ETV Bharat / sports

ಇತಿಹಾಸ ಬರೆದ ಕುಸ್ತಿಪಟು ಅನ್ಶು ಮಲಿಕ್.. ವಿಶ್ವಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ ಮೊದಲ ಭಾರತೀಯ ಮಹಿಳೆ - ಜೂನಿಯರ್ ಯುರೋಪಿಯನ್​ ಚಾಂಪಿಯನ್​ ಉಕ್ರೇನ್​ನ​ ಸೊಲೊಮಿಯಾ ವಿನ್ನಿಕ್

ಏಷ್ಯನ್ ಚಾಂಪಿಯನ್ ಆಗಿರುವ 19 ವರ್ಷ ವಯಸ್ಸಿನ ಅನ್ಶು ಸೆಮಿಫೈನಲ್​ ಬೌಟ್​ನಲ್ಲಿ ಆರಂಭದಿಂದಲೂ ಎದುರಾಳಿಯ ಮೇಲೆ ನಿಯಂತ್ರಣ ಸಾಧಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆ ಮೆರೆದು 57 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡರು.

Anshu malik first Indian woman wrestler to reach World Ch'ship final
ಅನ್ಶು ಮಲಿಕ್ ಇತಿಹಾಸ
author img

By

Published : Oct 6, 2021, 10:43 PM IST

Updated : Oct 7, 2021, 2:44 PM IST

ಒಸ್ಲೋ(ನಾರ್ವೆ): ಭಾರತದ ಯುವ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಬುಧವಾರ​ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಮಲಿಕ್​ ಸೆಮಿಫೈನಲ್​ನಲ್ಲಿ ಜೂನಿಯರ್ ಯುರೋಪಿಯನ್​ ಚಾಂಪಿಯನ್​ ಉಕ್ರೇನ್​ನ​ ಸೊಲೊಮಿಯಾ ವಿನ್ನಿಕ್ ಅವರನ್ನು 11-0 ಅಂತರದಲ್ಲಿ ಮಣಿಸಿ ಫೈನಲ್​ ಪ್ರವೇಶಿಸಿದ್ದಾರೆ.

ಏಷ್ಯನ್ ಚಾಂಪಿಯನ್ ಆಗಿರುವ 19 ವರ್ಷ ವಯಸ್ಸಿನ ಅನ್ಶು ಸೆಮಿಫೈನಲ್​ ಬೌಟ್​ನಲ್ಲಿ ಆರಂಭದಿಂದಲೂ ಎದುರಾಳಿಯ ಮೇಲೆ ನಿಯಂತ್ರಣ ಸಾಧಿಸಿದರು ಮತ್ತು ತಾಂತ್ರಿಕ ಶ್ರೇಷ್ಠತೆ ಮೆರೆದು 57 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತ ಮೊದಲ ಮಹಿಳಾ ಕುಸ್ತಿಪಟು ಎನಿಸಿಕೊಂಡರು.

ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕೇವಲ 4 ಭಾರತೀಯ ಮಹಿಳಾ ಕುಸ್ತಿಪಟುಗಳು ಮಾತ್ರ ಪದಕ ಗೆದ್ದಿದ್ದಾರೆ. ಗೀತಾ ಫೋಗಟ್​(2012), ಬಬಿತಾ ಫೋಗಟ್​(2012), ಪೂಜಾ ಧಂಡ(2018) ಮತ್ತು ವಿನೇಶ್ ಫೋಗಟ್​(2019) ಈ ಹಿಂದೆ ಕಂಚಿನ ಪದಕ ಪಡೆದಿದ್ದರು.

ಆದರೆ ಅನ್ಶು ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಫೈನಲ್ ಪ್ರವೇಶಿಸಿ ಕನಿಷ್ಠ ಬೆಳ್ಳಿ ಪದಕ ಖಚಿತಪಡಿಸಿದ್ದಾರೆ. ಅಲ್ಲದೇ ವಿಶ್ವ ಚಾಂಪಿಯನ್​ಶಿಪ್ ಇತಿಹಾಸದಲ್ಲಿ ಸುಶೀಲ್ ಕುಮಾರ್(2010) ಮತ್ತು ಬಜರಂಗ್ ಪೂನಿಯಾ(2018) ನಂತರ ಫೈನಲ್​ ಪ್ರವೇಶಿಸಿದ ಕುಸ್ತಿಪಟು ಎನಿಸಿಕೊಂಡರು. ಅನ್ಶು ಪ್ರಸ್ತುತ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು ಖಚಿಪಡಿಸಿದ್ದಾರೆ.

ಇನ್ನು ಹಾಲಿ ವಿಶ್ವ ಚಾಂಪಿಯನ್​ಗೆ ಮಣಿಸಿದ್ದ ಅಚ್ಚರಿ ಮೂಡಿಸಿದ್ದ ಸರಿತಾ ಸೆಮಿಫೈನಲ್​ನಲ್ಲಿ ಬಲ್ಗೇರಿಯಾದ ಬಿಲಿಯಾನಾ ಜಿವ್ಕೋವಾ ದುಡೋವಾ ವಿರುದ್ಧ 0-3 ರಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದರು. ಇದೀಗ ಅವರು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

ಇದನ್ನು ಓದಿ:EXCLUSIVE: ಶೆಫಾಲಿ ಅಂದ್ರೆ ಮಿಂಚು, ಅವರನ್ನು ಕಂಡ್ರೆ ಎದುರಾಳಿ ತಂಡಗಳಿಗಿದೆ ಭಾರಿ ಭಯ:ರಾಮನ್

Last Updated : Oct 7, 2021, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.