ETV Bharat / sports

ಆರ್ಚರಿ ವಿಶ್ವಕಪ್​ ಮೊದಲ ಹಂತ: ಫೈನಲ್ ಪ್ರವೇಶಿಸಿ ಚಿನ್ನದ ಮೇಲೆ ಕಣ್ಣಿಟ್ಟ ಭಾರತ ಮಹಿಳಾ ತಂಡ

author img

By

Published : Apr 24, 2021, 8:28 PM IST

ಸೆಮಿಫೈನಲ್​ನಲ್ಲಿ ಎಲಿಯಾ ಕ್ಯಾನಲೆಸ್‌, ಇನೆಸ್‌ ಡಿ ವಾಲೆಸ್ಕೊ ಹಾಗೂ ಲೆಯರೆ ಫರ್ನಾಂಡೀಸ್ ಇನ್ಫಾಂಟೆ ಹೊಂದಿದ್ದ ಸ್ಪೇನ್​ ವಿರುದ್ಧ ಭಾರತದ ಮಹಿಳಾ ತಂಡ 6-0ಯಲ್ಲಿ ಮಣಿಸಿ ಫೈನಲ್ ತಲುಪಿತು.

ಅರ್ಚರಿ ವಿಶ್ವಕಪ್
ದೀಪಿಕಾ ಕುಮಾರಿ

ಗ್ವಾಟೆಮಾಲಾ ಸಿಟಿ: ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ ಅವರನ್ನು ಒಳಗೊಂಡ ಭಾರತದ ಮಹಿಳಾ ರಿಕರ್ವ್​ ತಂಡ ಆತಿಥೇಯ ಗ್ವಾಟೆಮಾಲಾ ತಂಡವನ್ನು ಮಣಿಸಿ ಆರ್ಚರಿ ವಿಶ್ವಕಪ್‌ ಮೊದಲ ಹಂತದ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಸೆಮಿಫೈನಲ್​ನಲ್ಲಿ ಎಲಿಯಾ ಕ್ಯಾನಲೆಸ್‌, ಇನೆಸ್‌ ಡಿ ವಾಲೆಸ್ಕೊ ಹಾಗೂ ಲೆಯರೆ ಫರ್ನಾಂಡೀಸ್ ಇನ್ಫಾಂಟೆ ಹೊಂದಿದ್ದ ಸ್ಪೇನ್​ ವಿರುದ್ಧ ಭಾರತದ ಮಹಿಳಾ ತಂಡ 6-0ಯಲ್ಲಿ ಮಣಿಸಿ ಫೈನಲ್ ತಲುಪಿತು.

ಆದರೆ ಭಾರತದ ಪುರುಷರ ತಂಡ ಆತಿಥೇಯ ಸ್ಪೇನ್​ ವಿರುದ್ಧ ಸೋಲು ಕಂಡು ನಿರಾಶೆಯನುಭವಿಸಿದರು. ಎರಡು ತಂಡಗಳ ನಡುವಿನ ಸ್ಪರ್ಧೆ 4-4ರಲ್ಲಿ ಟೈನಲ್ಲಿ ಅಂತ್ಯವಾಗಿತ್ತು. ಆದರೆ ಶೂಟ್-ಆಫ್​ನಲ್ಲಿ ಸ್ಪೇನ್​ 27-26ರಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಮಿಕ್ಸಡ್​ ಡಬಲ್ಸ್​ ಮತ್ತು ಸಿಂಗಲ್ಸ್​ನಲ್ಲಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಆತನು ದಾಸ್ ಮತ್ತು ದೀಪಿಕಾ ಕುಮಾರಿ ಜೋಡಿ ಕಂಚಿನ ಪದಕ ಸುತ್ತಿಗೆ ಪ್ರವೇಶಿಸಿದ್ದಾರೆ. ಅಲ್ಲದೆ ವೈಯಕ್ತಿಕ ವಿಭಾಗಗಳಲ್ಲೂ ಇಬ್ಬರೂ ನಾಲ್ಕರ ಘಟ್ಟ ತಲುಪುವ ಮೂಲಕ ಭಾರತಕ್ಕೆ ಹೆಚ್ಚುವರಿ 3 ಪದಕಗಳನ್ನು ಖಚಿತಪಡಿಸಿದ್ದಾರೆ.

ಇದನ್ನು ಓದಿ:ವಿಶ್ವ ಯುವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ : 7ಭಾರತೀಯ ನಾರಿಯರಿಗೆ ಚಿನ್ನದ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.