ವಾಸ್ಕೋ (ಗೋವಾ): ಐಎಸ್ಎಲ್ನಲ್ಲಿ ಈ ಬಾರಿ ಮೈದಾನಕ್ಕಿಳಿದಿರುವ ಎಟಿಕೆ ಮೋಹನ್ ಬಗಾನ್ ತಂಡ ಟೂರ್ನಿಯ ಎರಡನೇ ಗೆಲುವು ದಾಖಲಿಸಿದೆ. ನಿನ್ನೆ ನಡೆದ ಎಸ್ಸಿ ಈಸ್ಟ್ ಬೆಂಗಾಲ್ ನಡುವಿನ ಪಂದ್ಯದಲ್ಲಿ 2-0 ಗೋಲಿನ ಅಂತರದಿಂದ ಗೆಲುವು ದಾಖಲಿಸಿದೆ.
ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಲೀಗ್ ಹಂತದ ಪಂದ್ಯದಲ್ಲಿ ಎಟಿಕೆ ತಂಡ ಸ್ಟಾರ್ ಆಟಗಾರ ಹಾಗೂ ಅತೀ ಹೆಚ್ಚು ಗೋಲ್ ಗಳಿಸಿರುವ ರಾಯ್ ಕೃಷ್ಣ 49ನೇ ನಿಮಿಷದಲ್ಲಿ ಮೊದಲ ಗೋಲ್ ದಾಖಲಿಸಿದ್ದರೆ, ಮನ್ವೀರ್ ಸಿಂಗ್ 85ನೇ ನಿಮಿಷದಲ್ಲಿ ತಂಡದ ಪರವಾಗಿ 2ನೇ ಗೋಲ್ ದಾಖಲಿಸಿದ್ದರು.
ಇನ್ನೊಂದೆಡೆ ಈಸ್ಟ್ ಬೆಂಗಾಲ್ ತಂಡವು ಗೋಲ್ ದಾಖಲಿಸಿ ತೀವ್ರ ತರಹದ ಪೈಟೋಟಿ ನೀಡಿತ್ತಾದರೂ ಎಟಿಕೆ ತಂಡದ ಪ್ರಬಲ ಡಿಫೆಂಡಿಂಗ್ನಿಂದಾಗಿ ಪ್ರಯತ್ನ ಫಲ ನೀಡಲಿಲ್ಲ.
ಪಂದ್ಯದ ಬಳಿಕ ಮಾತನಾಡಿದ ಈಸ್ಟ್ ಬೆಂಗಾಲ್ ಕೋಚ್ ಫಾವ್ಲರ್, ತಂಡದ ಪ್ರದರ್ಶನ ಸಮಾಧಾನ ನೀಡಿದೆ, ಆದರೆ ಫಲಿತಾಂಶ ತೃಪ್ತಿ ನೀಡಿಲ್ಲ. ಎರಡು ಮೂರು ವಾರದಿಂದ ಅಭ್ಯಾಸದಲ್ಲಿದ್ದೇವೆ ಇನ್ನಷ್ಟು ಉತ್ತಮ ಪ್ರದರ್ಶನ ಬರಬೇಕಿತ್ತು. ನಾವು ಕಳೆದ ಬಾರಿಯ ಚಾಂಪಿಯನ್ಸ್ ತಂಡದ ವಿರುದ್ಧ ಆಡಿದ್ದೇವೆ. ಅಲ್ಲದೇ ಅವರ ಆಟಕ್ಕೆ ನಾವು ಸಮನಾಗಿ ಆಡಿದ್ದೇವೆ ಎಂದಿದ್ದಾರೆ.
ಪಂದ್ಯದ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ದ್ವಿತಿಯಾರ್ಧದಲ್ಲಿ ಹಿಡಿತ ಕಳೆದುಕೊಂಡೆವು. ತಂಡದ ಪ್ರದರ್ಶನ ಸಮಾಧಾನ ತಂದಿದೆ ಎಂದಿದ್ದಾರೆ.