ETV Bharat / sports

ಪ್ರೀಮಿಯರ್ ಲೀಗ್​ನ 8 ಆಟಗಾರರಿಗೆ ಕೋವಿಡ್ ಪಾಸಿಟಿವ್​ ದೃಢ

ಆಗಸ್ಟ್​ 31ರಿಂದ ಇಲ್ಲಿಯವರೆಗೆ ನಡೆದಿರುವ 7 ಸುತ್ತಿನ ಕೋವಿಡ್​ ಟೆಸ್ಟ್​ನಲ್ಲಿ 42 ಆಟಗಾರರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಪ್ರೀಮಿಯರ್ ಲೀಗ್
ಪ್ರೀಮಿಯರ್ ಲೀಗ್
author img

By

Published : Oct 20, 2020, 5:02 PM IST

ಲಂಡನ್: ಕಳೆದ ಒಂದು ವಾರದ ಅವಧಿಯಲ್ಲಿ ನಡೆಸಿದ ನೂತನ ಕೋವಿಡ್ 19 ಪರೀಕ್ಷೆಯಲ್ಲಿ 8 ಆಟಗಾರರಿಗೆ ಪಾಸಿಟಿವ್​ ವರದಿ ಬಂದಿದೆ ಎಂದು ಪ್ರೀಮಿಯರ್​ ಲೀಗ್ ಆಡಳಿತ ಖಚಿತಪಡಿಸಿದೆ.

ಕೋವಿಡ್ 19 ಪಾಸಿಟಿವ್ ಬಂದಿರುವ ಆಟಗಾರರು ಪ್ರತ್ಯೇಕವಾಗಿ 10 ದಿನಗಳ ಕಾಲ ಸೆಲ್ಫ್ ಐಸೊಲೀಸನ್​ನಲ್ಲಿರಲಿದ್ದಾರೆ ಎಂದು ಸೋಮವಾರ ಪ್ರೀಮಿಯರ್ ಲೀಗ್ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರೀಮಿಯರ್ ಲೀಗ್
ಪ್ರೀಮಿಯರ್ ಲೀಗ್

" ಅಕ್ಟೋಬರ್ 12 ಮತ್ತು ಅಕ್ಟೋಬರ್ 18ರ ನಡುವೆ ಸುಮಾರು 1,575 ಆಟಗಾರರು ಮತ್ತು ಸಿಬ್ಬಂದಿಯನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಎಂಟು ಮಂದಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ " ಎಂದು ಪ್ರೀಮಿಯರ್ ಲೀಗ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಒಟ್ಟಾರೆ ಆಗಸ್ಟ್​ 31ರಿಂದ ಇಲ್ಲಿಯವರೆಗೆ ನಡೆದ 7 ಸುತ್ತಿನ ಕೋವಿಡ್​ ಟೆಸ್ಟ್​ನಲ್ಲಿ 42 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.