ETV Bharat / sports

Asian Games 2023: ಆರ್ಚರಿಯಲ್ಲಿ ಜ್ಯೋತಿ ಓಜಸ್ ಅಚ್ಚರಿ ಪ್ರದರ್ಶನ .. ಭಾರತಕ್ಕೆ ಒಲಿದು ಬಂದ ಚಿನ್ನ..

Asian Games 2023: ಬೆಳ್ಳಂಬೆಳಗ್ಗೆ ಭಾರತ ಪದಕಗಳ ಖಾತೆ ತೆಗೆದಿದೆ. ಆರ್ಚರಿ ವಿಭಾಗದಲ್ಲಲಿ ಭಾರತಕ್ಕೆ ಚಿನ್ನ ಲಭಿಸಿದೆ. ಇದಕ್ಕೂ ಮೊದಲು ರೇಸ್​ವಾಕ್​ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು ಒಲಿದಿತ್ತು. ಭಾರತದ ಒಟ್ಟು ಪದಕಗಳ ಸಂಖ್ಯೆ 71ಕ್ಕೇ ಏರಿಕೆ ಆಗಿದೆ. ಈ ಮೂಲಕ ಭಾರತ ಇತಿಹಾಸ ಬರೆದಿದೆ.

Asian Games 2023  India got bronze medal in Racewalk  India got bronze medal  ರೇಸ್​ವಾಕ್​ ಸ್ಪರ್ಧೆಯಲ್ಲಿ ರಾಮ್ ರಾಣಿ ಮಿಂಚು  ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು  ಬೆಳ್ಳಂಬೆಳಗ್ಗೆ ಭಾರತ ಪದಕಗಳ ಖಾತೆ  ರೇಸ್​ವಾಕ್​ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚು  11ನೇ ದಿನದ ಪದಕ ಪಟ್ಟಿ  ರಾಮ್ ಬಾಬು ಮತ್ತು ಮಂಜು ರಾಣಿ  ರೇಸ್​ವಾಕ್​ ಮಿಶ್ರಿತ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ
ಆರ್ಚರಿಯಲ್ಲಿ ಜ್ಯೋತಿ ಓಜಸ್ ಅಚ್ಚರಿ ಪ್ರದರ್ಶನ
author img

By ETV Bharat Karnataka Team

Published : Oct 4, 2023, 8:28 AM IST

Updated : Oct 4, 2023, 9:36 AM IST

ಹ್ಯಾಂಗ್​ಝೌ, ಚೀನಾ: 11ನೇ ದಿನದ ಪದಕ ಪಟ್ಟಿಯಲ್ಲಿ ಭಾರತ ಖಾತೆ ತೆರೆದಿದೆ. ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ಜ್ಯೋತಿ ಸುರೇಖಾ ವೆನ್ನಂ ಮತ್ತು ಓಜಸ್ ಡಿಯೋಟಾಲೆ ಜೋಡಿ ಭಾರತಕ್ಕೆ ಈ ಚಿನ್ನ ಗೆದ್ದುಕೊಟ್ಟಿತು. ಭಾರತದ ಜೋಡಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಿತು. ಈ ಪಂದ್ಯವನ್ನು ಭಾರತ 159-158 ಅಂಕಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಭಾರತ 71 ಪದಕಗಳನ್ನು ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.

  • Hangzhou Asian Games: India achieve its best-ever medal tally by winning 71 medals at the Asian Games, surpassing the previous best of 70 medals.

    (Pic Source: SAI) pic.twitter.com/VclK7Fnc9T

    — ANI (@ANI) October 4, 2023 " class="align-text-top noRightClick twitterSection" data=" ">

ರೇಸ್​ವಾಕ್​ ಮಿಶ್ರಿತ ಸ್ಪರ್ಧೆಯಲ್ಲಿ ಕಂಚು: ರಾಮ್ ಬಾಬು ಮತ್ತು ಮಂಜು ರಾಣಿ 35 ಕಿಮೀ ರೇಸ್​ವಾಕ್​ ಮಿಶ್ರಿತ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಗುರಿ ಮುಟ್ಟಲು ಅವರಿಬ್ಬರ ಜೋಡಿ 5 ಗಂಟೆ 51 ನಿಮಿಷಗಳು ಮತ್ತು 14 ಸೆಕೆಂಡುಗಳನ್ನು ತೆಗೆದುಕೊಂಡರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. 2018 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 70 ಪದಕಗಳನ್ನು ಗೆದ್ದಿರುವುದು ಗಮನಾರ್ಹ.. ಈ ಮೂಲಕ ಭಾರತ ತನ್ನ ಸಾಧನೆಯನ್ನು ಸುಧಾರಿಸಿಕೊಂಡಿದೆ. ಈ ಬಾರಿ ಎಲ್ಲ ಏಷ್ಯಾಡ್​​​ಗಳಿಗಿಂತ ಹೆಚ್ಚಿನ ಪದಕಗಳನ್ನು ಪಡೆದುಕೊಂಡು ಇತಿಹಾಸ ಬರೆಯಲಾಗಿದೆ.

