ಇಪೋಹ್: ಭಾರತ ಹಾಕಿ ತಂಡ ಸುಲ್ತಾನ್ ಅಜ್ಲಾನ್ ಶಾ ಕಪ್ನ ಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ 4-2 ಗೋಲುಗಳಿಂದ ಸೋಲನುಭವಿಸಿ ಮತ್ತೊಮ್ಮೆ ನಿರಾಸೆ ಅನುಭವಿಸಿದೆ.
ಲೀಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ 5 ಬಾರಿಯ ಚಾಂಪಿಯನ್ ಭಾರತ ತಂಡ ಇಂದು 60 ನಿಮಿಷಗಳ ಪೂರ್ಣಾವಧಿಯಲ್ಲಿ 1-1ರಲ್ಲಿ ಡ್ರಾ ಸಾಧಿಸಿತ್ತು. ಆಟ ಆರಂಭವಾದ 9ನೇ ನಿಮಿಷದಲ್ಲಿ ಶ್ರೀಜಿತ್ ಸಿಂಗ್ ಗೋಲು ಗಳಿಸಿ ಮುನ್ನಡೆ ದೊರೆಕಿಸಿಕೊಟ್ಟರು. ಆದರೆ ನಂತರ ಎರಡು ತಂಡಗಳು 30 ನಿಮಿಷಗಳ ಕಾಲ ಗೋಲು ಗಳಿಸಲು ಪ್ರಬಲ ಪೈಪೋಟಿ ನಡೆಸಿದವು. ಆದರೆ 47ನೇ ನಿಮಿಷದಲ್ಲಿ ಕೋರಿಯಾ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿಕೊಂಡು 1-1 ರಲ್ಲಿ ಸಮಬಲ ಸಾಧಿಸಿತು. ಕೊನೆಗೆ ವಿಜೇತರಿಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
FT: 🇮🇳 1-1 (2-4) 🇰🇷
— Hockey India (@TheHockeyIndia) March 30, 2019 " class="align-text-top noRightClick twitterSection" data="
Korea edged past a spirited Indian side in a cracker of a final where the winner was decided via penalty shootouts.#IndiaKaGame #SultanAzlanShahCup2019 pic.twitter.com/Y0zDzS1bSZ
">FT: 🇮🇳 1-1 (2-4) 🇰🇷
— Hockey India (@TheHockeyIndia) March 30, 2019
Korea edged past a spirited Indian side in a cracker of a final where the winner was decided via penalty shootouts.#IndiaKaGame #SultanAzlanShahCup2019 pic.twitter.com/Y0zDzS1bSZFT: 🇮🇳 1-1 (2-4) 🇰🇷
— Hockey India (@TheHockeyIndia) March 30, 2019
Korea edged past a spirited Indian side in a cracker of a final where the winner was decided via penalty shootouts.#IndiaKaGame #SultanAzlanShahCup2019 pic.twitter.com/Y0zDzS1bSZ
ಪೆನಾಲ್ಟಿ ಶೂಟೌಟ್ನಲ್ಲಿ 2 ಮತ್ತು ಮೂರನೇ ಶಾಟ್ನಲ್ಲಿ ಬಿರೇಂದ್ರ ಲಕ್ರ ಹಾಗೂ ವರುಣ್ ಕುಮಾರ್ ಗೋಲು ಗಳಿಸಿದರೆ, 1,4 ಮತ್ತು 5ನೇ ಶಾಟ್ಗಳಲ್ಲಿ ಕ್ರಮವಾಗಿ ಮಂದೀಪ್ ಸಿಂಗ್, ಜೂನಿಯರ್ ಸುಮಿತ್ ಕುಮಾರ್ ಹಾಗೂ ಸುಮಿತ್ ಗೋಲು ಗಳಿಸುವಲ್ಲಿ ವಿಫಲರಾದರು. ದ.ಕೋರಿಯಾ 5 ಅವಕಾಶದಲ್ಲಿ 4 ರಲ್ಲಿ ಗೋಲು ಸಿಡಿಸಿ ಪ್ರಶಸ್ತಿ ಬಾಚಿಕೊಂಡಿತು.
ದ.ಕೋರಿಯಾ ಶೂಟೌಟ್ ಮೂಲಕ 4-2 ರಲ್ಲಿ ಭಾರತವನ್ನು ಮಣಿಸಿ ಮೂರನೇ ಬಾರಿಗೆ ಸುಲ್ತಾನ್ ಅಜ್ಲಾನ್ ಶಾ ಕಪ್ ಮುಡಿಗೇರಿಸಿಕೊಂಡಿತು.