ಟೋಕಿಯೊ : ನಾರಾ ಪ್ರಿಫೆಕ್ಚರ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ನ ಜ್ಯೋತಿ ರಿಲೆಯಲ್ಲಿ ಭಾಗವಹಿಸಿದ 109 ವರ್ಷದ ಶಿಜೆಕೊ ಕಾಗಾವಾ ಅವರು ಅತ್ಯಂತ ಹಿರಿಯ ಒಲಿಂಪಿಕ್ ಜ್ಯೋತಿ ಹಿಡಿದವರೆನಿಸಿಕೊಂಡಿದ್ದಾರೆ.
1911ರಲ್ಲಿ ಜನಿಸಿದ ಕಾಗಾವಾ ಅವರು, 2016ರ ಜೂನ್‌ನಲ್ಲಿ ಬ್ರೆಜಿಲ್‌ನ ಮಕಾಪಾದಲ್ಲಿ ನಡೆದ ರಿಯೊ ಒಲಿಂಪಿಕ್ ಜ್ಯೋತಿ ರಿಲೆಯಲ್ಲಿ ಪಾಲ್ಗೊಂಡ 107 ವರ್ಷದ ಬ್ರೆಜಿಲ್‌ನ ಐಡಾ ಮೆಂಡಿಸ್ ಅವರ ದಾಖಲೆ ಮುರಿದಿದ್ದಾರೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಕಾಗಾವಾ ಅವರು ಮಾರ್ಚ್ 25ರಂದು ಪ್ರಾರಂಭವಾದ ಟೋಕಿಯೊ ಒಲಿಂಪಿಕ್ ಜ್ಯೋತಿ ರಿಲೆಯಲ್ಲಿ ಪಾಲ್ಗೊಂಡ ಎರಡನೇ ಶತಾಯುಷಿಯಾಗಿದ್ದಾರೆ. ಮಾರ್ಚ್ 28ರಂದು ನಸುಕಾರಸುಯಾಮಾದಲ್ಲಿ ನಡೆದ ಜ್ಯೋತಿ ರಿಲೆಯಲ್ಲಿ 104 ವರ್ಷದ ಶಿತುಷಿ ಹಕೋಯಿಸಿ ಪಾಲ್ಗೊಂಡಿದ್ದರು.
ಓದಿ : ಕೊನೆಯ ಓವರ್ನಲ್ಲಿ ಸಿಂಗಲ್ ರನ್ ನಿರಾಕರಿಸಿದ ಸಾಮ್ಸನ್ ಪರ ನಿಂತ ಸಂಗಕ್ಕರ ಹೇಳಿದ್ದೇನು?
ಮುಂದಿನ ತಿಂಗಳು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಕೇನ್ ತನಕಾ ಜ್ಯೋತಿ ಹಿಡಿಯಲಿದ್ದು, ಈ ವೇಳೆ ಕಾಗಾವಾ ಅವರ ದಾಖಲೆ ಮುರಿಯುವ ಸಾಧ್ಯತೆಯಿದೆ. 117ವರ್ಷದ ತನಕಾ ಅವರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಎಂದು ಗುರುತಿಸಿದೆ ಮತ್ತು ಇವರು ಜಪಾನ್‌ನ ಅತ್ಯಂತ ಹಿರಿಯ ವಯಸ್ಸಿನ ನಾಗರಿಕರಾಗಿದ್ದಾರೆ.
ಮೇ 12ರಂದು ಫುಕುಯೋಕಾ ಪ್ರಿಫೆಕ್ಚರ್‌ನಲ್ಲಿರುವ ಶಿಮ್ ಮೂಲಕ ಒಲಿಂಪಿಕ್ ಜ್ಯೋತಿ ಹಾದು ಹೋಗುವಾಗ ಇವರು ಹಿಡಿಯುವ ಸಾಧ್ಯತೆಯಿದೆ.