ಅಸನ್ಸಿಯನ್(ಪರಾಗ್ವೆ): ಬ್ರೆಜಿಲ್ ಹಾಗೂ ಬಾರ್ಸಿಲೋನಾದ ಮಾಜಿ ಫುಟ್ಬಾಲ್ ಆಟಗಾರ ರೊನಾಲ್ಡಿನೋ ಹಾಗೂ ಅವರ ಸಹೋದರ ರೊಬರ್ಟೊ ಆಸಿಸ್ ಅವರನ್ನು ನಕಲಿ ಪಾಸ್ಪೋರ್ಟ್ ಬಳಕೆ ಮಾಡಿ ಅಕ್ರಮವಾಗಿ ಪೆರಾಗ್ವೆ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
39 ವರ್ಷದ ರೋನಾಲ್ಡಿನೋ, 49 ವರ್ಷದ ರೊಬರ್ಟೊ ಆಸೀಸ್ ಅವರನ್ನು ಪೆರಾಗ್ವೆಯ ರೆಸಾರ್ಟ್ ಯಾಚ್ ಮತ್ತು ಗಾಲ್ಫ್ ಕ್ಲಬ್‌ನಲ್ಲಿ ಬುಧವಾರ ರಾತ್ರಿ ಬಂಧಿಸಲಾಗಿದೆ.
ರೊನಾಲ್ಡಿನೋ ನಕಲಿ ಪಾಸ್ ಪೋರ್ಟ್ ಬಳಸಿದ್ದಾರೆ. ಅದೊಂದು ದೊಡ್ಡ ಅಪರಾಧವಾದ್ದರಿಂದ ಅವರನ್ನು ಬಂಧಿಸಲು ಆಜ್ಞೆ ಮಾಡಲಾಗಿತ್ತು. ನಾವು ಅವರು ಕ್ರೀಡಾ ಜನಪ್ರಿಯತೆಯನ್ನು ಗೌರವಿಸುತ್ತೇವೆ. ಆದರೆ ಕಾನೂನನ್ನು ಯಾರಾದರೂ ಗೌರವಿಸಬೇಕು ಎಂದು ಪೆರಾಗ್ವೆ ಆಂತರಿಕ ವ್ಯವಹಾರಗಳ ಸಚಿವ ಯೂಕ್ಲೈಡ್ಸ್ ಅಸೆವೆಡೊ ಸ್ಥಳೀಯ ರೇಡಿಯೋ ಸ್ಟೇಷನ್ಗೆ ಮಾಹಿತಿ ನೀಡಿದ್ದಾರೆ.
ರೊನಾಲ್ಡಿನೋ ಹಾಗೂ ಅವರ ಸಹೋದರ ಮಕ್ಕಳ ಚಾರಿಟಿ ಅಭಿಯಾನ ಹಾಗೂ ಅವರ ವೃತ್ತಿ ಜೀವನ ಕುರಿತ ಪುಸ್ತಕ ಬಿಡುಗಡೆಗಾಗಿ ಬುಧವಾರ ಪೆರಾಗ್ವೆಗೆ ಆಗಮಿಸಿದ್ದರು.
ರೋನಾಲ್ಡಿನೋ ಈ ರೀತಿ ನಕಲಿ ಪಾಸ್ಪೋರ್ಟ್ ಬಳಸಿ ಸಿಕ್ಕಿ ಬಿದ್ದಿರುವುದು ಇದೇ ಮೊದಲೇನಲ್ಲ. 2015ರಲ್ಲಿ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಬ್ರೆಜಿಲ್ ಪೊಲೀಸರು ರೊನಾಲ್ಡಿನೋ ದಾಖಲಾತಿಗಳನ್ನು ಜಪ್ತಿ ಮಾಡಿದ್ದರು.
ರೊನಾಲ್ಡಿನೋ 2018ರಲ್ಲಿ ತಮ್ಮ ಫುಟ್ಬಾಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಅವರು 2002ರಲ್ಲಿ ಬ್ರೆಜಿಲ್ಗೆ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದರು.