ಹ್ಯಾಂಗ್‌ಝೌ (ಚೀನಾ): ಏಷ್ಯಾಡ್ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. 9ನೇ ದಿನವಾದ ಇಂದು ರೋರಲ್ ಸ್ಕೇಟಿಂಗ್, ಟೇಬಲ್ ಟೆನಿಸ್, ಸ್ಟೀಪಲ್‌ಚೇಸ್‌ನಲ್ಲಿ ಪದಕಗಳು ಬಂದಿವೆ. ಸಂಜೆ ನಡೆದ ಸ್ಪರ್ಧೆಯಲ್ಲಿ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಆನ್ಸಿ ಸೋಜನ್ ಎಡಪ್ಪಿಳ್ಳಿ ಮತ್ತು 4x400 ಮೀ ಮಿಶ್ರ ತಂಡ ಬೆಳ್ಳಿ ಗೆದ್ದುಕೊಂಡಿತು.
-
Another #Silver from #Athletics 🥳
— SAI Media (@Media_SAI) October 2, 2023 " class="align-text-top noRightClick twitterSection" data="
Ancy Sojan Edappilly leaps to a remarkable🥈at #AsianGames2022
Delivering her personal best, the fiery athlete produced a jump of 6.63 m in her 5⃣th attempt!
The girls of the Indian Athletics team are doing wonders & we couldn't be prouder… pic.twitter.com/wKq6Z6pVUB
">Another #Silver from #Athletics 🥳
— SAI Media (@Media_SAI) October 2, 2023
Ancy Sojan Edappilly leaps to a remarkable🥈at #AsianGames2022
Delivering her personal best, the fiery athlete produced a jump of 6.63 m in her 5⃣th attempt!
The girls of the Indian Athletics team are doing wonders & we couldn't be prouder… pic.twitter.com/wKq6Z6pVUBAnother #Silver from #Athletics 🥳
— SAI Media (@Media_SAI) October 2, 2023
Ancy Sojan Edappilly leaps to a remarkable🥈at #AsianGames2022
Delivering her personal best, the fiery athlete produced a jump of 6.63 m in her 5⃣th attempt!
The girls of the Indian Athletics team are doing wonders & we couldn't be prouder… pic.twitter.com/wKq6Z6pVUB
ಆನ್ಸಿ ಸೋಜನ್ ಎಡಪ್ಪಿಳ್ಳಿ ತಮ್ಮ ಚೊಚ್ಚಲ ಏಷ್ಯನ್ ಗೇಮ್ಸ್ ಮಹಿಳೆಯರ ಲಾಂಗ್ ಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಐದನೇ ಪ್ರಯತ್ನದಲ್ಲಿ 6.63 ಮೀ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಶೈಲಿ ಸಿಂಗ್ 6.48 ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.
ಮಹಮ್ಮದ್ ಅಜ್ಮಲ್ ವರಿಯತ್ತೋಡಿ, ವಿತ್ಯಾ ರಾಮರಾಜ್, ರಾಜೇಶ್ ರಮೇಶ್ ಮತ್ತು ಶುಭಾ ವೆಂಕಟೇಶನ್ 4x400 ಮೀಟರ್ ದೂರವನ್ನು ಮಿಶ್ರ ತಂಡ ರಿಲೇಯಲ್ಲಿ 3:14.34 ಸೆ. ಸಮಯದಲ್ಲಿ ಕ್ರಮಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡವನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಬೆಳ್ಳಿ ಪದಕ ಭಾರತದ ಪಾಲಾಯಿತು.
-
🥈it is for the the Indian 4X400 m Mixed Relay Team at #AsianGames2022
— SAI Media (@Media_SAI) October 2, 2023 " class="align-text-top noRightClick twitterSection" data="
The quartet of Muhammed Ajmal, Ramraj Vithya, Ramesh Rajesh & #KheloIndia Athlete Venkatesan Subha clocked a new National Record timing of 3:14.34 to grab the🥈
Many congratulations to the team! Well… pic.twitter.com/KVcC6b4kR0
">🥈it is for the the Indian 4X400 m Mixed Relay Team at #AsianGames2022
— SAI Media (@Media_SAI) October 2, 2023
The quartet of Muhammed Ajmal, Ramraj Vithya, Ramesh Rajesh & #KheloIndia Athlete Venkatesan Subha clocked a new National Record timing of 3:14.34 to grab the🥈
Many congratulations to the team! Well… pic.twitter.com/KVcC6b4kR0🥈it is for the the Indian 4X400 m Mixed Relay Team at #AsianGames2022
— SAI Media (@Media_SAI) October 2, 2023
The quartet of Muhammed Ajmal, Ramraj Vithya, Ramesh Rajesh & #KheloIndia Athlete Venkatesan Subha clocked a new National Record timing of 3:14.34 to grab the🥈
Many congratulations to the team! Well… pic.twitter.com/KVcC6b4kR0
ಹಾಕಿ-ಸೆಮಿಫೈನಲ್ ಪ್ರವೇಶಿಸಿದ ಭಾರತ: ಭಾರತದ ಹಾಕಿ ತಂಡ ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಐದು ಪೂಲ್ ಎ ಪಂದ್ಯಗಳನ್ನು ಗೆದ್ದು ತಂಡ ಅಜೇಯವಾಗಿ ಮುಂದುವರೆದಿದೆ. ಇಂದು ನಡೆದ ಅಂತಿಮ ಪೂಲ್ ಎ ಮುಖಾಮುಖಿಯಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಜಯಗಳಿಸಿತು. ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಟೀಂ ಪೂಲ್ ಹಂತದಲ್ಲಿ 58 ಗೋಲ್ ಗಳಿಸಿದ್ದು, ಕೇವಲ ಐದು ಗೋಲುಗಳನ್ನಷ್ಟೇ ಎದುರಾಳಿಗೆ ಬಿಟ್ಟುಕೊಟ್ಟಿತು.
