಿ 1:01:98 ಟೈಮಿಂಗ್‌ನೊಂದಿಗೆ ಹೀಟ್ಸ್‌ನಲ್ಲಿ ಭಾರತದ ಲಿಖಿತ್ ಸೆಲ್ವರಾಜ್ 8ನೇ ಸ್ಥಾನ ಪಡೆದರು. ಈ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿದ್ದು, ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ದಾಖಲೆಯ ಚಿನ್ನ!