ETV Bharat / sports

Tokyo Olympics Hockey: ಭಾರತೀಯ ಹಾಕಿ ತಂಡಕ್ಕೆ 7-1ರಿಂದ ಸೋಲುಣಿಸಿದ ಆಸ್ಟ್ರೇಲಿಯಾ - ಒಲಿಂಪಿಕ್ 2020 ಸ್ಥಳ, ಟೋಕಿಯೋ ಒಲಿಂಪಿಕ್ ಆಟಗಳು

ಒಲಿಂಪಿಕ್ಸ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದ್ದ ಭಾರತ ಇಂದು ಕಾಂಗರೂ ಪಡೆಯ ವಿರುದ್ಧ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು.

: Australia men's hockey team hands India 7-1 defeat
ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು
author img

By

Published : Jul 25, 2021, 5:11 PM IST

ಟೋಕಿಯೋ: ಭಾರತ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್​ನ 3 ಗುಂಪಿನ ತನ್ನ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 7-1ರಿಂದ ಹೀನಾಯ ಸೋಲು ಕಂಡಿದೆ.

ಒಲಿಂಪಿಕ್ಸ್ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ 3-2ರಲ್ಲಿ ಗೆಲುವು ಸಾಧಿಸಿದ್ದ ಭಾರತ ಇಂದು ಆಸೀಸ್‌ ಪಡೆಯ ವಿರುದ್ಧ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು.

ಆಸ್ಟ್ರೇಲಿಯಾ 5ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್​ ಮೂಲಕ ತನ್ನ ಮೊದಲ ಗೋಲು ಸಿಡಿಸಿತು. 10ನೇ ನಿಮಿಷದಲ್ಲಿ ಡೇನಿಯಲ್ ಬಿಯಾಲ್, 23ನೇ ನಿಮಿಷದಲ್ಲಿ ಆ್ಯಂಡ್ರ್ಯೂ ಫ್ಲಿನ್​, 26ನೇ ನಿಮಿಷದಲ್ಲಿ ಜೋಶುವಾ ಬೆಲ್ಜ್​, 21 ನೇ ನಿಮಿಷದಲ್ಲಿ ಜೆರೆಮಿ ಹೇವಾರ್ಡ್​, 40 ಮತ್ತು 42ನೇ ನಿಮಿಷದಲ್ಲಿ ಬ್ಲ್ಯಾಕ್​ ಗೋವರ್ಸ್​ ಹಾಗೂ 51ನೇ ನಿಮಿಷದಲ್ಲಿ ಗೋಲು ಸಂಪಾದಿಸಿದರು.

ಭಾರತದ ಪರ ದಿಲ್ಪ್ರೀತ್ ಸಿಂಗ್ 34ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು. 1976ರ ಒಲಿಂಪಿಕ್ಸ್​ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 6-1ರಲ್ಲಿ ಸೋಲು ಕಂಡಿದ್ದು ಈವರೆಗೆ ಗರಿಷ್ಠ ಅಂತರದ ಸೋಲಾಗಿತ್ತು. ಇದೀಗ ಮತ್ತೊಂದು ಹೀನಾಯ ಸೋಲು ಕಂಡಿದೆ.

ಮನ್​ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಮುಂದಿನ ಪಂದ್ಯದಲ್ಲಿ ಸ್ಪೇನ್​ ವಿರುದ್ಧ ಮಂಗಳವಾರ ಸೆಣಸಲಿದೆ.

ಇದನ್ನೂ ಓದಿ: 'ಬೆಳ್ಳಿ ಹುಡುಗಿ' ಮೀರಾಬಾಯಿಗೆ ಜೀವನಪೂರ್ತಿ FREE ಡಾಮಿನೊಸ್ ಪಿಜ್ಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.