-
Zidd se Junoon ka rasta tai karke #TeamIndia 🇮🇳 ne Semi Final mein apni jagah bana li hai 💪
— Hockey India (@TheHockeyIndia) October 2, 2023 " class="align-text-top noRightClick twitterSection" data="
Next Match:
📆 3rd Oct 7:45 AM IST
India 🇮🇳 Vs Hong Kong China 🇭🇰(Women)
📍Hangzhou, China.
📺 Streaming on Sony LIV and Sony Sports Network.#HockeyIndia #IndiaKaGame #AsianGames… pic.twitter.com/yzn0u3EHjC
">Zidd se Junoon ka rasta tai karke #TeamIndia 🇮🇳 ne Semi Final mein apni jagah bana li hai 💪
— Hockey India (@TheHockeyIndia) October 2, 2023
Next Match:
📆 3rd Oct 7:45 AM IST
India 🇮🇳 Vs Hong Kong China 🇭🇰(Women)
📍Hangzhou, China.
📺 Streaming on Sony LIV and Sony Sports Network.#HockeyIndia #IndiaKaGame #AsianGames… pic.twitter.com/yzn0u3EHjCZidd se Junoon ka rasta tai karke #TeamIndia 🇮🇳 ne Semi Final mein apni jagah bana li hai 💪
— Hockey India (@TheHockeyIndia) October 2, 2023
Next Match:
📆 3rd Oct 7:45 AM IST
India 🇮🇳 Vs Hong Kong China 🇭🇰(Women)
📍Hangzhou, China.
📺 Streaming on Sony LIV and Sony Sports Network.#HockeyIndia #IndiaKaGame #AsianGames… pic.twitter.com/yzn0u3EHjC
ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಹ್ಯಾಟ್ರಿಕ್ ಗೋಲು ಗಳಿಸಿದರೆ, ಮನ್‌ದೀಪ್ ಸಿಂಗ್ ಕೂಡ ಮೂರು ಬಾರಿ ಗೋಲು ಹೊಡೆದರು. ಅಭಿಷೇಕ್ ಎರಡು ಗೋಲು ಗಳಿಸಿದರೆ, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ನೀಲಕಂಠ ಶರ್ಮಾ ಮತ್ತು ಅಮಿತ್ ರೋಹಿದಾಸ್ ಕೂಡ ತಲಾ ಒಂದೊಂದು ಗೋಲ್ ಗಳಿಸಿದರು.
ಈ ಗೆಲುವು ಪೂಲ್ ಎ ಯಿಂದ ಭಾರತಕ್ಕೆ ಸೆಮಿಫೈನಲ್ ಅರ್ಹತೆಯನ್ನು ಖಾತ್ರಿಪಡಿಸಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪೂಲ್ ಎನಲ್ಲಿ ಜಪಾನ್ ವಿರುದ್ಧ ಸೋತು ಎರಡನೇ ಸ್ಥಾನ ಪಡೆದು ಪಂದ್ಯಾವಳಿಯಿಂದ ಹೊರಬಿದ್ದಿತು. ಭಾರತ ಬುಧವಾರ ಅಕ್ಟೋಬರ್ 4ರಂದು ಮಧ್ಯಾಹ್ನ 1:30ಕ್ಕೆ (ಭಾರತೀಯ ಕಾಲಮಾನ) ಪೂಲ್ ಬಿ ರನ್ನರ್ ಅಪ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: 3,000 ಮೀ ಸ್ಟೀಪಲ್‌ಚೇಸ್‌ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು; ಆರ್ಚರಿ, ಸ್ಕ್ವಾಷ್ನಲ್ಲಿ ಕ್ವಾರ್ಟರ್ ಫೈನಲ್ಗೆ ಲಗ್ಗೆ