ಟೋಕಿಯೋ: ಭಾರತ ಹಾಗೂ ಬೆಲ್ಜಿಯಂ ನಡುವಿನ ಸೆಮಿಫೈನಲ್ ಪಂದ್ಯ ರೋಚಕ ಘಟ್ಟ ತಲುಪಿದೆ. ಪಂದ್ಯ ಆರಂಭವಾದ ಎರಡನೇ ನೀಮಿಷಕ್ಕೆ ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡ ಮೊದಲ ಗೋಲು ಗಳಿಸುವ ಮೂಲಕ ಖಾತೆ ತೆರೆಯಿತು.
-
I’m watching the India vs Belgium Hockey Men’s Semi Final at #Tokyo2020. Proud of our team and their skills. Wishing them the very best!
— Narendra Modi (@narendramodi) August 3, 2021 " class="align-text-top noRightClick twitterSection" data="
">I’m watching the India vs Belgium Hockey Men’s Semi Final at #Tokyo2020. Proud of our team and their skills. Wishing them the very best!
— Narendra Modi (@narendramodi) August 3, 2021I’m watching the India vs Belgium Hockey Men’s Semi Final at #Tokyo2020. Proud of our team and their skills. Wishing them the very best!
— Narendra Modi (@narendramodi) August 3, 2021
ಇದಾದ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿದ ಭಾರತ ತಂಡ 10ನೇ ನೀಮಿಷದಲ್ಲಿ ಭಾರತದ ಹರ್ಮನ್ಪ್ರೀತ್ ಸಿಂಗ್ ಅದ್ಭುತ ಗೋಲು ಗಳಿಸುವ ಮೂಲಕ 1-1 ಸಮಬಲ ಸಾಧಿಸಿತು. ನಂತರ ಈ ಗೋಲಿನ 8 ನಿಮಿಷದ ನಂತರ ನಾಯಕ ಮನ್‌ಪ್ರೀತ್ ಮತ್ತೊಂದು ಗೋಲು ಗಳಿಸುವ ಮೂಲಕ 2-1ರಿಂದ ಭಾರತ ಮುನ್ನಡೆ ಸಾಧಿಸಿತು. ನಂತರ ಇದಕ್ಕೆ ಬೆಲ್ಜಿಯಂ ಕೂಡಾ ದಿಟ್ಟ ಉತ್ತರ ನೀಡಿದ್ದು 30ನೇ ನಿಮಿಷದಲ್ಲಿ ಹ್ಯಾನಿಡ್ರಿಕ್ ಹಿಲ್ಸ್ ಗೋಲು ಗಳಿಸುವ ಮೂಲಕ 2-2ರಿಂದ ಸಮಬಲ ಸಾಧಿಸಿದೆ.
ಭಾರತದ ಪುರುಷರ ತಂಡ ಬ್ರಿಟನ್ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ 41 ವರ್ಷಗಳ ಬಳಿಕ ಸೆಮಿಫೈನಲ್‌ಗೆ ಪ್ರವೇಶಿಸಿದ್ದು ಇದೀಗ ಬಲಿಷ್ಠ ಬೆಲ್ಜಿಯಂ ಜೊತೆ ಪೈಪೋಟಿ ನಡೆಸುತ್ತಿದೆ.
ಬೆಲ್ಜಿಯಂ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಈ ತಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಲ್ಲಿಯವರೆಗೂ ಒಂದೇ ಒಂದು ಪಂದ್ಯದಲ್ಲಿ ಸೋಲು ಕಂಡಿಲ್ಲ. ಹಾಗಾಗಿ ಇಂದಿನ ಪಂದ್ಯ ಭಾರತಕ್ಕೆ ಕಠಿಣವಾಗಿದೆ ನಿಜ. ಆದ್ರೆ ಅನುಭವಿಗಳಿರುವ ತಂಡಕ್ಕೆ ಗೆಲುವು ಕಷ್ಟವೇನಲ್ಲ.
