ಮ್ಯೂನಿಚ್(ಜರ್ಮನಿ): ಫ್ರಾನ್ಸ್ನ ಫುಟ್ಬಾಲ್ ಆಟಗಾರ ಪೌಲ್ ಪೊಗ್ಬಾ ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಹಾದಿಯನ್ನೇ ತುಳಿದಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ತಮ್ಮ ಮುಂದಿದ್ದ ಬಿಯರ್ ಬಾಟಲಿಯನ್ನು ತೆಗೆದು ಅವರು ಕೆಳಗಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
-
This time #Pogba removed the #BEER bottle. 😍#Euro2021 #EURO2020 #CristianoRonaldo #Khudro #French #CR7 pic.twitter.com/XV6TLVIPg9
— khudro manush (@KhudroM) June 16, 2021 " class="align-text-top noRightClick twitterSection" data="
">This time #Pogba removed the #BEER bottle. 😍#Euro2021 #EURO2020 #CristianoRonaldo #Khudro #French #CR7 pic.twitter.com/XV6TLVIPg9
— khudro manush (@KhudroM) June 16, 2021This time #Pogba removed the #BEER bottle. 😍#Euro2021 #EURO2020 #CristianoRonaldo #Khudro #French #CR7 pic.twitter.com/XV6TLVIPg9
— khudro manush (@KhudroM) June 16, 2021
ಯುಇಎಫ್ಎ ಯೂರೋ-2020 ಟೂರ್ನಮೆಂಟ್ನ ಪಂದ್ಯದಲ್ಲಿ ಜರ್ಮನಿ ವಿರುದ್ಧ 1-0ರಲ್ಲಿ ಫ್ರಾನ್ಸ್ ಜಯಗಳಿಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಪೌಲ್ ಪೊಗ್ಬಾ ಭಾಗವಹಿಸಿದ್ದರು. ಈ ವೇಳೆ ತಮ್ಮ ಮುಂದೆ ಮೇಜಿನ ಮೇಲಿದ್ದ ಬಿಯರ್ ಬಾಟಲಿಯನ್ನು ಕೆಳಗಿಟ್ಟರು.
ಯುಇಎಫ್ಎ ಯೂರೋ-2020 ಟೂರ್ನಮೆಂಟ್ನಲ್ಲಿ ಎರಡನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. ಈ ಮೊದಲು ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇದೇ ರೀತಿಯಲ್ಲಿ ಕೊಕಾಕೋಲಾ ಬಾಟಲಿಯೊಂದನ್ನು ಪಕ್ಕಕ್ಕೆ ಎತ್ತಿಟ್ಟು, 'ನೀರು ಕುಡಿಯಿರಿ ಆರೋಗ್ಯಕ್ಕೆ ಒಳ್ಳೆಯದು' ಎಂಬ ಸಂದೇಶ ನೀಡಿದ್ದರು.
ಪೌಲ್ ಪೊಗ್ಬಾ ಮುಸ್ಲಿಂ ಧರ್ಮೀಯ ಆಗಿದ್ದು ಮದ್ಯ ಸೇವನೆ ವರ್ಜಿತ. ಹಾಗಾಗಿ, ಅವರು ಬಿಯರ್ ಬಾಟಲಿಯನ್ನು ಪಕ್ಕಕ್ಕೆ ಸರಿಸಿದರು ಎಂದು ಹೇಳಲಾಗುತ್ತಿದೆ.