ಟೋಕಿಯೋ: ಇಂದು ನಡೆದ ರೋಚಕ ಪಂದ್ಯದಲ್ಲಿ ಭಾರತದ ಹಾಕಿ ವನಿತೆಯರು ಐರ್ಲೆಂಡ್ ವಿರುದ್ಧ ಕೊನೆ ಕ್ಷಣದಲ್ಲಿ ಗೋಲು ಬಾರಿಸುವ ಮೂಲಕ ರೋಚಕ ಜಯ ಸಾಧಿಸಿದ್ದಾರೆ. ಗ್ರೂಪ್ ‘ಎ’ ವಿಭಾಗದಲ್ಲಿರುವ ಭಾರತಕ್ಕೆ ಇದು ಮೊದಲ ಜಯವಾಗಿದೆ.
-
Women's Hockey:
— India_AllSports (@India_AllSports) July 30, 2021 " class="align-text-top noRightClick twitterSection" data="
India still in the hunt for QF spot; To take on South Africa tomorrow in their final Group match.
India at 5th spot currently with one win & 3 losses. Top 4 will qualify for Final.
Tomorrow: Ned Vs Ger | GB Vs Ire #Tokyo2020withIndia_AllSports #Tokyo2020 pic.twitter.com/AZ4YV8nNw8
">Women's Hockey:
— India_AllSports (@India_AllSports) July 30, 2021
India still in the hunt for QF spot; To take on South Africa tomorrow in their final Group match.
India at 5th spot currently with one win & 3 losses. Top 4 will qualify for Final.
Tomorrow: Ned Vs Ger | GB Vs Ire #Tokyo2020withIndia_AllSports #Tokyo2020 pic.twitter.com/AZ4YV8nNw8Women's Hockey:
— India_AllSports (@India_AllSports) July 30, 2021
India still in the hunt for QF spot; To take on South Africa tomorrow in their final Group match.
India at 5th spot currently with one win & 3 losses. Top 4 will qualify for Final.
Tomorrow: Ned Vs Ger | GB Vs Ire #Tokyo2020withIndia_AllSports #Tokyo2020 pic.twitter.com/AZ4YV8nNw8
ಮೊದಲಾರ್ಧದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡ ಯಾವುದೇ ಗೋಲ್ಗಳನ್ನು ಪಡೆಯದೆ 0-0 ಆಟ ಮುಂದುವರೆಸಿದ್ದವು. ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ನವನೀತ್ ಕೌರ್ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ 1-0 ಮೂಲಕ ಮುನ್ನಡೆ ಪಡೆಯಿತು. ಅಂತಿಮವಾಗಿ ಭಾರಿ ಒತ್ತಡದಲ್ಲಿದ್ದ ಭಾರತ ತಂಡ ಐರ್ಲೆಂಡ್ ವಿರುದ್ಧ 1-0 ಮೂಲಕ ರೋಚಕ ಜಯ ಸಾಧಿಸಿತು.
ನಾಳೆ ನಡೆಯುವ ಗ್ರೂಪ್ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಲಿದೆ. ಮುಂದಿನ ಪಂದ್ಯದಲ್ಲಿ ಐರ್ಲೆಂಡ್, ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಅದೃಷ್ಟ ಪರೀಕ್ಷಿಸಲಿದೆ.
ಭಾರತದ ಕ್ವಾರ್ಟರ್ಫೈನಲ್ ಆಸೆ ಜೀವಂತ:
ಒಂದು ವೇಳೆ ಗ್ರೇಟ್ ಬ್ರಿಟನ್ ವಿರುದ್ಧ ಐರ್ಲೆಂಡ್ ಸೋತು, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದರೆ ಭಾರತ 'ಎ' ಗುಂಪಿನಲ್ಲಿ 4ನೇ ಸ್ಥಾನಿಯಾಗಿ ಕ್ವಾರ್ಟರ್ಫೈನಲ್ ಪ್ರವೇಶಿಸಲಿದೆ.