  • 🥇🏹 𝗔 𝗚𝗢𝗟𝗗 𝗪𝗜𝗡 𝗜𝗡 𝗔𝗥𝗖𝗛𝗘𝗥𝗬! 🏹🥇#KheloIndiaAthletes Ojas and @VJSurekha have hit the bullseye and clinched India's FIRST GOLD in archery, defeating Korea by a scoreline of 159 - 158! 🇮🇳🌟

    Their impeccable skill and teamwork have earned them the ultimate… pic.twitter.com/eMmhxU6W7b

    — SAI Media (@Media_SAI) October 4, 2023 " class="align-text-top noRightClick twitterSection" data=" ">

ಈ ಹಿಂದಿನ ದಾಖಲೆಯನ್ನು ಭಾರತ ಮುರಿಯುವ ಸಾಧ್ಯತೆಗಳಿವೆ. ಇನ್ನೂ ಹಲವು ಪ್ರಮುಖ ಸ್ಪರ್ಧೆಗಳು ಇರುವ ಹಿನ್ನೆಲೆಯಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಬರುವ ನಿರೀಕ್ಷೆ ಇದೆ. ಭಾರತ ಈ ಬಾರಿಯ ಏಷ್ಯಾಡ್​ನಲ್ಲಿ 100 ಪದಕಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆ. ಮುಂದಿನ ಎಲ್ಲ ಪಂದ್ಯಗಳಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಈ ಗುರಿ ತಲುಪುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಲಾಗಿದೆ.

  • 🥉BRONZE IN RACEWALK🥉

    🇮🇳 Athletes Ram Baboo and Manju Rani have secured a BRONZE MEDAL in the 35KM Racewalk (mixed team) with a combined timing of 5:51:14. at #AsianGames2022! 🏃🏻‍♀️🏃🏻

    Their journey has been one of sweat and sheer perseverance⚡💥 Let's cheer out loud for our… pic.twitter.com/lqPQkZy2aX

ಮಗಳ ಸಾಧನೆಗೆ ಪೋಷಕರ ಹರ್ಷ: 19ನೇ ಏಷ್ಯನ್ ಗೇಮ್ಸ್‌ನ ನಿನ್ನೆಯ ಪಂದ್ಯದಲ್ಲಿ ಪಾರುಲ್ ಚೌಧರಿ 5000 ಮೀಟರ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಭಾರತದ ಅಥ್ಲೀಟ್ ಪಾರುಲ್ ಚೌಧರಿ ಮಹಿಳೆಯರ 5000 ಮೀ ಫೈನಲ್‌ನಲ್ಲಿ 15: 14.75 ಸೆಕೆಂಡ್‌ ಸಮಯದಲ್ಲಿ ಮುಗಿಸಿ ಏಷ್ಯನ್ ಗೇಮ್ಸ್ 2023ರಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದರು. ಮಗಳ ಈ ಸಾಧನೆಗೆ ಅವರ ಪೋಷಕರು ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 5000 ಮೀಟರ್ ಬೆಳ್ಳಿ ಗೆದ್ದ 28 ವರ್ಷದ ಪಾರುಲ್, ಜಪಾನ್‌ನ ರಿರಿಕಾವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು. ಸೋಮವಾರ ನಡೆದ ಮಹಿಳೆಯರ 3000ಮೀ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಗೆದ್ದ ನಂತರ ಪಾರುಲ್ ಚೌಧರಿ ಅವರಿಗೆ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಇದು ಎರಡನೇ ಪದಕವಾಗಿದೆ.

ಓದಿ: ಜಾವೆಲಿನ್ ಥ್ರೋ: ಚಿನ್ನ ಗೆದ್ದ ಅನ್ನು ರಾಣಿ, ಭಾರತಕ್ಕೆ 15ನೇ ಬಂಗಾರ

Last Updated : Oct 4, 2023, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.