ಆಕ್ಲೆಂಡ್: ಭಾರತ ಕ್ರಿಕೆಟ್ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಣಸಿದ ಬೆನ್ನಲ್ಲೇ ಅದೇ ಜಾಗದಲ್ಲಿ ಭಾರತದ ಮಹಿಳಾ ಹಾಕಿ ತಂಡವೂ ಕೂಡ 4-0 ಗೋಲುಗಳ ಅಂತರದಿಂದ ಆ ದೇಶವನ್ನು ಮಣಿಸಿದೆ.
ಭಾರತ ತಂಡ ಆಕ್ಲೆಂಡ್ನಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಅಂಡರ್ 19 ಭಾರತ ತಂಡ ವಿಶ್ವಕಪ್ನಲ್ಲಿ ಕಿವೀಸ್ ಯುವ ಪಡೆಯನ್ನು 44 ರನ್ಗಳಿಂದ ಮಣಿಸಿತ್ತು. ಇದ್ರ ಬೆನ್ನಲ್ಲೇ ಶನಿವಾರ ಭಾರತದ ಮಹಿಳೆಯರ ಹಾಕಿ ತಂಡವೂ ಕೂಡ ನ್ಯೂಜಿಲ್ಯಾಂಡ್ ಮಹಿಳೆಯರ ಹಾಕಿ ತಂಡವನ್ನು 4-0 ಗೋಲುಗಳಿಂದ ಮಣಿಸಿ ಭಾರತೀಯ ಕ್ರೀಡಾಭಿಮಾನಿಗಳನ್ನು ರಂಜಿಸಿದರು. ಆದರೆ ಭಾರತ ಎ ತಂಡ ಮಾತ್ರ ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ 29 ರನ್ಗಳ ಸೋಲನುಭವಿಸಿತು.
-
FT: 🇮🇳 4-0 🇳🇿(Development Team)#India has officially begun their 2020 with a winning start!
— Hockey India (@TheHockeyIndia) January 25, 2020 " class="align-text-top noRightClick twitterSection" data="
Congratulations, Eves! 👏#IndiaKaGame pic.twitter.com/PwsH766fqH
">FT: 🇮🇳 4-0 🇳🇿(Development Team)#India has officially begun their 2020 with a winning start!
— Hockey India (@TheHockeyIndia) January 25, 2020
Congratulations, Eves! 👏#IndiaKaGame pic.twitter.com/PwsH766fqHFT: 🇮🇳 4-0 🇳🇿(Development Team)#India has officially begun their 2020 with a winning start!
— Hockey India (@TheHockeyIndia) January 25, 2020
Congratulations, Eves! 👏#IndiaKaGame pic.twitter.com/PwsH766fqH
ಆರಂಭದಲ್ಲಿ ನಾವು ಹಿನ್ನಡೆ ಅನುಭವಿಸಿದರೂ ನಂತರ ಆಟವನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದೆವು. ಗೋಲುಗಳಿಸಲು ಹಲವಾರು ಅವಕಾಶಗಳನ್ನು ಸೃಷ್ಠಿಸಿಕೊಂಡೆವು ಎಂದು ಭಾರತ ತಂಡದ ಮುಖ್ಯ ಕೋಚ್ ಜೊಯೆರ್ಡ್ ಮರಿಜ್ಞೆ ಪಂದ್ಯದ ನಂತರ ತಿಳಿಸಿದರು.