ಭುವನೇಶ್ವರ : ಹಾಲಿ ಚಾಂಪಿಯನ್ ಭಾರತ ತಂಡ ಭಾನುವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಸೋಲು ಕಂಡು ಪೋಡಿಯಂಗೇರುವ ಅವಕಾಶವನ್ನು ತಪ್ಪಿಸಿಕೊಂಡಿದೆ.
ಭಾನುವಾರ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 3-1 ಗೋಲುಗಳ ಅಂತರದಿಂದ ಭಾರತೀಯ ಯುವ ಪಡೆ ಸೋಲು ಕಂಡಿತು. ಲೀಗ್ ಹಂತದ ಪಂದ್ಯದಲ್ಲೂ 5-4ರಲ್ಲಿ ಫ್ರಾನ್ಸ್ ಅತಿಥೇಯರ ವಿರುದ್ಧ ಗೆಲುವು ಸಾಧಿಸಿತ್ತು.
-
We go down fighting against France 💔#IndiaKaGame #JWC2021 #RisingStars pic.twitter.com/dIcmkql50N
— Hockey India (@TheHockeyIndia) December 5, 2021 " class="align-text-top noRightClick twitterSection" data="
">We go down fighting against France 💔#IndiaKaGame #JWC2021 #RisingStars pic.twitter.com/dIcmkql50N
— Hockey India (@TheHockeyIndia) December 5, 2021We go down fighting against France 💔#IndiaKaGame #JWC2021 #RisingStars pic.twitter.com/dIcmkql50N
— Hockey India (@TheHockeyIndia) December 5, 2021
ಫ್ರಾನ್ಸ್ ತಂಡದ ನಾಯಕ ಟಿಮೋತಿ ಕ್ಲೆಮೆಂಟ್ ಹ್ಯಾಟ್ರಿಕ್ ಗೋಲು ಸಿಡಿಸಿದರು. ಅವರು 26, 34 ಮತ್ತು 47ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಟೂರ್ನಮೆಂಟ್ನಲ್ಲಿ ಇದು ಅವರ 4ನೇ ಹ್ಯಾಟ್ರಿಕ್ ಗೋಲಾಗಿದೆ. ಭಾರತದ ಪರ ಸುದೀಪ್ 42ನೇ ನಿಮಿಷದಲ್ಲಿ ಗೋಲು ಸಿಡಿಸಿದರೂ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
-
Let's applaud these India Colts 🌟 for an amazing FIH Odisha Hockey Men's Junior World Cup Bhubaneswar 2021 👏
— Hockey India (@TheHockeyIndia) December 5, 2021 " class="align-text-top noRightClick twitterSection" data="
We are proud of this team 💙#IndiaKaGame #RisingStars pic.twitter.com/7noll1tIcL
">Let's applaud these India Colts 🌟 for an amazing FIH Odisha Hockey Men's Junior World Cup Bhubaneswar 2021 👏
— Hockey India (@TheHockeyIndia) December 5, 2021
We are proud of this team 💙#IndiaKaGame #RisingStars pic.twitter.com/7noll1tIcLLet's applaud these India Colts 🌟 for an amazing FIH Odisha Hockey Men's Junior World Cup Bhubaneswar 2021 👏
— Hockey India (@TheHockeyIndia) December 5, 2021
We are proud of this team 💙#IndiaKaGame #RisingStars pic.twitter.com/7noll1tIcL
ಈ ಸೋಲಿನೊಂದಿಗೆ ಭಾರತ ಟೂರ್ನಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫ್ರಾನ್ಸ್ 3ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆಯಿತು. ಅರ್ಜೆಂಟೀನಾ ಮತ್ತು 6 ಬಾರಿಯ ವಿಶ್ವ ಚಾಂಪಿಯನ್ ಜರ್ಮನಿ ಇಂದು ನಡೆಯುವ ಫೈನಲ್ಸ್ನಲ್ಲಿ ಸೆಣಸಾಡಲಿವೆ.
ಇದನ್ನೂ ಓದಿ:BWF World Tour Finals : ಫೈನಲ್ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು