ETV Bharat / sports

ಬ್ಯೂರನ್ ಐರಿಸ್ ಸ್ಲಮ್​ನಿಂದ ಅರ್ಜೆಂಟೀನಾಕ್ಕೆ ವಿಶ್ವಕಪ್​ ತಂದುಕೊಡುವವರೆಗೆ... ಮರಡೋನಾರ ಏಳು-ಬೀಳಿನ ಫುಟ್​ಬಾಲ್ ಪಯಣ - 1986 ವಿಶ್ವಕಪ್​

ಮರಡೋನಾ ಅಕ್ಟೋಬರ್​ 30 1960ರಲ್ಲಿ ಬ್ಯೂನಸ್​ ಐರಿಸ್​ನ ವಿಲ್ಲ ಫಿಯಾರಿಟೊ ಎಂಬಲ್ಲಿ ತಮ್ಮ ಪೋಷಕರ 8 ಮಕ್ಕಳಲ್ಲಿ 5ನೇಯವರಾಗಿ ಜನಸಿದ್ದರು. ಅರ್ಜೆಂಟೀನಾದ ನೆಚ್ಚಿನ ಮಗ, ವಿಶ್ವದ ಸಾರ್ವಕಾಲಿಕ ಫುಟ್​ಬಾಲ್​ ಆಟಗಾರರಲ್ಲಿ ಒಬ್ಬರಾಗಿದ್ದ ಮರಡೋನಾ ಬುಧವಾರ ತಮ್ಮ 60ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಬ್ಯೂನಸ್​ ಐರಿಸ್​ನ ಬೀದಿಗಳಲ್ಲಿ ಬೆಳೆದು ಒಬ್ಬ ಪರಿಪೂರ್ಣ ಫುಟ್​ಬಾಲ್ ಆಟಗಾರ ಎನಿಸಿಕೊಂಡಿದ್ದರು. ಇವರು 1986 ವಿಶ್ವಕಪ್​ನಲ್ಲಿ ನಾಯಕನಾಗಿ ಅರ್ಜಿಂಟೀನಾಕ್ಕೆ 2ನೇ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದರು.

ಡಿಯಾಗೋ ಮರಡೋನಾ ನಿಧನ
ಡಿಯಾಗೋ ಮರಡೋನಾ ನಿಧನ
author img

By

Published : Nov 26, 2020, 5:57 AM IST

Updated : Nov 26, 2020, 7:32 AM IST

ಬ್ಯೂರನ್ ಐರಿಸ್​: ಗೋಲ್ಡನ್​ ಬಾಯ್​, ಮಾಪ್​ಟಾಪ್​, ಕಾಸ್ಮಿಕ್ ಕೈಟ್​, ಗಾಡ್​ ಎಂಬ ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಫುಟ್​ಬಾಲ್​ ದಿಗ್ಗಜ ಅರ್ಜೆಂಟೀನಾದ ಡಿಯೇಗೋ ಅರ್ಮಾಂಡೋ ಮರಡೋನಾ ಬುಧವಾರ ರಾತ್ರಿ ಹೃದಯಾಘಾತದಿಂದ ನಿಧರಾಗಿದ್ದಾರೆ.

ಮರಡೋನಾ ಅಕ್ಟೋಬರ್​ 30 1960ರಲ್ಲಿ ಬ್ಯೂನಸ್​ ಐರಿಸ್​ನ ವಿಲ್ಲ ಫಿಯಾರಿಟೊ ಎಂಬಲ್ಲಿ ತಮ್ಮ ಪೋಷಕರ 8 ಮಕ್ಕಳಲ್ಲಿ 5ನೇಯವರಾಗಿ ಜನಸಿದ್ದರು. ಅರ್ಜೆಂಟೀನಾದ ನೆಚ್ಚಿನ ಮಗ, ವಿಶ್ವದ ಸಾರ್ವಕಾಲಿಕ ಫುಟ್​ಬಾಲ್​ ಆಟಗಾರರಲ್ಲಿ ಒಬ್ಬರಾಗಿದ್ದ ಮರಡೋನಾ ಬುಧವಾರ ತಮ್ಮ 60ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಬ್ಯೂನಸ್​ ಐರಿಸ್​ನ ಬೀದಿಗಳಲ್ಲಿ ಬೆಳೆದು ಒಬ್ಬ ಪರಿಪೂರ್ಣ ಫುಟ್​ಬಾಲ್ ಆಟಗಾರ ಎನಿಸಿಕೊಂಡಿದ್ದರು. ಇವರು 1986 ವಿಶ್ವಕಪ್​ನಲ್ಲಿ ನಾಯಕನಾಗಿ ಅರ್ಜಿಂಟೀನಾಕ್ಕೆ 2ನೇ ಫಿಫಾ ವಿಶ್ವಕಪ್ ತಂದುಕೊಟ್ಟಿದ್ದರು.

