ನವದೆಹಲಿ : ಬೆಂಗಳೂರು ಎಫ್ಸಿ ತಂಡದ ಆಟಗಾರರ ಮೇಲೆ ಮಾಲ್ಡೀವ್ಸ್ ಕ್ರೀಡಾ ಸಚಿವ ಅಹ್ಮದ್ ಮಹ್ಲೂಫ್ ಕೋವಿಡ್- 19 ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದು, ಬಿಎಫ್ಸಿ ಮತ್ತು ಎಟಿಕೆ ಮೋಹನ್ ಬಗಾನ್ ನಡುವಿನ ಪಂದ್ಯಗಳು ನಡೆಯುವುದು ಅನುಮಾನವಾಗಿದೆ.
ಮಹ್ಲೂಫ್ ಬೆಂಗಳೂರು ಎಫ್ಸಿ ಯಾವ ರೀತಿ ಕೋವಿಡ್-19 ಪ್ರೋಟೋಕಾಲ್ ಉಲ್ಲಂಘನೆ ಮಾಡಿದೆ ಎಂದು ವಿವರಿಸಿಲ್ಲ. ಆದರೆ, ಬೆಂಗಳೂರು ಎಫ್‌ಸಿಯ ವರ್ತನೆ ಸ್ವೀಕರಾರ್ಹವಲ್ಲ ಎಂದಿರುವ ಅವರು, ತಕ್ಷಣ ಕ್ಲಬ್, ಮಾಲ್ಡೀವ್ಸ್ ತೊರೆಯಬೇಕೆಂದು ಸೂಚಿಸಿದ್ದಾರೆ.
"ಬೆಂಗಳೂರು ಎಫ್‌ಸಿಯ ನಡವಳಿಕೆ ಸ್ವೀಕಾರಾರ್ಹವಲ್ಲ. ಕಲ್ಬ್ ಹೆಚ್‌ಪಿಎ ಮತ್ತು ಎಎಫ್ಸಿಯ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ.
ಈ ಕೃತ್ಯವನ್ನು ನಾವು ರಂಜಿಸಲು ಸಾಧ್ಯವಾಗದ ಕಾರಣ ಕ್ಲಬ್ ತಕ್ಷಣವೇ ಮಾಲ್ಡೀವ್ಸ್ ಬಿಟ್ಟು ಹೊರಡಬೇಕು. ಇದು ಸಾರ್ವಜನಿಕರಿಂದ ಒತ್ತಡವೂ ಆಗಿದೆ " ಎಂದು ಮಹ್ಲೂಫ್ ಟ್ವೀಟ್ ಮಾಡಿದ್ದಾರೆ.
ಮೇ 11ರಂದು ಎಎಫ್‌ಸಿ ಕಪ್ ಪ್ಲೇಆಫ್‌ನಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತಂಡವಾದ ಬೆಂಗಳೂರು ಸ್ಥಳೀಯ ತಂಡ ಈಗಲ್ಸ್ ಎಫ್‌ಸಿಯನ್ನು ಎದುರಿಸಬೇಕಿತ್ತು. ಆದರೆ, ಮಾಲ್ಡೀವ್ಸ್‌ನ ಫುಟ್‌ಬಾಲ್ ಅಸೋಸಿಯೇಷನ್ ಸರ್ಕಾರದ ನಿರ್ಧಾರ ಬಿಟ್ಟು ಮುಂದೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಮಾಲ್ಡೀವ್ಸ್ನಲ್ಲಿ ನಡೆಯಲಿರುವ ಗುಂಪು ಹಂತದ ಪಂದ್ಯಗಳನ್ನು ಮುಂದೂಡುವಂತೆ ಕೇಳಿಕೊಳ್ಳಲಾಗಿದೆಯೆಂದು ತಿಳಿಸಿದೆ.