ETV Bharat / sports

ಐಎಸ್​ಎಲ್​ 7: ಎಸ್​ಸಿ ಈಸ್ಟ್​ ಬೆಂಗಾಲ್​ ವಿರುದ್ಧ ಮುಗ್ಗರಿಸಿದ ಬೆಂಗಳೂರು ಎಫ್​ಸಿ

ಎರಡೂ ತಂಡಗಳೂ ತಮ್ಮ 10ನೇ ಪಂದ್ಯವನ್ನಾಡಿದ್ದು, ಬೆಂಗಳೂರು ತಂಡ ಟೂರ್ನಿಯಲ್ಲಿ 4ನೇ ಸೋಲು ಕಂಡರೆ, ಈಸ್ಟ್​ ಬೆಂಗಾಲ್​ ತನ್ನ 2ನೇ ಜಯ ದಾಖಲಿಸಿದೆ.

author img

By

Published : Jan 9, 2021, 10:32 PM IST

ಎಸ್​ಸಿ ಈಸ್ಟ್​ ಬೆಂಗಾಲ್​ ವಿರುದ್ಧ ಮುಗ್ಗರಿಸಿದ ಬೆಂಗಳೂರು ಎಫ್​ಸಿ
ಐಎಸ್​ಎಲ್​ 7

ಗೋವಾ: ಇಂಡಿಯನ್ ಸೂಪರ್​ ಲೀಗ್​ನ ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್​ಸಿ ವಿರುದ್ಧ ಈಸ್ಟ್​ ಬೆಂಗಾಲ್ 1-0 ಅಂತರದಲ್ಲಿ ಗೆಲುವು ಸಾಧಿಸಿದೆ.

ಎರಡೂ ತಂಡಗಳೂ ತಮ್ಮ 10ನೇ ಪಂದ್ಯವನ್ನಾಡಿದ್ದು, ಬೆಂಗಳೂರು ತಂಡ ಟೂರ್ನಿಯಲ್ಲಿ 4ನೇ ಸೋಲು ಕಂಡರೆ, ಈಸ್ಟ್​ ಬೆಂಗಾಲ್​ ತನ್ನ 2ನೇ ಜಯ ದಾಖಲಿಸಿದೆ.

ಪಂದ್ಯದ 20ನೇ ನಿಮಿಷದಲ್ಲಿ ಈಸ್ಟ್​ ಬೆಂಗಾಲ್​ನ ವಿಲ್ಲೆ ಮ್ಯಾಟಿ ಸ್ಟೈನ್ಮನ್ ಗೋಲು ಸಿಡಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳಿಂದ ಯಾವುದೇ ಗೋಲು ಬಾರದಿದ್ದರಿಂದ ಈಸ್ಟ್​ ಬೆಂಗಾಲ್​ ಅಂತಿಮವಾಗಿ 1-0ಯಲ್ಲಿ ಬೆಂಗಳೂರು ಎಫ್​ಸಿಯನ್ನು ಮಣಿಸಿತು.

ಬೆಂಗಳೂರು ಎಫ್‌ಸಿ ಆಡಿರುವ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 3ರಲ್ಲಿ ಡ್ರಾ ಮತ್ತು 4ರಲ್ಲಿ ಸೋತಿದ್ದು 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

9 ಪಂದ್ಯಗಳಲ್ಲಿ 22 ಅಂಕ ಹೊಂದಿರುವ ಮುಂಬೈ ಸಿಟಿ ಅಗ್ರಸ್ಥಾನದಲ್ಲಿದ್ದರೆ, ಎಟಿಕೆ ಮೋಹನ್ ಬಗಾನ್ 9 ಪಂದ್ಯಗಳಿಂದ 20 ಅಂಕಪಡೆದು 2ನೇ ಸ್ಥಾನದಲ್ಲಿ ಮುಂದುವರಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.