ಸಿಮ್ಡೆಗಾ (ಜಾರ್ಖಂಡ್): ಬುಧವಾರ ನಡೆದ 11ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಹರಿಯಾಣ 30-0 ಗೋಲುಗಳಿಂದ ರಾಜಸ್ಥಾನವನ್ನು ಮಣಿಸಿದೆ. ಇನ್ನು ಈ ಪಂದ್ಯದಲ್ಲಿ ಹರಿಯಾಣದ ಸಾಕ್ಷಿ ರಾಣಾ ಎಂಟು ಗೋಲುಗಳನ್ನು ಬಾರಿಸಿದ್ದಾರೆ.
ಹಾಲಿ ಚಾಂಪಿಯನ್ ಹರಿಯಾಣ ಪೂಲ್ ಎ ಯದಲ್ಲಿದೆ. ಇನ್ನು ಸಾಕ್ಷಿ ಹೊರತುಪಡಿಸಿ, ಕನಿಕಾ ಸಿವಾಚ್ ಐದು ಗೋಲುಗಳನ್ನು ಗಳಿಸಿದರೆ, ತಮ್ಮನಾ ಯಾದವ್ ಮತ್ತು ಸೆಜಲ್ ತಲಾ ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ. ಇಶಿಕಾ ಮೂರು, ಭಟೇರಿ ಮತ್ತು ಸವಿ ಎರಡು ಗೋಲು ಬಾರಿಸಿದ್ದಾರೆ.
ಇದನ್ನು ಓದಿ: ಮಾರ್ಚ್ 15ರಿಂದ ನಾಗ್ಪುರ ಲಾಕ್ಡೌನ್.. ದೇಶಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ ‘ಮಹಾ’ ನಿರ್ಣಯ!
ಇನ್ನು ಪೂಲ್ ಬಿ ಓಪನರ್‌ನಲ್ಲಿ, ಆತಿಥೇಯ ಜಾರ್ಖಂಡ್, ಗುಜರಾತ್ ಅನ್ನು 17-0 ಅಂತರದಲ್ಲಿ ಬಗ್ಗು ಬಡಿದಿದೆ. ಜಾರ್ಖಂಡ್‌ನಿಂದ ಬಿನಿಮಾ ಧನ್ ಆರು ಗೋಲು ಗಳಿಸಿದರೆ, ಫುಲ್ಮಾನಿ ಭೆಂಗ್ರಾ ಮತ್ತು ಕ್ಯಾಪ್ಟನ್ ನಿರು ಕುಲ್ಲು ಹ್ಯಾಟ್ರಿಕ್ ದಾಖಲಿಸಿದ್ದಾರೆ. ಅನುಪ್ರಿಯಾ ಸೊರೆನ್ ತನ್ನ ತಂಡಕ್ಕೆ ಎರಡು ಮತ್ತು ಎಡ್ಲಿನ್ ಬೇಜ್, ರೀನಾ ಕುಮಾರಿ, ಪೂರ್ಣಿಮಾ ಬಾರ್ವಾ ಮತ್ತು ಸ್ವೀಟಿ ಡಂಗ್ ಡಂಗ್ ತಂಡದ ಪರ ತಲಾ ಒಂದು ಗೋಲು ಗಳಿಸುವ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡಿದರು.
ಪೂಲ್ ಎಚ್ ಹಣಾಹಣಿಯಲ್ಲಿ ಕರ್ನಾಟಕ 9-0 ಗೋಲುಗಳಿಂದ ಜಮ್ಮು ಮತ್ತು ಕಾಶ್ಮೀರವನ್ನು ಸೋಲಿಸಿತು. ಎಚ್‌ಎ ತುಷಾರ (10, 49, 48 ನೇ) ಹ್ಯಾಟ್ರಿಕ್ ಗಳಿಸಿದರೆ, ಎನ್‌ಎ ಅನನ್ಯಾ (22, 38 ನೇ), ನಾಯಕಿ ಎಸ್‌ಬಿ ನಿಸರ್ಗಾ (17, 58 ನೇ) ತಲಾ ಎರಡು ಗೋಲು ಗಳಿಸಿದರು.