ಕೋಲ್ಕತಾ: ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಮತ್ತೊಂದು ರೋಚಕ ಪ್ರದರ್ಶನ ನೀಡಿತು. ಕೋಲ್ಕತಾದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯಿತು. ಇದು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತದ ಸತತ 2ನೇ ಕ್ವಾಲಿಫೈಯರ್ ಪ್ರಯತ್ನವಾಗಿದೆ.
-
🔊 SOUND ON 🔊
— Indian Football Team (@IndianFootball) June 11, 2022 " class="align-text-top noRightClick twitterSection" data="
It's time to soak in the atmosphere 😁#AFGIND ⚔️ #ACQ2023 🏆 #BlueTigers 🐯 #BackTheBlue 💙 #IndianFootball ⚽ pic.twitter.com/sCfeIZeZss
">🔊 SOUND ON 🔊
— Indian Football Team (@IndianFootball) June 11, 2022
It's time to soak in the atmosphere 😁#AFGIND ⚔️ #ACQ2023 🏆 #BlueTigers 🐯 #BackTheBlue 💙 #IndianFootball ⚽ pic.twitter.com/sCfeIZeZss🔊 SOUND ON 🔊
— Indian Football Team (@IndianFootball) June 11, 2022
It's time to soak in the atmosphere 😁#AFGIND ⚔️ #ACQ2023 🏆 #BlueTigers 🐯 #BackTheBlue 💙 #IndianFootball ⚽ pic.twitter.com/sCfeIZeZss
ದೇಶದ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಮತ್ತು ತಂಡದ ನಾಯಕ ಸುನಿಲ್ ಚೇಟ್ರಿ ತಮ್ಮ 83ನೇ ಅಂತರರಾಷ್ಟ್ರೀಯ ಗೋಲು ದಾಖಲಿಸುವ ಮೂಲಕ ಮತ್ತು ಗಾಯದ ಅವಧಿಯಲ್ಲಿ ಸಹಲ್ ಸಮದ್ ದಾಖಲಿಸಿದ 2ನೇ ಗೋಲು ಭಾರತ ತಂಡದ ಜಯಭೇರಿಯಲ್ಲಿ ಪ್ರಧಾನ ಪಾತ್ರವಹಿಸಿತು. ಈ ಮೂಲಕ ಭಾರತ 2023ರ ಎಎಫ್‌ಸಿ ಏಷ್ಯಾ ಕಪ್ ಟೂರ್ನಿಗೆ ಅರ್ಹತೆ ಗಿಟ್ಟಿಸುವ ಸನಿಹ ತಲುಪಿದೆ.
ಈ ವಿಜಯದೊಂದಿಗೆ ಭಾರತ ಫುಟ್ಬಾಲ್ ತಂಡ ಏಷ್ಯಾಕಪ್ ಟೂರ್ನಿಯ ಗುಂಪು ಹಂತದಲ್ಲಿ ಸತತ 2ನೇ ಬಾರಿ ಮತ್ತು ಈವರೆಗೆ ಒಟ್ಟು 5 ಬಾರಿ ಅವಕಾಶ ಪಡೆಯಲು ನೆರವಾಯಿತು. 2019ರಲ್ಲಿ ಚೆಟ್ರಿ ಟೀಂ ಗುಂಪು ಹಂತದಲ್ಲೇ ಸೋತು ಟೂರ್ನಿಯಿಂದ ನಿರ್ಗಮಿಸಿರುವುದನ್ನು ಇಲ್ಲಿ ನೆನಪಿಸಬಹುದು.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್: ಚಿನ್ನಕ್ಕೆ ಪಂಚ್ ನೀಡಲು ಲವ್ಲಿನಾ, ನಿಖತ್ ಸೇರಿ 12 ಬಾಕ್ಸರ್ಗಳ ತಂಡ ರೆಡಿ