ಮ್ಯಾರ್ಗೋ(ಗೋವಾ): ಎಟಿಕೆ ಮೋಹನ್ ಬಗಾನ್ ಮಣಿಸಿದ ಮುಂಬೈ ಸಿಡಿ ಎಫ್ಸಿ ತನ್ನ ಚೊಚ್ಚಲ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಪ್ರಶಸ್ತಿ ಎತ್ತಿ ಹಿಡಿದಿದೆ.
ಶನಿವಾರ ನಡೆ ಫೈನಲ್ ಪಂದ್ಯದಲ್ಲಿ ಬಿಪಿನ್ ಸಿಂಗ್ 90ನೇ ನಿಮಿಷದಲ್ಲಿ ಸಿಡಿಸಿದ ಗೋಲಿನ ನೆರವಿನಿಂದ ತಮ್ಮ ನೆಚ್ಚಿನ ಕ್ರೀಡಾಂಗಣ ಫಟೋರ್ಡದಲ್ಲಿ ಮುಂಬೈ ಸಿಟಿ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿತು.
-
🏆 𝐇𝐄𝐑𝐎 𝐈𝐒𝐋 𝟐𝟎𝟐𝟎/𝟐𝟏 𝐂𝐇𝐀𝐌𝐏𝐈𝐎𝐍𝐒 🏆#MCFCATKMB #HeroISLFinal #TrophyLekeAa 🏆 #AamchiCity 🔵 #MCFChamp1ons pic.twitter.com/YGfTOFhfVH
— Mumbai City FC (@MumbaiCityFC) March 13, 2021 " class="align-text-top noRightClick twitterSection" data="
">🏆 𝐇𝐄𝐑𝐎 𝐈𝐒𝐋 𝟐𝟎𝟐𝟎/𝟐𝟏 𝐂𝐇𝐀𝐌𝐏𝐈𝐎𝐍𝐒 🏆#MCFCATKMB #HeroISLFinal #TrophyLekeAa 🏆 #AamchiCity 🔵 #MCFChamp1ons pic.twitter.com/YGfTOFhfVH
— Mumbai City FC (@MumbaiCityFC) March 13, 2021🏆 𝐇𝐄𝐑𝐎 𝐈𝐒𝐋 𝟐𝟎𝟐𝟎/𝟐𝟏 𝐂𝐇𝐀𝐌𝐏𝐈𝐎𝐍𝐒 🏆#MCFCATKMB #HeroISLFinal #TrophyLekeAa 🏆 #AamchiCity 🔵 #MCFChamp1ons pic.twitter.com/YGfTOFhfVH
— Mumbai City FC (@MumbaiCityFC) March 13, 2021
ಪಂದ್ಯಾರಂಭದಲ್ಲಿ ಡೇವಿಡ್ ವಿಲಿಯಮ್ಸನ್ 18 ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಎಟಿಕೆ ಮೋಹನ್ ಬಗಾನ್ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ 29ನೇ ನಿಮಿಷದಲ್ಲಿ ಜೋಸ್ ಲೂಯಿಸ್ ಎಸ್ಪಿನೋಸಾ ಮುಂಬೈ ಪರ ಗೋಲು ಸಿಡಿಸುವ ಮೂಲಕ ಪಂದ್ಯವನ್ನು 1-1ರಲ್ಲಿ ಸಮಬಲ ಸಾಧಿಸಲು ನೆರವಾದರು. ಆದರೆ ಕೊನೆಯ ನಿಮಿಷದಲ್ಲಿ ಬಿಪಿನ್ ಸಿಡಿಸಿದ ಗೋಲಿನ ನೆರವಿನಿಂದ ಮುಂಬೈ ತನ್ನ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಿತು.
-
𝐓𝐇𝐄 𝐌𝐀𝐓𝐂𝐇-𝐖𝐈𝐍𝐍𝐄𝐑 for @MumbaiCityFC 👏#HeroISLFinal #MCFCATKMB #LetsFootball pic.twitter.com/OqBho4Mr7K
— Indian Super League (@IndSuperLeague) March 13, 2021 " class="align-text-top noRightClick twitterSection" data="
">𝐓𝐇𝐄 𝐌𝐀𝐓𝐂𝐇-𝐖𝐈𝐍𝐍𝐄𝐑 for @MumbaiCityFC 👏#HeroISLFinal #MCFCATKMB #LetsFootball pic.twitter.com/OqBho4Mr7K
— Indian Super League (@IndSuperLeague) March 13, 2021𝐓𝐇𝐄 𝐌𝐀𝐓𝐂𝐇-𝐖𝐈𝐍𝐍𝐄𝐑 for @MumbaiCityFC 👏#HeroISLFinal #MCFCATKMB #LetsFootball pic.twitter.com/OqBho4Mr7K
— Indian Super League (@IndSuperLeague) March 13, 2021
ಟೂರ್ನಿಯಲ್ಲಿ ಎರಡೂ ತಂಡಗಳು 12 ಗೆಲುವು ಮತ್ತು 4 ಗೋಲು ಗಳಿಸಿ ಮೊದಲೆರಡು ಸ್ಥಾನದಲ್ಲಿದ್ದವು. ಸೆಮಿಫೈನಲ್ನಲ್ಲಿ ಮುಂಬೈ ಗೋವಾ ವಿರುದ್ಧ ಮೋಹನ್ ಬಗಾನ್ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಲೀಗ್ನಲ್ಲಿ ಮೋಹನ್ ಬಗಾನ್ ವಿರುದ್ಧ ಮುಂಬೈ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ಸಾಧಿಸಿತ್ತು.