ETV Bharat / sports

ಬಾರ್ಸಿಲೋನಾದ ನೂತನ ಅಧ್ಯಕ್ಷರಾಗಿ ಜೋನ್ ಲಾಪೋರ್ಟಾ ಆಯ್ಕೆ

author img

By

Published : Mar 8, 2021, 9:29 AM IST

30,184 ಮತಗಳೊಂದಿಗೆ ಜೋ ಲಾಪೋರ್ಟಾ ಲಾ ಲಿಗಾ ಕ್ಲಬ್ ಬಾರ್ಸಿಲೋನಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.

Joan Laporta elected new president of Barcelona
ಬಾರ್ಸಿಲೋನಾದ ನೂತನ ಅಧ್ಯಕ್ಷರಾಗಿ ಜೋನ್ ಲಾಪೋರ್ಟಾ ಆಯ್ಕೆ

ಬಾರ್ಸಿಲೋನಾ: ಜೋನ್​ ಲಾಪೋರ್ಟಾ ಲಾ ಲಿಗಾ ಕ್ಲಬ್ ಬಾರ್ಸಿಲೋನಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಭಾನುವಾರ ನಡೆದ ಅಧ್ಯಕ್ಷ ಮತ್ತು ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಕ್ಲಬ್ ಸದಸ್ಯರು ಲಾಪೋರ್ಟಾ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.

ಒಟ್ಟು 55,611 ಸದಸ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದು 30,184 ಮತಗಳೊಂದಿಗೆ ಲಾಪೋರ್ಟಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ ಎಂದು ಎಫ್‌ಸಿ ಬಾರ್ಸಿಲೋನಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಐಎಸ್‌ಎಲ್‌ ಫುಟ್ಬಾಲ್ ಟೂರ್ನಿ: ಇಂದು ಮುಂಬೈ- ಗೋವಾ ಎಫ್​​ಸಿ ಫೈಟ್​

ಲಾಪೋರ್ಟಾ ಬಾರ್ಸಿಲೋನಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಬಾರ್ಸಿಲೋನಾದ ಇನ್‌ಸ್ಟಿಟ್ಯೂಟ್ ಡಿ ಎಸ್ಟೂಡಿಸ್ ಸುಪೀರಿಯರ್ಸ್ ಅಬತ್ ಒಲಿಬಾದಲ್ಲಿ ಕಂಪನಿ ಕಾನೂನು ಮತ್ತು ತೆರಿಗೆ ತಜ್ಞ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.