3ನೇ ವರ್ಷದ ಜನ್ಮದಿನದ ಉಡುಗೊರೆಯಾಗಿ ಫುಟ್​ಬಾಲ್​ ಗಿಫ್ಟ್​ ಪಡೆದಿದ್ದ ಮರಡೋನಾ ನಂತರ ತಮ್ಮ ಜೀವನವನ್ನೇ ಅದಕ್ಕೆ ಅರ್ಪಿಸಿಕೊಂಡರು. ಬಾಲ್ಯದಲ್ಲೇ ಫುಟ್ಬಾಲ್ ಆಟದ ಹುಚ್ಚನಾಗಿದ್ದ ಅವರು 8ನೇ ವರ್ಷದಲ್ಲಿ ಗೆಳೆಯರ ಜೊತೆಗೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸ್ಥಳೀಯ ಫುಟ್ಬಾಲ್ ಕ್ಲಬ್‌ನ ಸದಸ್ಯರೊಬ್ಬರ ಕಣ್ಣಿಗೆ ಬಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ಅರ್ಜಿಂಟೀನೋಸ್​ ಕ್ಲಬ್​ ಪರ ಒಪ್ಪಂದ ಮಾಡಿಕೊಳ್ಳುವ ಮೂಲಕ ಮರಡೋನಾ ಫುಟ್ಬಾಲ್ ಪಯಣ ಆರಂಭಿಸಿದರು. ನಂತರ 16ನೇ ವಯಸ್ಸಿನಲ್ಲಿ ಫರ್ಸ್​ ಡಿವಿಸನ್​ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

ಮರಡೋನಾ ರಾಷ್ಟ್ರೀಯ ತಂಡಕ್ಕಾಗಿ ಆಡಿದ ಅತ್ಯಂತ ಕಿರಿಯ ಅರ್ಜೆಂಟೀನಾ ಆಟಗಾರ ಎನಿಸಿಕೊಂಡಿದ್ದರು. ಹಂಗೇರಿ ವಿರುದ್ಧ ಸೌಹಾರ್ದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಸಾಕರ್​ಗೆ ಪಾದಾರ್ಪಣೆ ಮಾಡಿದರು. ಅವರ ವಯಸ್ಸಿನ ನಿಯಮದಿಂದ ಹಾಗೂ ಕೋಚ್​ ಬೆಂಬಲವಿಲ್ಲದ್ದರಿಂದ 1978 ರ ವಿಶ್ವಕಪ್ ವಿಜೇತ ತಂಡದಿಂದ ಹೊರಗುಳಿದರಾದೂ, ಅವರು ನಂತರ ವರ್ಷದಲ್ಲೇ ಅಂಡರ್​ 20 ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದರು.

ನಂತರ ಹಿಂತಿರುಗಿ ನೋಡದ ಮರಡೋನಾ 1979ರಲ್ಲಿ ವರ್ಷದ ದಕ್ಷಿಣ ಅಮೆರಿಕಾ ಆಟಗಾರ ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡರು. 1986ರ ವಿಶ್ವಕಪ್​ನಲ್ಲಿ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದರು. 1977ರಿಂದ 1994ರವರೆಗೆ ಅವರು 91 ಪಂದ್ಯಗಳನ್ನಾಡಿದ್ದು, 34 ಗೋಲು ಗಳಿಸಿದ್ದಾರೆ. 1982ರಲ್ಲಿ ದಾಖಲೆಯ ಬೆಲೆಗೆ ಬಾರ್ಸಿಲೋನಾ ಕ್ಲಬ್ ಸೇರಿದ ಅವರು, ನಂತರ ನಪೋಲಿ, ಸೆವಿಲ್ಲಾ ಕ್ಲಬ್​ಗಳನ್ನು ಪ್ರತಿನಿಧಿಸಿದ್ದರು. ಒಟ್ಟಾರೆ 490 ಪಂದ್ಯಗಳನ್ನಾಡಿದ್ದು, 259 ಗೋಲು ಸಿಡಿಸಿದ್ದಾರೆ.

ವಿವಾದ:

ಫುಟ್​ಬಾಲ್​ ಜಗತ್ತಿನಲ್ಲಿ ಮಿಂಚಿದ್ದರೂ ಮರಡೋನಾ ವಿವಾಧಗಳಿಂದ ಹೊರೆತಾಗಿಲ್ಲ. ಮಾಧಕ ವ್ಯಸನಿಯಾಗಿದ್ದ ಅವರು 1991ರಲ್ಲಿ ಡ್ರಗ್ಸ್​ ಸೇವಿಸಿ 15 ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದರು. ಮತ್ತೆ 1993ರಲ್ಲಿ ಮತ್ತೊಂದು ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿದರು.1994ರಲ್ಲಿ ಡೂಪಿಂಗ್​ ಟೆಸ್ಟ್​ನಲ್ಲಿ ಅನುತ್ತೀರ್ಣರಾದರು ಮನೆ ಸೇರಿದರು. 1994ರಲ್ಲಿ ಕ್ಲಬ್​ ಪಂದ್ಯ ಆಡುವಾಗ ಮತ್ತೊಂದು ಬಾರಿ ಡೂಪಿಂಗ್​ನಲ್ಲಿ ಸಿಕ್ಕಿ ಬೀಳುವ ಮೂಲಕ ತಮ್ಮ 37ನೇ ಜನ್ಮದಿನದಂದೇ ವೃತ್ತಿ ಬದುಕಿಗೆ ಗುಡ್​ ಬೈ ಹೇಳಿದರು.

Last Updated : Nov 26, 2020, 7:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.