ನವದೆಹಲಿ: ಕೊನೆಯ ದಿನ ವಿಶ್ವನಾಥನ್ ಸುರೇಶ್ ಮತ್ತು ವನ್ಷಜ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತವು ಜೋರ್ಡಾನ್ನಲ್ಲಿ ಎಎಸ್ಬಿಸಿ ಏಷ್ಯನ್ ಯೂತ್ ಅಂಡ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 39 ಪದಕಗಳನ್ನು ಗೆದ್ದು ತವರಿಗೆ ಹಿಂತಿರುಗಿದೆ.
ಸೋಮವಾರ ರಾತ್ರಿ ನಡೆದ 48 ಕೆಜಿ ವಿಭಾಗದ ಫೈನಲ್ನಲ್ಲಿ ಕಿರ್ಗಿಸ್ತಾನದ ಎರ್ಗೆಷೊವ್ ಬೆಕ್ಜಾತ್ ವಿರುದ್ಧ ವಿಶ್ವನಾಥ್ ಜಯ ಸಾಧಿಸಿದರೆ, ವನ್ಷಜ್ 63 ಕೆಜಿ ವಿಭಾಗದಲ್ಲಿ ಉಜ್ಬೆಕಿಸ್ತಾನದ ಜವೋಖಿರ್ ವಿರುದ್ಧ 4-1ರ ಅಂತರದಲ್ಲಿ ಜಯ ಸಾಧಿಸಿದರು. ಇವರಿಬ್ಬರು ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
+92 ಕೆಜಿ ವಿಭಾಗದಲ್ಲಿ ಅಮನ್ ಸಿಂಗ್ ಫೈನಲ್ನಲ್ಲಿ ಸೋಲು 1-4ರಿಂದ ಸ್ಥಳೀಯ ಬಾಕ್ಸರ್ ಸೈಫ್ ಅಲ್-ರವಾಶ್ದಾ ವಿರುದ್ಧ ಸೋಲು ಕಂಡು ಬೆಳ್ಳಿ ಪದಕ ಪಡೆದರು, ಇವರೂ ಕೂಡ ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಪಡೆದಿದ್ದರು.
ಭಾರತದ ಯೂತ್ ಬಾಕ್ಸಿಂಗ್ ತಂಡ 7 ಚಿನ್ನ, 3 ಬೆಳ್ಳಿ ಮತ್ತು 8 ಕಂಚಿನ ಪದಕಗಳ ಸಹಿತ ಒಟ್ಟು 18 ಪದಕಗಳನ್ನು ಪಡೆದು 3ನೇ ಸ್ಥಾನ ಪಡೆಯಿತು. ಉಜ್ಬೆಕಿಸ್ತಾನ ಮತ್ತು ಕಜಕಸ್ತಾನ ಕ್ರಮವಾಗಿ 23 ಮತ್ತು 22 ಪದಕ ಪಡೆದು ಮೊದಲೆರಡು ಸ್ಥಾನ ಪಡೆದುಕೊಂಡಿವೆ.
ಜೂನಿಯರ್ ವಿಭಾಗದಲ್ಲಿ ಭಾರತೀಯ ಬಾಕ್ಸರ್ಗಳು 8 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನ ಪದಕಗಳ ಸಹಿತ 21 ಪದಕಗಳನ್ನು ಗೆದ್ದರು. ಕಳೆದ ದುಬೈ ಆವೃತ್ತಿಯಲ್ಲಿ ಭಾರತ ಜೂನಿಯರ್ ಮತ್ತು ಯೂತ್ ವಿಭಾಗ ಸೇರಿ 39 ಪದಕಗಳನ್ನೇ ಪಡೆದಿತ್ತು. ಆದರೆ ಈ ಬಾರಿ 14ರ ಬದಲು 15 ಚಿನ್ನದ ಪದಕವನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ವಿಕೆಟ್ ಕೀಪರ್