ಬೆಂಗಳೂರು: 2018ರ ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಾಗಿರುವ ಬೆಂಗಳೂರಿನ ಫವಾದ್ ಮಿರ್ಜಾ ಭಾರತದ ಪರ 20 ವರ್ಷಗಳ ಬಳಿಕ ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
-
.@FouaadMirza, the first Indian in 20 years to qualify for an equestrian event at the Olympics, is determined to give his best at #Tokyo2020
— Khelo India (@kheloindia) July 19, 2021 " class="align-text-top noRightClick twitterSection" data="
Celebrate his journey with #Cheer4India @PMOIndia @ianuragthakur @NisithPramanik
@WeAreTeamIndia @YASMinistry @ddsportschannel pic.twitter.com/jI795z9WRe
">.@FouaadMirza, the first Indian in 20 years to qualify for an equestrian event at the Olympics, is determined to give his best at #Tokyo2020
— Khelo India (@kheloindia) July 19, 2021
Celebrate his journey with #Cheer4India @PMOIndia @ianuragthakur @NisithPramanik
@WeAreTeamIndia @YASMinistry @ddsportschannel pic.twitter.com/jI795z9WRe.@FouaadMirza, the first Indian in 20 years to qualify for an equestrian event at the Olympics, is determined to give his best at #Tokyo2020
— Khelo India (@kheloindia) July 19, 2021
Celebrate his journey with #Cheer4India @PMOIndia @ianuragthakur @NisithPramanik
@WeAreTeamIndia @YASMinistry @ddsportschannel pic.twitter.com/jI795z9WRe
'ಅರ್ಜುನ ಪ್ರಶಸ್ತಿ'ಗೆ ಭಾಜನರಾಗಿರುವ ಫವಾದ್ ಭಾರತದಿಂದ ಒಲಿಂಪಿಕ್ಸ್ ಈಕ್ವೆಸ್ಟ್ರಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇಂದ್ರಜಿತ್ ಲಂಬಾ ಮತ್ತು ಇಮ್ತಿಯಾಜ್ ಅನೀಸ್ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಕೊನೆಯ ಬಾರಿ ಅನೀಸ್ 2000 ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಭಾರತದ ಪರ ಸ್ಪರ್ಧಿಸಿದ್ದರು. ಇದೀಗ ಎರಡು ದಶಕಗಳ ನಂತರ ಫವಾದ್ ಒಲಿಂಪಿಕ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
2016ರ ರಿಯೋ ಒಲಿಂಪಿಕ್ಸ್ನ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ್ದ ಫವಾದ್, ಪ್ರಮುಖ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ನಂತರ ಜರ್ಮನಿಯ ಬೆಟಿನಾ ಹಾಯ್ ಬಳಿ ತರಬೇತಿಗೆ ಸೇರಿದ ಅವರು ಹಿಂತಿರುಗಿ ನೋಡಲೇ ಇಲ್ಲ. ಇಟಲಿ, ಜರ್ಮನಿ ಹಾಗೂ ಹಾಲೆಂಡ್‌ನಲ್ಲಿ ನಡೆದ ಈಕ್ವೆಸ್ಟ್ರಿಯನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದರು.
2018ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಮಿರ್ಜಾ ಅವರು ಸಿನೊರ್ ಮೆಡಿಕಾಟ್ ಎಂಬ ಕುದುರೆಯೊಂದಿಗೆ ಸ್ಪರ್ಧಿಸಿ 2 ಬೆಳ್ಳಿ ಪದಕ ಜಯಿಸುವ ಮೂಲಕ 36 ವರ್ಷಗಳ ಪದಕದ ಬರ ನೀಗಿಸಿದ್ದರು. ಇದೀಗ ಜುಲೈ 23ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ನಲ್ಲಿ 'ಡಜಾರಾ 4' ಕುದುರೆಯ ಜೊತೆಗೆ ಸ್ಪರ್ಧಿಸಲಿದ್ದು 1.3 ಬಿಲಿಯನ್ ಭಾರತೀಯರ ಪದಕ ಭರವಸೆಯನ್ನು ಈಡೇರಿಸುವ ಹಾದಿಯಲ್ಲಿದ್ದಾರೆ.
ಜರ್ಮನಿಯಲ್ಲಿ ತರಬೇತಿ ಮತ್ತು ತಯಾರಿ ನಡೆಸುತ್ತಿರುವ ಫವಾದ್ ತಮ್ಮ ಬಹುತೇಕ ಸಮಯವನ್ನು ಕುದುರೆಗಳ ಜೊತೆ ಮತ್ತು ಕುದುರೆ ಸವಾರಿಯಲ್ಲೇ ಕಳೆದಿದ್ದಾರೆ. ಬಿಡುವಿನ ವೇಳೆ ಕುದುರೆಗೆ ಆಹಾರ ನೀಡುವುದು ಮತ್ತು ಅವುಗಳ ಲಾಲನೆ ಪಾಲನೆ ಮಾಡುವುದೇ ಇವರ ಕೆಲಸವಾಗಿದೆ.
ಪ್ರಧಾನಮಂತ್ರಿಯವರಿಂದ ಮೆಚ್ಚುಗೆ ಗಳಿಸಿದ ಬೆಂಗಳೂರಿನ ಹುಡುಗ ಬಜರಂಗ್ ಪೂನಿಯಾ, ವಿನೇಶ್ ಫೋಗಾಟ್ ಅವರಂತೆ ಒಲಿಂಪಿಕ್ಸ್‌ನಲ್ಲಿ ಶತಕೋಟಿ ಭಾರತೀಯರ ಪದಕ ಭರವಸೆಯೂ ಹೌದು.
ಕರ್ನಾಟಕದಿಂದ ಈ ಬಾರಿ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಫವಾದ್ ಮಿರ್ಜಾ ಜೊತೆಗೆ ಈಜುಪಟು ಶ್ರೀಹರಿ ನಟರಾಜ್ ಮತ್ತು ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕು ದೃಢ: ಯುವ ಟೆನ್ನಿಸ್ ಆಟಗಾರ್ತಿಯ ಒಲಿಂಪಿಕ್ಸ್ ಕನಸು ಭಗ್ನ