ETV Bharat / sports

ಒಲಿಂಪಿಕ್ಸ್​ನಲ್ಲಿ ಹಾಕಿ ತಂಡಕ್ಕೆ ಗೆಲುವು: ತಂಡದ ಸದಸ್ಯರ ಮನೆಯಲ್ಲಿ ಆನಂದದ ಹೊನಲು - Hockey

ಭಾರತೀಯ ಹಾಕಿ ತಂಡದ ಆಟಗಾರ ಮನ್​ದೀಪ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹಾಕಿ ತಂಡದ ಗೆಲುವನ್ನು ಹಬ್ಬದಂತೆ ಆಚರಿಸಿದ್ದಾರೆ.

hockey
ತಂಡದ ಸದಸ್ಯರ ಮನೆಯಲ್ಲಿ ಸಂಭ್ರಮ
author img

By

Published : Aug 5, 2021, 11:25 AM IST

ಪಂಜಾಬ್​: ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ತಂಡ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಕುಣಿದಾಡಿತು. ಐತಿಹಾಸಿಕ ವಿಜಯವನ್ನು ಇಡೀ ದೇಶವೇ ಸಂಭ್ರಮಿಸುತ್ತಿರುವಾಗ, ತಂಡದ ಆಟಗಾರರ ಮನೆಗಳಲ್ಲಿಯೂ ಸಂತೋಷದ ವಾತಾವರಣ ನಿರ್ಮಾಣವಾಗಿದೆ.

ಭಾರತೀಯ ಹಾಕಿ ತಂಡದ ಆಟಗಾರ ಮನ್​ದೀಪ್ ಸಿಂಗ್​ ಅವರ ಮನೆಯೂ ಇದೇ ರೀತಿಯ ವಾತಾವರಣಕ್ಕೆ ಸಾಕ್ಷಿಯಾಗಿದೆ. ಮನ್‌ದೀಪ್ ಕುಟುಂಬವು ಮುಂಜಾನೆಯಿಂದಲೇ ಪಂದ್ಯವನ್ನು ವೀಕ್ಷಿಸುತ್ತಿದ್ದು, ಇದೀಗ ಗೆಲುವಿನ ನಗೆ ಬೀರಿದ ಸಂದರ್ಭದಲ್ಲಿ ಹಬ್ಬದ ಸಂತಸವೇ ಅಲ್ಲಿತ್ತು.

ಈ ಬಗ್ಗೆ ಮನ್‌ದೀಪ್ ತಂದೆ ರವೀಂದರ್ ಸಿಂಗ್ ಮಾತನಾಡಿದ್ದು, "ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯ ಹಾಕಿ ತಂಡವು ವಿಶ್ವ ದರ್ಜೆಯ ತಂಡ ಎಂದು ತೋರಿಸಿಕೊಟ್ಟಿದೆ. ಇಂತಹ ವೇದಿಕೆಯಲ್ಲಿ ಸ್ಪರ್ಧಿಸುವುದು ಸುಲಭವಲ್ಲ. ಎಲ್ಲಾ ಆಟಗಾರರು ಉತ್ತಮವಾಗಿ ಆಟವಾಡಿದ್ದಾರೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.