ETV Bharat / sports

ರಾಣಿಯ​​ ಅದೃಷ್ಟದ ಗೋಲು... ಒಲಂಪಿಕ್ಸ್​​ಗೆ ಅರ್ಹತೆ ಪಡೆದ ಭಾರತದ ವನಿತೆಯರ ಹಾಕಿ ತಂಡ - ಒಲಂಪಿಕ್ಸ್​ಗೆ ವನಿತೆಯರ ಹಾಕಿ ತಂಡ ಆಯ್ಕೆ

ಯುಎಸ್​ಎ ವಿರುದ್ಧ ನಡೆದ ಒಲಿಂಪಿಕ್ಸ್ ಹಾಕಿ ಅರ್ಹತಾ ಪಂದ್ಯದಲ್ಲಿ ಭಾತರ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಗಳಿಸಿದ ಒಂದು ಗೋಲು 2020ರ ಟೋಕಿಯೊ ಒಲಂಪಿಕ್ಸ್​ಗೆ ಭಾರತ ಅರ್ಹತೆ ಪಡೆಯುವಂತೆ ಮಾಡಿದೆ.

ಒಲಂಪಿಕ್ಸ್​​ಗೆ ಅರ್ಹತೆ ಪಡೆದ ವನಿತೆಯರ ಹಾಕಿ ತಂಡ
author img

By

Published : Nov 2, 2019, 9:23 PM IST

ಭುವನೇಶ್ವರ: ಭಾರತೀಯ ಮಹಿಳಾ ಹಾಕಿ ತಂಡ ಅಮೆರಿಕದ ವಿರುದ್ಧ ನಡೆದ ನಡೆದ ಎರಡನೇ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ 1-4 ಗೋಲುಗಳ ಅಂತರದಿಂದ ಸೋಲು ಅನುಭವಿಸಿದರೂ 2020ರ ಟೋಕಿಯೊ ಒಲಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದೆ.

ಮೊದಲ ಪಂದ್ಯದಲ್ಲಿ 5-1 ಅಂತರದಿಂದ ಜಯ ಸಾಧಿಸಿದ್ದ ಭಾರತ, ಎರಡೂ ಪಂದ್ಯಗಳ ಒಟ್ಟು ಗೋಲುಗಳನ್ನ ಲೆಕ್ಕ ಹಾಕಿದಾಗ 6-5 ಗೋಲುಗಳ ಸರಾಸರಿ ಅಂತರದಿಂದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ಭಾತರ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಗಳಿಸಿದ ಒಂದು ಗೋಲು ಒಲಂಪಿಕ್ಸ್​ಗೆ ಅರ್ಹತೆ ಪಡೆಯುವಂತೆ ಮಾಡಿದೆ.

ನಿನ್ನೆ ನಡೆದ ಮೊದಲ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಭಾರತ ತಂಡ 5-1 ಅಂತರದಿಂದ ಜಯ ಸಾಧಿಸಿತ್ತು. ಆದ್ರೆ ಇಂದು ನಡೆದ 2ನೇ ಅರ್ಹತಾ ಪಂದ್ಯದಲ್ಲಿ ಮಿಂಚಿದ ಅಮೆರಿಕ ವನಿತೆಯರು 4-1 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ವನಿತೆಯರ ಹಾಕಿ ತಂಡ ಈ ಹಿಂದೆ 1980ರ ಮಾಸ್ಕೋ ಒಲಂಪಿಕ್ಸ್ ಮತ್ತು 2016ರ ರಿಯೋ ಒಲಂಪಿಕ್ಸ್​ನಲ್ಲಿ ಭಾಗವಹಿಸಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.