ಲಿಮೇರಿಕ್ (ಐರ್ಲೆಂಡ್): ಐರ್ಲೆಂಡ್ನಲ್ಲಿ ನಡೆದ ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್ ಟೂರ್ನಿಯ ಆರ್ಚರಿ ಪಂದ್ಯದ ಪುರುಷರ ವಿಭಾಗದಲ್ಲಿ ಭಾರತದ ಪಾರ್ಥ್ ಸಾಲುಂಖೆ ಚಿನ್ನದ ಪದಕ ಗೆದ್ದು, ದೇಶದ ಮೊದಲ ಯುವ ವಿಶ್ವ ಚಾಂಪಿಯನ್ ಆರ್ಚರಿಯಾಗಿದ್ದಾರೆ.
ಮಹಾರಾಷ್ಟ್ರದ ಸತಾರಾದ 19 ವರ್ಷದ ಯುವಕ ಪಾರ್ಥ್ ಅವರು ಭಾನುವಾರ ಇಲ್ಲಿ ನಡೆದ 21 ವರ್ಷದೊಳಗಿನವರ ಪುರುಷರ ರಿಕರ್ವ್ ವೈಯಕ್ತಿಕ ಫೈನಲ್‌ನಲ್ಲಿ ಕೊರಿಯಾದ ಆಟಗಾರ ಸಾಂಗ್ ಇಂಜುನ್ರನ್ನು ಮಣಿಸಿದರು. ಶ್ರೇಯಾಂಕದ ಸುತ್ತಿನಲ್ಲಿ ಅಗ್ರ ಸ್ಥಾನದಲ್ಲಿದ್ದ ಸಾಲುಂಖೆ ಏಳನೇ ಶ್ರೇಯಾಂಕದ ಸಾಂಗ್ ಇಂಜುನ್ ವಿರುದ್ಧ 7-3 (26-26, 25-28, 28-26, 29-26, 28-26) ಅಂತರದಿಂದ ಮೇಲುಗೈ ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದರು.
-
Parth Salunkhe's PURE DETERMINATION. 👏
— World Archery (@worldarchery) July 9, 2023 " class="align-text-top noRightClick twitterSection" data="
India has the new 2023 World Archery Youth Champion. 🇮🇳🇮🇳🇮🇳#WorldArchery pic.twitter.com/rTDPYDCDBA
">Parth Salunkhe's PURE DETERMINATION. 👏
— World Archery (@worldarchery) July 9, 2023
India has the new 2023 World Archery Youth Champion. 🇮🇳🇮🇳🇮🇳#WorldArchery pic.twitter.com/rTDPYDCDBAParth Salunkhe's PURE DETERMINATION. 👏
— World Archery (@worldarchery) July 9, 2023
India has the new 2023 World Archery Youth Champion. 🇮🇳🇮🇳🇮🇳#WorldArchery pic.twitter.com/rTDPYDCDBA
21 ವರ್ಷದೊಳಗಿನ ಮಹಿಳೆಯರ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಭಾರತದ ಭಾಜಾ ಕೌರ್ ಚೀನಾದ ತೈಪೆಯ ಸು ಹ್ಸಿನ್-ಯು ಅವರನ್ನು 7-1 (28-25, 27-27, 29-25, 30-26) ಅಂತರದಿಂದ ಮಣಿಸಿ ಕಂಚಿನ ಪದಕ ಮುಡಿಗೇರಿಸಿಕೊಂಡರು.
ಈ ಟೂರ್ನಿಯಲ್ಲಿ ಭಾರತವು ಆರು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟಾರೆ 11 ಪದಕಗಳನ್ನು ಜಯಿಸಿ ಪದಕಗಳ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದು ಟೂರ್ನಿ ಅಭಿಯಾನವನ್ನು ಮುಕ್ತಾಯಗೊಳಿಸಿತು. ಒಟ್ಟಾರೆ ಅಂಕಪಟ್ಟಿಯಲ್ಲಿ ಕೊರಿಯಾ ಆರು ಚಿನ್ನ ಮತ್ತು ನಾಲ್ಕು ಬೆಳ್ಳಿ ಪದಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಭಾರತ ಎರಡನೇ ಸ್ಥಾನ ಪಡೆಯಿತು.
ಮಹಿಳೆಯರ ರಿಕರ್ವ್ ವಿಭಾಗದಲ್ಲಿ ದೀಪಿಕಾ ಕುಮಾರಿ 2009 ಮತ್ತು 2011 ರಲ್ಲಿ ಡಕೆತ್ ಯೂತ್ ವರ್ಲ್ಡ್ ಚಾಂಪಿಯನ್ ಆಗಿದ್ದರು. 2019 ಮತ್ತು 2021 ರಲ್ಲಿ ಜಾರ್ಖಂಡ್ ರಾಜ್ಯದ ಕೋಮಲಿಕಾ ಬಾರಿ ಈ ಸಾಧನೆಯನ್ನು ಮಾಡಿದ್ದರು. ಒಟ್ಟಾರೆಯಾಗಿ, ಸಾಲುಂಖೆ ಯುವ ವಿಶ್ವ ಚಾಂಪಿಯನ್ ಶಿಪ್ ಆದ ಆರನೇ ಭಾರತೀಯರಾಗಿದ್ದಾರೆ.
ಸಾಲುಂಖೆ ಇದೇ ವರ್ಷ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯಾ ಕಪ್ ಲೀಗ್ 3 ರ ಆರ್ಚರಿ ಪಂದ್ಯದಲ್ಲಿ ಬೆಳ್ಳಿ ಗೆದ್ದಿದ್ದರು. ಕಳೆದ ವರ್ಷ ಸುಲೈಮಾನಿಯಾ ಮತ್ತು ಶಾರ್ಜಾದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕಗಳನ್ನೂ ಬಾಚಿಕೊಂಡಿದ್ದರು.
ಇಂದಿನಿಂದ 3 ನೇ ವಿಶ್ವ ಕಿವುಡ ಯೂತ್ ಚಾಂಪಿಯನ್‌ಶಿಪ್ ಆರಂಭ: ಇಂದಿನಿಂದ ಜು.12 ರವರೆಗೆ ಬ್ರೆಜಿಲ್‌ನಲ್ಲಿ ನಡೆಯಲಿರುವ 3 ನೇ ವಿಶ್ವ ಕಿವುಡ ಯೂತ್ ಮತ್ತು ಜುಲೈ 14 ರಿಂದ 25, 2023 ರವರೆಗೆ ನಡೆಯಲಿರುವ 6ನೇ ವಿಶ್ವ ಕಿವುಡ ವಯಸ್ಕರ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪಂದ್ಯಾವಳಿಗಳಿಗೆ ಮಧ್ಯಪ್ರದೇಶ ರಾಜ್ಯ ಬ್ಯಾಡ್ಮಿಂಟನ್ ಅಕಾಡೆಮಿ ಆಟಗಾರ್ತಿ ಗೌರಾನ್ಶಿ ಶರ್ಮಾ ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತ ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ್ತಿ ಗೌರಾನ್ಶಿ ಶರ್ಮಾ ಆಗಿದ್ದಾರೆ.
ಇದನ್ನೂ ಓದಿ: Canada Open: ಫೈನಲ್‌ಗೆ ಲಗ್ಗೆ ಇಟ್ಟ ಲಕ್ಷ್ಯ ಸೇನ್, ಸೆಮೀಸ್‌ನಲ್ಲಿ ಸೋಲುಂಡ ಸಿಂಧು