ಲಂಡನ್ ಕೊಲ್ನಿ: ಪುಟ್ಬಾಲ್ ಪಂದ್ಯ ರದ್ದಾದ ಬಳಿಕ ಆರ್ಸೆನಲ್ ಬಾಸ್ ಮೈಕೆಲ್ ಆರ್ಟೆಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ನಮಗೆ ಮತ್ತೊಂದು ಪ್ರೋಟೋಕಾಲ್ ಬೇಕು. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ಮಾರ್ಗಸೂಚಿಗಳು ಬೇಕಾಗುತ್ತವೆ. ಏಕೆಂದರೆ ನಾವು ಫುಟ್ಬಾಲ್ ಪಂದ್ಯವನ್ನು ಆಡುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುವುದು ಕೊನೆಯ ಎರಡು ಗಂಟೆಯಲ್ಲಿ ತಿಳಿಸುವುದು ಸೂಕ್ತವಲ್ಲ. ನಾವು ಅಲ್ಲಿ ಕಾಯಲು ಸಾಧ್ಯವಿಲ್ಲ. ಸ್ವಲ್ಪ ಮುಂಚಿತವಾಗಿ ತಿಳಿದುಕೊಳ್ಳುವುದು ಸೂಕ್ತ. ಪ್ರೀಮಿಯರ್ ಲೀಗ್‌ನಲ್ಲಿ ಭಾಗಿಯಾಗಿರುವ ಎರಡು ತಂಡಗಳು ಆ ಕ್ಷಣದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆರ್ಟೆಟಾ ಹೇಳಿದರು.
ಫುಲ್ಹ್ಯಾಮ್ ವಿರುದ್ಧದ ಟೊಟೆನ್ಹ್ಯಾಮ್ ಪಂದ್ಯವನ್ನು ಕೋವಿಡ್ ಕಾರಣದಿಂದಾಗಿ ಪಂದ್ಯ ಆರಂಭಕ್ಕೂ ಮೂರು ಗಂಟೆಗಳ ಮುಂಚಿತವಾಗಿ ರದ್ದು ಗೊಳಿಸಿದ ಬಳಿಕ ಆರ್ಟೆಟಾ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಆರ್ಟೆಟಾರಿಗೆ ಕೋವಿಡ್ ಪ್ರೋಟೊಕಾಲ್ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಈ ಮೇಲಿನ ಹೊಸ ಪ್ರೋಟೋಕಾಲ್ಗಳು ಪರಿಚಯಸಬೇಕೆಂದು ಹೇಳಿದರು.
ಇನ್ನು ಕಳೆದ ಸೀಸನ್ನಲ್ಲಿ ಹಾಥಾರ್ನ್ಸ್ನಲ್ಲಿ ನಡೆದ ಆರ್ಸೆನಲ್ ಮತ್ತು ವೆಸ್ಟ್ ಬ್ರೋಮ್ ಪಂದ್ಯ 1-1 ಸಮದಿಂದ ಅಂತ್ಯಗೊಂಡಿತ್ತು. ಕೊವೀಡ್ ಕಾರಣದಿಂದಾಗಿ ಇದು ರದ್ದಾದ ಮೂರನೇ ಪ್ರೀಮಿಯರ್ ಲೀಗ್ ಪಂದ್ಯವಾಗಿದೆ. ಎರಡು ಡ್ರಾ ಮತ್ತು ಸತತ ಮೂರು ಪಂದ್ಯಗಳು ಸೋಲನ್ನಪ್ಪಿರುವ ವೆಸ್ಟ್ ಬ್ರೋಮ್ ತಂಡದ ವಿರುದ್ಧ ಆರ್ಸೆನಲ್ ತಂಡ ಎದುರಲಿಸಿದೆ. ಪಂದ್ಯ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕೋವಿಡ್ ಪ್ರೋಟೋಕಾಲ್ಗಳ ಬಗ್ಗೆ ಅವರು ಮಾತನಾಡಿದರು.