ಸ್ಯಾಂಟಿಯಾಗೊ: ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಚಿಲಿಯ ಮಹಿಳಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು.
ಡಂಗ್‌ಡಂಗ್ ಅವರು 6 ಮತ್ತು 26 ನೇ ನಿಮಿಷಗಳಲ್ಲಿ ಗಳಿಸಿದ ಗೋಲು ಭಾರತದ ಗೆಲುವಿಗೆ ಕಾರಣವಾಗಿದೆ. ಚಿಲಿ ಪರವಾಗಿ 40 ನಿಮಿಷದಲ್ಲಿ ಫ್ರಾನ್ಸಿಸ್ಕಾ ಒಂದು ಗೋಲು ಬಾರಿಸಿದರು.
ಇದನ್ನು ಓದಿ: ಜೂನಿಯರ್ ಮಹಿಳಾ ಹಾಕಿ: ಚಿಲಿಯನ್ನು 4-2 ಅಂತರದಿಂದ ಮಣಿಸಿದ ಭಾರತ
ಫಾರ್ವರ್ಡ್ ಬ್ಯೂಟಿ ಡಂಗ್‌ಡಂಗ್ ಅವರ ಉತ್ತಮ ಪ್ರದರ್ಶನ ಭಾರತದ ಗೆಲುವಿಗೆ ಕಾರಣವಾಗಿದೆ. ಮೊದಲ ಸುತ್ತಿನಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ, ಎರಡನೇ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪೆನಾಲ್ಟಿ ಕಾರ್ನರ್ ಮೂಲಕ ಭಾರತದ ಮುನ್ನಡೆಯನ್ನು ಎರಡು ಗೋಲುಗಳಿಗೆ ವಿಸ್ತರಿಸಿತು.