ಕೋಲ್ಕತ್ತಾ : ಇಂಡಿಯನ್ ಸೂಪರ್ ಲೀಗ್‌ನ ನಿರಂತರ ಪಂದ್ಯಗಳು ಇತರ ಕ್ರೀಡೆಗಳಿಗೆ ತಮ್ಮ ಕ್ಯಾಲೆಂಡರ್‌ಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡಬೇಕು ಎಂದು ಬಿಸಿಸಿಐ ಅಧ್ಯಕ್ಷ ಮತ್ತು ಎಟಿಕೆ ಮೋಹನ್ ಬಗಾನ್ ಸಹ ಮಾಲೀಕ ಸೌರವ್ ಗಂಗೂಲಿ ಹೇಳಿದ್ದಾರೆ.
ಈ ಬಾರಿಯ ಸೀಸನ್ ಐಎಸ್ಎಲ್ -7 ಸರಣಿ ಮಾರ್ಗೊವಾದಲ್ಲಿ ಮುಕ್ತಾಯಗೊಂಡಿದೆ. "ಭಾರತವು ಅತ್ಯಂತ ಸವಾಲಿನ ಸಮಯದಲ್ಲೂ ದೀರ್ಘಕಾಲೀನ ಕ್ರೀಡಾಕೂಟಗಳನ್ನು ಆಯೋಜಿಸಬಹುದು ಎಂದು ಐಎಸ್ಎಲ್ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸೌರವ್ ಗಂಗೂಲಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಐಎಸ್ಎಲ್ ಸೂಪರ್ ಲೀಗ್ ಆಯೋಜನೆಯು ಭಾರತದಲ್ಲಿನ ಅನೇಕ ಕ್ರೀಡಾಕೂಟಗಳಿಗೆ ಹಾಗೂ ಕ್ರೀಡೆಗಳಿಗೆ ಪ್ರೇರಣೆ ಎಂದು ಇದೇ ವೇಳೆ ದಾದಾ ಬಣ್ಣಿಸಿದ್ದಾರೆ. ಬಿಸಿಸಿಐ ಅಧ್ಯಕ್ಷರು, ಐಎಸ್‌ಎಲ್‌ನ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು "ಭಾರತೀಯ ಕ್ರೀಡಾ ಉದ್ಯಮಕ್ಕೆ ಹೊಸ ಮಾನದಂಡ" ಎಂದಿದ್ದಾರೆ. ಈ ಸವಾಲಿನ ಕಾಲದಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ನಿಜಕ್ಕೂ ಭಾರತೀಯ ಕ್ರೀಡಾ ಜಗತ್ತಿಗೆ ಹೊಸ ಮಾನದಂಡವಾಗಿದೆ" ಎಂದು ಗಂಗೂಲಿ ಬಣ್ಣಿಸಿದ್ದಾರೆ.
ಓದಿ : ಐಎಸ್ಎಲ್: ಮೋಹನ್ ಬಗಾನ್ ಮಣಿಸಿ ಚೊಚ್ಚಲ ಟ್ರೋಫಿ ಗೆದ್ದ ಮುಂಬೈ ಸಿಟಿ
ಐಎಸ್ಎಲ್ ಸಂಘಟಕರು, ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್, ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಭಾರತದ ಮೊದಲ ಪ್ರಮುಖ ಲೈವ್ ಕ್ರೀಡಾಕೂಟವನ್ನು ಕೊರೊನಾ ನಿಯಮಗಳ ಅನ್ವಯ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಭಾರಿ ಎಫ್‌ಎಸ್‌ಡಿಎಲ್ ಗೋವಾದಲ್ಲಿ 14 ಹೋಟೆಲ್‌ಗಳಲ್ಲಿ 18 ಜೈವಿಕ ಆವಾಸಗಳನ್ನ ಸ್ಥಾಪಿಸಿ, 1600 ಜನರಿಗೆ ವಸತಿ ಮತ್ತು 70000 ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುವ ಮೂಲಕ ಆಟಗಾರರನ್ನು ಕೋವಿಡ್ನಿಂದ ರಕ್ಷಿಸಿ ಫುಟ್ಬಾಲ್ ಅಂಗಳಕ್ಕೆ ಕರೆತರುವಲ್ಲಿ ಯಶಸ್ವಿಯಾಗಿತ್ತು. ಬಯೋ ಬಬಲ್( ಜೈವಿಕ ಗುಳ್ಳೆ ಅಥವಾ ಆವಾಸ) ಗಳನ್ನ ನಿರ್ವಹಿಸಲು ಎಎಸ್ಎಲ್ ಸುಮಾರು 17 ಕೋಟಿ ರೂ.ಗಳನ್ನ ವ್ಯಯಿಸಿತ್ತು.