ಭುವನೇಶ್ವರ್(ಒಡಿಶಾ): ಜೂನಿಯರ್ ಹಾಕಿ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ತಂಡ ಫ್ರಾನ್ಸ್ ವಿರುದ್ಧ ಸೋಲು ಕಂಡಿದೆ. 4-5 ಗೋಲುಗಳ ಅಂತರದಲ್ಲಿ ಭಾರತ ತಂಡ ಸೋಲು ಅನುಭವಿಸಿದೆ.
ಭಾರತದ ಪರ ಉಪ ನಾಯಕರಾದ ಸಂಜಯ್ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದರೂ, ಗೆಲುವು ಸಾಧ್ಯವಾಗಲಿಲ್ಲ. 15, 57 ಮತ್ತು 58ನೇ ನಿಮಿಷಗಳಲ್ಲಿ ಸಂಜಯ್ ಗೋಲು ಬಾರಿಸಿದ್ದರು. ಇದರ ಜೊತೆಗೆ ಉತ್ತಮ್ ಸಿಂಗ್ 10ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು.
-
#RisingStars #RisingStars @TheHockeyIndia v @FF_Hockey Details https://t.co/enUndjlQGL pic.twitter.com/Vde7BpHmmC
— International Hockey Federation (@FIH_Hockey) November 24, 2021 " class="align-text-top noRightClick twitterSection" data="
">#RisingStars #RisingStars @TheHockeyIndia v @FF_Hockey Details https://t.co/enUndjlQGL pic.twitter.com/Vde7BpHmmC
— International Hockey Federation (@FIH_Hockey) November 24, 2021#RisingStars #RisingStars @TheHockeyIndia v @FF_Hockey Details https://t.co/enUndjlQGL pic.twitter.com/Vde7BpHmmC
— International Hockey Federation (@FIH_Hockey) November 24, 2021
ಫ್ರಾನ್ಸ್ ಪರ ನಾಯಕ ತಿಮೊಥಿ ಕ್ಲೆಮೆಂಟ್ 1, 23 ಮತ್ತು 32ನೇ ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರೆ, ಬೆಂಜಮಿನ್ ಮಾರ್ಕ್ 7ನೇ ನಿಮಿಷದಲ್ಲಿ ಹಾಗೂ ಕೊರೆಂಟಿನ್ ಸೆಲಿಯರ್ 48ನೇ ನಿಮಿಷದಲ್ಲಿ ಗೋಲು ಗಳಿಸಿ, ತಂಡದ ಪರವಾಗಿ ಒಟ್ಟು 5 ಗೋಲು ದಾಖಲಾಗಲು ಕಾರಣರಾದರು.
ಒಡಿಶಾದ ಭುವನೇಶ್ವರದಲ್ಲಿ ನವೆಂಬರ್ 24ರಿಂದ ಆರಂಭವಾಗಿರುವ ಈ ವಿಶ್ವಕಪ್ ಡಿಸೆಂಬರ್ 5ರವರೆಗೆ ನಡೆಯಲಿದ್ದು, ಬಿ ಗುಂಪಿನಲ್ಲಿ ಅವಕಾಶ ಪಡೆದಿದ್ದು, ಮೊದಲ ಪಂದ್ಯದಲ್ಲಿಯೇ ಫ್ರಾನ್ಸ್ ವಿರುದ್ಧ ಪರಾಭವಗೊಂಡಿದೆ.
ಇದನ್ನೂ ಓದಿ: ಟ್ವಿಟರ್ನಲ್ಲಿ Tomato ಟ್ರೆಂಡ್: ಎಲ್ಲೆಡೆ ಟೊಮೆಟೊ 'ಬಾತ್'