-
Here is how our lineup looks like for our Semi-Final match against Belgium. 🔥
— Hockey India (@TheHockeyIndia) August 3, 2021 " class="align-text-top noRightClick twitterSection" data="
Drop a 💙 to wish them luck. #INDvBEL #HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/8xxMmsxZzV
">Here is how our lineup looks like for our Semi-Final match against Belgium. 🔥
— Hockey India (@TheHockeyIndia) August 3, 2021
Drop a 💙 to wish them luck. #INDvBEL #HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/8xxMmsxZzVHere is how our lineup looks like for our Semi-Final match against Belgium. 🔥
— Hockey India (@TheHockeyIndia) August 3, 2021
Drop a 💙 to wish them luck. #INDvBEL #HaiTayyar #IndiaKaGame #Tokyo2020 #TeamIndia #TokyoTogether #StrongerTogether #HockeyInvites #WeAreTeamIndia #Hockey pic.twitter.com/8xxMmsxZzV
ಮತ್ತೊಂದೆಡೆ, ಬೆಲ್ಜಿಯಂ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಅದ್ಭುತ ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಭಾನುವಾರ ನಡೆದ ಈ ಪಂದ್ಯದಲ್ಲಿ ಬೆಲ್ಜಿಯಂ 3-1 ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಗುಂಪು ಹಂತದಲ್ಲಿನ ಫಲಿತಾಂಶ:
- ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 3-2 ಗೋಲುಗಳಿಂದ ಜಯ
- ಆಸ್ಟ್ರೇಲಿಯಾ ವಿರುದ್ಧ ಭಾರತ 7-1 ಅಂತರದಲ್ಲಿ ಸೋಲು
- ಸ್ಪೇನ್ ವಿರುದ್ಧ ಭಾರತ 3-0 ಗೋಲುಗಳಿಂದ ಜಯ
- ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-1ರಿಂದ ಜಯ
- ಜಪಾನ್ ವಿರುದ್ಧ ಭಾರತಕ್ಕೆ 5-3ರಿಂದ ಜಯ
- ಕ್ವಾರ್ಟರ್ ಫೈನಲ್ ನಲ್ಲಿ ಭಾರತ 3-1 ಗೋಲುಗಳಿಂದ ಗ್ರೇಟ್ ಬ್ರಿಟನ್ ಅನ್ನು ಸೋಲಿಸಿತು
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುಂಪು ಹಂತದಲ್ಲಿ ಬೆಲ್ಜಿಯಂ ಫಲಿತಾಂಶ :
- ನೆದರ್ಲೆಂಡ್ಸ್ ವಿರುದ್ಧ ಬೆಲ್ಜಿಯಂಗೆ 3-1 ಗೋಲುಗಳಿಂದ ಜಯ
- ಜರ್ಮನಿ ವಿರುದ್ಧ ಬೆಲ್ಜಿಯಂಗೆ 3-1 ಗೋಲುಗಳಿಂದ ಜಯ
- ದಕ್ಷಿಣ ಆಫ್ರಿಕಾ ವಿರುದ್ಧ ಬೆಲ್ಜಿಯಂಗೆ 9-4 ಗೋಲುಗಳಿಂದ ಜಯ
- ಕೆನಡಾ ವಿರುದ್ಧ ಬೆಲ್ಜಿಯಂಗೆ 9-1 ಗೋಲುಗಳಿಂದ ಜಯ
- ಬೆಲ್ಜಿಯಂ 2-2 ಗೋಲುಗಳಿಂದ ಬ್ರಿಟನ್ ವಿರುದ್ಧ ಡ್ರಾ
- ಬೆಲ್ಜಿಯಂ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನನ್ನು 3-1ರಿಂದ ಸೋಲಿಸಿತು
ಇದನ್ನೂ ಓದಿ: Tokyo Olympics: ಇಂದು ಪುರುಷರ ಹಾಕಿ ಸೆಮೀಸ್ ಸೇರಿ ಈ ಎಲ್ಲ ಭಾರತೀಯರು ಕಣಕ್ಕೆ