ಪ್ಯಾರಿಸ್ : ಅರ್ಜೆಂಟೀನಾದ ಜನಪ್ರಿಯ ಸ್ಟ್ರೈಕರ್ ಲಿಯೋನಲ್ ಮೆಸ್ಸಿ 2021ರ ಬಲೋನ್ ಡಿ'ಓರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಿಎಸ್ಜಿ ಸ್ಟಾರ್ ವೃತ್ತಿ ಜೀವನದಲ್ಲಿ 7ನೇ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ಯಾರೀಸ್ ಸೇಂಟ್ ಜರ್ಮೈನ್ ತಂಡದಲ್ಲಿ ಆಡುವ 34 ವರ್ಷದ ಮೆಸ್ಸಿ 2009, 2010, 2011, 2012, 2015, 2019 ಮತ್ತು 2021ರಲ್ಲಿ ಬಲೋನ್ ಡಿ'ಓರ್ ಪ್ರಶಸ್ತಿ ಪಡೆದಿದ್ದಾರೆ. ಅರ್ಜೆಂಟೀನಾಗೆ ಮೊದಲ ಬಾರಿ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ತಂದುಕೊಟ್ಟಿದ್ದಕ್ಕೆ ಮೆಸ್ಸಿಗೆ ಈ ಪ್ರಶಸ್ತಿ ಸಂದಿದೆ.
7ನೇ ಬಾರಿ ಲಿಯೋನಲ್ ಮೆಸ್ಸಿ ಬಲೋನ್ ಡಿ'ಓರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು Ballon d'Or ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ. ಬೇಯರ್ನ್ ಮ್ಯುನಿಚ್ ತಂಡದ ರಾಬರ್ಟ್ ಲೆವಾಂಡೋವ್ಸ್ಕಿ 2ನೇ ಮತ್ತು ಚೆಲ್ಸಿ ತಂಡದ ಜಾರ್ಗಿನೋ 3ನೇ ಸ್ಥಾನ ಪಡೆದು ರನ್ನರ್ ಅಪ್ ಆಗಿದ್ದಾರೆ.
-
HERE IS THE WINNER!
— Ballon d'Or #ballondor (@francefootball) November 29, 2021 " class="align-text-top noRightClick twitterSection" data="
SEVEN BALLON D’OR FOR LIONEL MESSI! #ballondor pic.twitter.com/U2SywJmruC
">HERE IS THE WINNER!
— Ballon d'Or #ballondor (@francefootball) November 29, 2021
SEVEN BALLON D’OR FOR LIONEL MESSI! #ballondor pic.twitter.com/U2SywJmruCHERE IS THE WINNER!
— Ballon d'Or #ballondor (@francefootball) November 29, 2021
SEVEN BALLON D’OR FOR LIONEL MESSI! #ballondor pic.twitter.com/U2SywJmruC
ಪಿಎಸ್ಜಿ ತಂಡದವರೇ ಆದ ಜಿಯಾನ್ಲುಯಿಗಿ ಡೊನ್ನಾರುಮ್ಮಾ ಗೋಲ್ ಕೀಪರ್ಗೆ ನೀಡುವ ಯಾಶಿನ್ ಟ್ರೋಫಿಯನ್ನು, ಬಾರ್ಸಿಲೋನಾದ ಪೆಡ್ರಿ ಗೊನ್ಜಾಲೆಜ್ ಅತ್ಯುತ್ತಮ ಯುವ ಆಟಗಾರರಿಗೆ ನೀಡುವ ಕೋಪಾ ಟ್ರೋಪಿಯನ್ನು ಪಡೆದರು.
ಮಹಿಳೆಯರ ವಿಭಾಗದಲ್ಲಿ ಸ್ಪೈನ್‌ನ ಫುಟ್ಬಾಲ್ ಆಟಗಾರ್ತಿ ಅಲೆಕ್ಸಿಯಾ ಪುಟೆಲ್ಲಾ ಅವರುಬಲೋನ್ ಡಿ'ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2018ರಿಂದ ಮಹಿಳೆಯ ವಿಭಾಗದ ಬಲೋನ್ ಡಿ'ಓರ್ ಪ್ರಶಸ್ತಿ ನೀಡಲು ಆರಂಭಿಸಲಾಗಿದೆ.
27 ವರ್ಷದ ಅಲೆಕ್ಸಿಯಾ ಡಿ'ಓರ್ ಪ್ರಶಸ್ತಿ ಪಡೆದ 3ನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಮೆಗನ್ ರಾಪಿನೊ ಮತ್ತು ಅದಾ ಹಿಗರ್‌ಬರ್ಗ್ ಮೊದಲೆರಡು ಪ್ರಶಸ್ತಿ ಪಡೆದುಕೊಂಡಿದ್ದರು.
ಇದನ್ನೂ ಓದಿ:ಕಳಪೆ ಫಾರ್ಮ್; ಟೀಂ ಇಂಡಿಯಾ ಉಪ ನಾಯಕನ ಪರ ಕೋಚ್ ದ್ರಾವಿಡ್ ಬ್ಯಾಟಿಂಗ್