ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಸೋಮವಾರ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವಾ ಕಿರಣ್ ರಿಜಿಜು ಅವರಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ.
ಭಾರತದಲ್ಲಿ ಕ್ರಿಕೆಟ್ಗೆ ನೀಡುವ ಮನ್ನಣೆಯನ್ನು ಫುಟ್ಬಾಲ್ಗೂ ನೀಡಿದರೆ ವಿಶ್ವಮಟ್ಟದಲ್ಲಿ ಭಾರತ ತನ್ನ ಸಾಮರ್ಥ್ಯ ತೋರಲಿದೆ ಎಂದು ಸಾಕಷ್ಟು ವರ್ಷಗಳಿಂದ ಹೇಳುತ್ತಿರುವ ಚೆಟ್ರಿ ಮಾತಿಗೆ ಕ್ರೀಡಾ ಸಚಿವಾ ಬೆಂಬಲ ಸೂಚಿಸಿದ್ದು ಭಾರತದಾದ್ಯಂತ ಫುಟ್ಬಾಲ್ಗೆ ಸಮರ್ಥವಾಗಿರುವ ಯುವ ಆಟಗಾರರನ್ನು ಗುರುತಿಸಲು ಯೋಜನೆಯೊಂದನ್ನು ಜಾರಿಗೆ ತುರುವುದಾಗಿ ಘೋಷಿಸಿದ್ದಾರೆ.
ದೆಹಲಿ ಫುಟ್ಬಾಲ್ ಅಸೋಸಿಯೇಸನ್ ಆಯೋಗದಲ್ಲಿ ನಡೆದ ಆನ್ಲೈನ್ ಸಂವಾದದ ವೇಳೆ ಖೇಲೋ ಇಂಡಿಯಾ ಯೋಜನೆಯ ಅಡಿಯಲ್ಲಿ ದೇಶದಾಧ್ಯಂತ 12 ವರ್ಷದೊಳಗಿನ ಫುಟ್ಬಾಲ್ ಪ್ರೆತಿಭೆಗಳನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸಹಯೋಗದೊಂದಿಗೆ ಎಸ್‌ಎಐ ಯೋಜನೆಯನ್ನು ಜಾರಿಗೊಳಿಸಲಾಗುವುದು ಮತ್ತು ಗೋಲ್ಡನ್ (ಬೇಬಿ) ಲೀಗ್‌ಗಳನ್ನು ಭಾರತದಾದ್ಯಂತ ಆಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
"ದೆಹಲಿಯಲ್ಲಿ ಫುಟ್ಬಾಲ್ ಸಂಸ್ಥೆಯ ಮೂಲಸೌಕರ್ಯವನ್ನು ಸುಧಾರಿಸಲು ನಾನು ಲೆಫ್ಟಿನೆಂಟ್ ಜನರಲ್ ಮತ್ತು ದೆಹಲಿಯ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸುತ್ತೇನೆ, ಭಾರತವನ್ನು ವಿಶ್ವಶಕ್ತಿಯನ್ನಾಗಿ ಮಾಡಲು ಫುಟ್ಬಾಲ್ ಸಂಸ್ಕೃತಿ ಅವಶ್ಯಕವಾಗಿದೆ " ಎಂದು ರಿಜಿಜು ಹೇಳಿದ್ದಾರೆ.
ಕಿರಣ್ ರಿಜಿಜು ಅವರ ಈ ನಿರ್ಧಾರವನ್ನು ಚೆಟ್ರಿ ಸ್ವಾಗತಿಸಿದ್ದಾರೆ. "ಒಂದು ವೇಳೆ ಪ್ರತಿ ಪ್ರತಿಭೆಯನ್ನು ಗುರುತಿಸಿ ಚೆನ್ನಾಗಿ ಪೋಷಿಸಿದರೆ ಭಾರತೀಯ ಫುಟ್‌ಬಾಲ್‌ನ ಅರ್ಧದಷ್ಟು ಸಮಸ್ಯೆ ಬಗೆಹರಿಯುತ್ತದೆ. ನಾನು ಕೇಳಬಹುದಾದ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆ ಇದು ”ಎಂದು ಚೆಟ್ರಿ ಸಂತಸ ವ್ಯಕ್ತಪಡಿಸಿದ್ದಾರೆ.