ಸ್ಪೇನ್: ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ 18 ವರ್ಷದ ಅಮನ್ ಸಹರಾವತ್ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿಗೂ ಇವರು ಭಾಜನರಾದರು. ಚಾಂಪಿಯನ್‌ಶಿಪ್‌ನ 57 ಕೆಜಿ ವಿಭಾಗದಲ್ಲಿ ಟರ್ಕಿಯ ಡುಮಾನ್ ಅವರನ್ನು ಸೋಲಿಸಿ ಭಾರತದ ಸ್ಪರ್ಧಿ ಐತಿಹಾಸಿಕ ಸಾಧನೆ ತೋರಿದ್ದಾರೆ.
ಇದನ್ನೂ ಓದಿ: ಅಂಡರ್ 23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಸಜನ್ ಭನ್ವಾಲಾಗೆ ಐತಿಹಾಸಿಕ ಕಂಚಿನ ಪದಕ