ETV Bharat / sports

ಸತತ 3 ಸೋಲು ಕಂಡ ಎಸ್​ಸಿ ಈಸ್ಟ್​ ಬೆಂಗಾಲ್: ನಾರ್ತ್​ಈಸ್ಟ್​ ಯುನೈಟೆಡ್​ಗೆ 2-0 ಅಂತರದ ಜಯ

ಶನಿವಾರ ನಡೆದ ಪಂದ್ಯದಲ್ಲಿ ನಾರ್ತ್​ಈಸ್ಟ್​ ತಂಡದ ಸರ್ ಚಂದ್ರ ಸಿಂಗ್ 33ನೇ ನಿಮಿಷದಲ್ಲಿ ಗೋಲುಗಳಿಸಿ ಯುನೈಟೆಡ್ ಮುನ್ನಡೆ ಸಾಧಿಸಲು ನೆರವಾದರು. ನಂತರ ರೊಚಾರ್ಝೆಲಾ ಹೆಚ್ಚುವರಿ ಸಮಯ (90_1)ದಲ್ಲಿ ಮತ್ತೊಂದು ಗೋಲು ದಾಖಲಿಸಿ ನಾರ್ತ್ ಈಸ್ಟ್ 2-0 ಅಂತರದಿಂದ ಜಯ ಸಾಧಿಸಲು ನೆರವಾದರು.

ನಾರ್ತ್​ಈಸ್ಟ್​ ಯುನೈಟೆಡ್​ಗೆ 2-0 ಜಯ
ನಾರ್ತ್​ಈಸ್ಟ್​ ಯುನೈಟೆಡ್​ಗೆ 2-0 ಜಯ
author img

By

Published : Dec 5, 2020, 10:56 PM IST

ವಾಸ್ಕೋ: 7ನೇ ಆವೃತ್ತಿಯ ಐಎಸ್​ಎಲ್​ನ 17ನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ 2-0 ಗೋಲುಗಳ ಅಂತರದಿಂದ ಎಸ್​ಸಿ ಈಸ್ಟ್ ಬೆಂಗಾಲ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್​ ಲೀಗ್​ಗೆ ಅವಕಾಶ ಪಡೆದುಕೊಂಡಿರುವ 100 ವರ್ಷಗಳ ಇತಿಹಾಸವಿರುವ ಈಸ್ಟ್​ ಬೆಂಗಾಲ್ ತಂಡ ತನ್ನ ಮೊದಲ ಆವೃತ್ತಿಯಲ್ಲೇ ನೀರಸ ಪ್ರದರ್ಶನ ಮುಂದುವರಿಸಿದೆ. ಆಡಿರುವ ಮೂರು ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಐಎಸ್​ಎಲ್​ನಲ್ಲಿ ದಯನೀಯ ವೈಫಲ್ಯ ಅನುಭವಿಸಿದೆ

ಶನಿವಾರ ನಡೆದ ಪಂದ್ಯದಲ್ಲಿ ನಾರ್ತ್​ಈಸ್ಟ್​ ತಂಡದ ಸರ್ ಚಂದ್ರ ಸಿಂಗ್ 33ನೇ ನಿಮಿಷದಲ್ಲಿ ಗೋಲುಗಳಿಸಿ ಯುನೈಟೆಡ್ ಮುನ್ನಡೆ ಸಾಧಿಸಲು ನೆರವಾದರು. ನಂತರ ರೊಚಾರ್ಝೆಲಾ ಹೆಚ್ಚುವರಿ ಸಮಯ(90_1)ದಲ್ಲಿ ಮತ್ತೊಂದು ಗೋಲು ದಾಖಲಿಸಿ ನಾರ್ತ್ ಈಸ್ಟ್ 2-0 ಅಂತರದಿಂದ ಜಯ ಸಾಧಿಸಲು ನೆರವಾದರು.

ಈ ಗೆಲುವಿನ ಮೂಲಕ ಯುನೈಟೆಡ್​ 4 ಪಂದ್ಯಗಳಿಂದ 2 ಗೆಲುವು ಮತ್ತು 2 ಸೋಲಿನೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಈಸ್ಟ್​ ಬೆಂಗಾಲ್​ ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.