ETV Bharat / sports

ಫುಟ್​ಬಾಲ್​ ಇತಿಹಾಸದಲ್ಲಿ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸಿದ ದಾಖಲೆಗೆ ಪಾತ್ರರಾದ ರೊನಾಲ್ಡೊ - ಪೀಲೆ

ರೊನಾಲ್ಡೊ 64ನೇ ನಿಮಿಷದಲ್ಲಿ ತಂಡದ 2ನೇ ಗೋಲು ಗಳಿಸಿದರು. ಇದು ಅವರ ವೃತ್ತಿ ಜೀವನದ 760ನೇ ಗೋಲಾಗಿದ್ದು, ಸ್ಪರ್ಧಾತ್ಮಕ ಫುಟ್​ಬಾಲ್​ ಪಂದ್ಯಾವಳಿಯಲ್ಲಿ​ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ದಾಖಲೆಗೆ ಪಾತ್ರರಾದರು.

ಕ್ರಿಸ್ಚಿಯಾನೋ ರೊನಾಲ್ಡೊ
ಕ್ರಿಸ್ಚಿಯಾನೋ ರೊನಾಲ್ಡೊ
author img

By

Published : Jan 21, 2021, 3:24 PM IST

ರೋಮ್: ಜುವೆಂಟಸ್ ಸ್ಟಾರ್​ ಕ್ರಿಸ್ಟಿಯಾನೊ ರೊನಾಲ್ಡೊ ಬುಧವಾರ ನಾಪೋಲಿ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸುವ ಮೂಲಕ ಫುಟ್​ಬಾಲ್​​ ಇತಿಹಾಸದಲ್ಲಿ ಸಾರ್ವಕಾಲಿಕ ಅತ್ಯಧಿಕ ಗೋಲು ಬಾರಿಸಿದ ಫುಟ್​ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಪೀ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜುವೆಂಟಸ್​ 2-0 ಗೋಲುಗಳಲ್ಲಿ ಗೆಲುವು ಸಾಧಿಸಿ 9ನೇ ಬಾರಿಗೆ ಇಟಾಲಿಯನ್ ಸೂಪರ್ ಕಪ್​ ಎತ್ತಿ ಹಿಡಿಯಿತು.

ರೊನಾಲ್ಡೊ 64ನೇ ನಿಮಿಷದಲ್ಲಿ ತಂಡದ 2ನೇ ಗೋಲು ಗಳಿಸಿದರು. ಇದು ಅವರ ವೃತ್ತಿ ಜೀವನದ 760ನೇ ಗೋಲಾಗಿದ್ದು, ಸ್ಪರ್ಧಾತ್ಮಕ ಫುಟ್​ಬಾಲ್ ಪಂದ್ಯಾವಳಿಯಲ್ಲಿ​ ಸಾರ್ವಕಾಲಿಕ ಗರಿಷ್ಠ ಗೋಲು ಬಾರಿಸಿದ ದಾಖಲೆಗೆ ಪಾತ್ರರಾದರು. ಅವರು ರಿಯಲ್ ಮ್ಯಾಡ್ರಿಡ್ ಪರ 450, ಮ್ಯಾಂಚೆಸ್ಟರ್​ ಯುನೈಟೆಡ್ ಪರ 118, ಪೋರ್ಚುಗಲ್(ನ್ಯಾಷನಲ್) ಪರ 102, ಸ್ಪೋರ್ಟಿಂಗ್ ಸಿಪಿ ಪರ 5, ಜುವೆಂಟಸ್ ಪರ 85 ಗೋಲು ಗಳಿಸಿದ್ದಾರೆ.

ಸಾರ್ವಕಾಲಿಕ ಗರಿಷ್ಠ ಗೋಲುಗಳ ಪಟ್ಟಿಯ ಎರಡನೇ ಸ್ಥಾನದದಲ್ಲಿ ಆಸ್ಟ್ರಿಯನ್ ಆಟಗಾರ ಜೋಸೆಫ್​ ಬಿಕಾನ್​ ಇದ್ದು, ಅವರು 1932-1955ರ ಅವಧಿಯಲ್ಲಿ 530 ಪಂದ್ಯಗಳಲ್ಲಿ 759 ಗೋಲು ಗಳಿಸಿದ್ದರು. ಪೀಲೆ 1956-77ರವರೆಗೆ 757 ಗೋಲು ಗಳಿಸಿ 3ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ಭಾರತಕ್ಕೆ ಆಗಮಿಸಿದ ಟೀಂ ಇಂಡಿಯಾ ಆಟಗಾರರು: ಕ್ವಾರಂಟೈನ್​ ಇಲ್ಲದೇ ಮನೆ ತಲುಪಿದ ಪ್ಲೇಯರ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.