ETV Bharat / sports

ಐಎಸ್​ಎಲ್​: ಕೋವಿಡ್​ 19 ಲಾಕ್​ಡೌನ್​ ನಂತರ ಭಾರತದಲ್ಲಿ ಆರಂಭಕ್ಕೆ ಸಿದ್ಧವಾದ ಮತ್ತೊಂದು ಮೇಜರ್ ಟೂರ್ನಿ - ಕೇರಳ ಬ್ಲಾಸ್ಟರ್ಸ್​

ಜಿಎಮ್​ಸಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಎಟಿಕೆ ಮೋಹನ್​ ಬಗಾನ್ ಮತ್ತು ಕೇರಳ ಬ್ಲಾಸ್ಟರ್ಸ್​ ಈ ಮಹಾ ಟೂರ್ನಮೆಂಟ್​ಗೆ ಚಾಲನೆ ನೀಡಲಿವೆ.

ಐಎಸ್​ಎಲ್​
ಐಎಸ್​ಎಲ್​
author img

By

Published : Nov 19, 2020, 4:32 PM IST

ಬಾಂಬೊಲಿಮ್​(ಗೋವಾ): ಭಾರತದ ಬಹುದೊಡ್ಡ ಫುಟ್ಬಾಲ್​​ ಲೀಗ್ ಆಗಿರುವ ಇಂಡಿಯನ್ ಸೂಪರ್​ ಲೀಗ್​​ ಶುಕ್ರವಾರ ಆರೋಗ್ಯ ಸುರಕ್ಷತೆಯ ಜೊತೆಗೆ ಮುಚ್ಚಿದ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. ಇದು ಕೋವಿಡ್​ ಲಾಕ್​ಡೌನ್​ ನಂತರ ದೇಶದಲ್ಲಿ ಆರಂಭವಾಗುತ್ತಿರುವ ಮೊದಲ ಬಹುದೊಡ್ಡ ಟೂರ್ನಮೆಂಟ್​ ಆಗಲಿದೆ.

ಜಿಎಮ್​ಸಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಎಟಿಕೆ ಮೋಹನ್​ ಬಗಾನ್ ಮತ್ತು ಕೇರಳ ಬ್ಲಾಸ್ಟರ್ಸ್​ ಈ ಮಹಾ ಟೂರ್ನಮೆಂಟ್​ಗೆ ಚಾಲನೆ ನೀಡಲಿವೆ.

ಆದರೆ, ನವೆಂಬರ್ 27 ರಂದು ಫತೋರ್ಡಾದಲ್ಲಿ ನಡೆಯಲಿರುವ ಎಟಿಕೆ ಮೋಹನ್ ಬಗಾನ್ ಮತ್ತು ಎಸ್​ಸಿ ಈಸ್ಟ್​ ಬೆಂಗಾಲ್​ ನಡುವಿನ ಪಂದ್ಯ ಈ ಋತುವಿನ ಮೊದಲ ಅತಿದೊಡ್ಡ ಸ್ಪರ್ಧೆ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಏಕೆಂದರೆ ಈ ಎರಡು ಹೆವಿವೇಯ್ಟ್‌ ತಂಡಗಳು ಒಂದು ಶತಮಾನದ ಇತಿಹಾಸ ಹೊಂದಿವೆ.

ಐಎಸ್​ಎಲ್​ ಚಾಂಪಿಯನ್ ಎಟಿಕೆ ಮತ್ತು ಐ - ಲೀಗ್ ಚಾಂಪಿಯನ್​ ಮೋಹನ್ ಬಗಾನ್ ಒಂದಾದ ನಂತರ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ಫ್ರಾಂಚೈಸಿ ಸ್ಟಾರ್ ಇಂಡಿಯಾ ಡಿಫೆಂಡರ್ ಸಂದೇಶ್ ಜಿಂಗನ್ ಅವರಂತಹ ಕೆಲವು ಗುಣಮಟ್ಟದ ಆಟಗಾರರಲ್ಲಿ ಅವರು ರೀಟೈನ್ ಮಾಡಿಕೊಂಡಿದೆ. ಫಿಜಿಯಾನ್, ರಾಯ್ ಕೃಷ್ಣ ಅಂತಹ ಎದುರಾಳಿ ಡಿಫೆನ್ಸ್​ ಹೊಡೆದುರುಳಿಸುವ ಪ್ರಮುಖ ಫಾರ್ವರ್ಡರ್​ಗಳನ್ನು ಹೊಂದಿದೆ. ರಾಯ್​ ಕಳೆದ ಆವೃತ್ತಿಯಲ್ಲಿ 21 ಪಂದ್ಯಗಳಲ್ಲಿ 15 ಗೋಲುಗಳಿಸಿ ಅಗ್ರಸ್ಥಾನದಲ್ಲಿದ್ದರು. ಅವರೇ ಎಟಿಕೆ ಮೋಹನ್​ ಬಗಾನ್ ತಂಡವನ್ನು ಮುನ್ನಡೆಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.