ETV Bharat / sports

ಪ್ರೀಮಿಯರ್ ಲೀಗ್:  ಆರ್ಸೆನಲ್ ತಂಡ ಮಣಿಸಿದ  ಮ್ಯಾಂಚೆಸ್ಟರ್ ಸಿಟಿ - ಆರ್ಸೆನಲ್​ -ಮ್ಯಾಂಚೆಸ್ಟರ್​

ಕೋವಿಡ್​ 19 ಸಾಂಕ್ರಾಮಿಕದಿಂದ ಉಂಟಾದ ದೀರ್ಘ ವಿರಾಮದ ನಂತರ ಬುಧವಾರ ಲೀಗ್​ ಪುನಾರಂಭಗೊಂಡಿದೆ. ಶೆಫೀಲ್ಡ್​ ಯುನೈಟ್​ ಮತ್ತು ಆಸ್ಟನ್​ ವಿಲ್ಲಾ ನಡುವೆ ಪಂದ್ಯ ನಡೆಯುವ ಮೂಲಕ ಲೀಗ್​​​ಗೆ ಚಾಲನೆ ದೊರೆತಿದೆ.

ಪ್ರೀಮಿಯರ್​ ಲೀಗ್​
ಮ್ಯಾಂಚೆಸ್ಟರ್​ ಸಿಟಿ- ಆರ್ಸೆನಲ್​
author img

By

Published : Jun 18, 2020, 12:30 PM IST

ಮ್ಯಾಂಚೆಸ್ಟರ್​: ಗುರುವಾರ ಮ್ಯಾಂಚೆಸ್ಟರ್​ನಲ್ಲಿ ನಡೆದ ಆರ್ಸೆನಲ್​ ಕ್ಲಬ್​ ವಿರುದ್ಧ 3-0 ಗೋಲುಗಳಿಂದ ಮ್ಯಾಂಚೆಸ್ಟರ್​ ಸಿಟಿ ಗೆಲುವು ಸಾಧಿಸಿದೆ. ಈ ಮೂಲಕ ತಂದ 2019-20 ಆವೃತ್ತಿಯನ್ನು ಜಯದೊಂದಿಗೆ ಆರಂಭಿಸಿದೆ.

ಕೋವಿಡ್​ 19 ಸಾಂಕ್ರಾಮಿಕದಿಂದ ಉಂಟಾದ ದೀರ್ಘ ವಿರಾಮದ ನಂತರ ನಡೆದ ಪ್ರೀಮಿಯರ್​ ಲೀಗ್​ ಬುಧವಾರ ಶೆಫೀಲ್ಡ್​ ಯುನೈಟ್​ ಮತ್ತು ಆಸ್ಟನ್​ ವಿಲ್ಲ ತಂಡಗಳು ಕಾದಾಡುವ ಮೂಲಕ ಪ್ರೀಮಿಯರ್​ ಲೀಗ್ ಪುನರಾರಂಭಗೊಂಡಿತು. ನಂತರ ಮ್ಯಾಂಚೆಸ್ಟರ್​ ಸಿಟಿ ಹಾಗೂ ಆರ್ಸೆನಲ್​ ನಡುವೆ ದ್ವಿತೀಯ ಪಂದ್ಯ ನಡೆಯಿತು.

ಪಂದ್ಯದ ಮೊದಲ ಗೋಲನ್ನು 45+2 ನೇ ನಿಮಿಷದಲ್ಲಿ ರಹೀಮ್​ ಸ್ಟರ್ಲಿಂಗ್​ ಹೊಡೆದರು. ನಂತರ ಕೆವಿನ್​ ಡಿ ಬ್ರೂಯ್ನ್​ ಪೆನಾಲ್ಟಿ ಮೂಲಕ ಎರಡನೇ ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಪಂದ್ಯ ಕೊನೆಗೊಳ್ಳುವ ಹಂತದಲ್ಲಿದ್ದ ವೇಳೆ 90+2 ನಿಮಿಷದಲ್ಲಿ ಫಿಲ್​ ಫೋಡೆನ್​ ಗೋಲು ಬಾರಿಸಿ ಮ್ಯಾಂಚೆಸ್ಟರ್​ ಮುನ್ನಡೆಯನ್ನು 3 ಗೋಲುಗಳಿಗೆ ವಿಸ್ತರಿಸಿದರು.

ಇದಲ್ಲದೇ ಶೆಫೀಲ್ಡ್​ ಯುನೈಟೆಡ್​ ಮತ್ತು ಆಸ್ಟನ್​​ ವಿಲ್ಲಾ ನಡುವಿನ ಹಿಂದಿನ ಪಂದ್ಯದಂತೆಯೇ ಬ್ಯಾಕ್​ ಲೈವ್ಸ್​​ ಮ್ಯಾಟರ್​ ಆಂದೋಲನಕ್ಕೆ ಬೆಂಬಲ ನೀಡುವ ಸಲುವಾಗಿ ಮಂಡಿಯೂರಿ ಕುಳಿತುಕೊಂಡರು.

ಇದಕ್ಕೂ ಹಿಂದಿನ ಶೆಫೀಲ್ಡ್​ ಯುನೈಟೆಡ್​ ಮತ್ತು ಆಸ್ಟನ್​​ ವಿಲ್ಲಾ ನಡುವಿನ ಪಂದ್ಯ ಗೋಲು ರಹಿತ ಡ್ರಾನಲ್ಲಿ ಅಂತ್ಯಗೊಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.