ETV Bharat / sports

ನಾನು ಈಗಾಗಲೇ ಭಾರತ ಅಂಡರ್​ 16, ಇಂಡಿಯನ್​ ಆ್ಯರೋಸ್ ತಂಡಗಳ ಬಹುದೊಡ್ಡ ಅಭಿಮಾನಿ: ಸುನಿಲ್​ ಚೆಟ್ರಿ

ಎಐಎಫ್​ಎಫ್​ (AIFF) ಟಿವಿಯ ಜೊತೆಗಿನ ಲೈಔ್​ ಚಾಟ್​ನಲ್ಲಿ ಮಾತನಾಡಿದ ಚೆಟ್ರಿ, ತಾವು ಅಂಡರ್​ 16 ಬ್ಯಾಚ್​ನ ಅಭಿಮಾನಿ, ನನ್ನ ಪ್ರಕಾರ ಆ ತಂಡ ಭಾರತವನ್ನು ಏಷ್ಯಾದ ಅಗ್ರ 10ಕ್ಕೆ ಖಂಡಿತ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Sunil Chhetri
ಸುನಿಲ್​ ಚೆಟ್ರಿ
author img

By

Published : Jun 20, 2020, 9:01 AM IST

ನವದೆಹಲಿ: ನಾನು ಭಾರತ ಅಂಡರ್​ 16 ತಂಡದ ಬಹುದೊಡ್ಡ ಅಭಿಮಾನಿ ಎಂದು ಭಾರತ ಸೀನಿಯರ್​ ಫುಟ್ಬಾಲ್​​​ ತಂಡದ ನಾಯಕ ಸುನಿಲ್​ ಚೆಟ್ರಿ ಶುಕ್ರವಾರ ಹೇಳಿದ್ದಾರೆ.

ಎಐಎಫ್​ಎಫ್​(AIFF) ಟಿವಿಯ ಜೊತೆಗಿನ ಲೈಔ್​ ಚಾಟ್​ನಲ್ಲಿ ಮಾತನಾಡಿದ ಚೆಟ್ರಿ, ತಾವು ಅಂಡರ್​ 16 ಬ್ಯಾಚ್​ನ ಅಭಿಮಾನಿ, ನನ್ನ ಪ್ರಕಾರ ಆ ತಂಡ ಭಾರತವನ್ನು ಏಷ್ಯಾದ ಟಾಪ್​ 10ಕ್ಕೆ ಖಂಡಿತ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಈಗಾಗಲೆ ಅಂಡರ್​ 16 ತಂಡ ಹಾಗೂ ಇಂಡಿಯನ್​ ಆ್ಯರೋಸ್​ನ ಬಹುದೊಡ್ಡ ಅಭಿಮಾನಿಯಾಗಿದ್ದೇನೆ. ಅದರಲ್ಲೂ ಬಿಬೊಯಾನೋ ನೇತೃತ್ವದ ಅಂಡರ್​ 16 ತಂಡಕ್ಕ ನಾನು ದೊಡ್ಡ ಅಭಿಮಾನಿ. ಅದು ನಿಜಕ್ಕೂ ಅದ್ಭುತ ತಂಡವಾಗಿದೆ ಎಂದು ಹೇಳಿದ್ದಾರೆ.

Sunil Chhetri
ಸಿನಿಲ್ ಚೆಟ್ರಿ

"ಅವರು ತುಂಬಾ ಚೆನ್ನಾಗಿ ಫುಟ್ಬಾಲ್​​​​​​​ ಪಂದ್ಯಗಳನ್ನು ಆಡಿದ್ದಾರೆ. ಪ್ರತಿ ಹಂತದಲ್ಲೂ ಸುಧಾರಣೆ ಮುಂದುವರಿಸುತ್ತಿದ್ದಾರೆ. ಆ ಹುಡುಗರು ಹಿಂದಿನ ಬ್ಯಾಚ್(ಎಎಫ್‌ಸಿ ಯು -16 ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ‌ಫೈನಲ್​​​​ಗೆ ಏರಿದ್ದ 2018ರ ಬ್ಯಾಚ್​ಗಿಂತ ಉತ್ತಮವಾಗಿ ಆಡುತ್ತಿದ್ದಾರೆ" ಎಂದು ಚೆಟ್ರಿ ತಿಳಿಸಿದ್ದಾರೆ.

Sunil Chhetri
ಸುನಿಲ್​ ಚೆಟ್ರಿ

ಗುರುವಾರ ನಡೆದ ಬಹ್ರೇನ್​ ಎಎಫ್​ಎಫ್​ ಅಂಡರ್​ -16 ಚಾಂಪಿಯನ್​ಶಿಪ್​ನ ಸಿ ಗುಂಪಿನಲ್ಲಿ ಕೊರಿಯಾ, ಜೆಕ್​ ಗಣರಾಜ್ಯ, ಆಸ್ಟ್ರೇಲಿಯಾ ಮತ್ತು ಉಜಬೇಕಿಸ್ತಾನ್​ ತಂಡಗಳ ಜೊತೆ ಡ್ರಾ ಸಾಧಿಸಿತು. ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್​ ಫೈನಲ್​ಗೇರಲಿದ್ದು, ನಾಲ್ಕು ಸೆಮಿಫೈನಲಿಸ್ಟರ್​ಗಳು ಪೆರು ದೇಶದಲ್ಲಿ ಫೀಫಾ ಅಂಡರ್​ 17 ವಿಶ್ವಕಪ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ಭಾರತ ತಂಡ ಅಂಡರ್​ 16 ಚಾಂಪಿಯನ್​ಶಿಪ್​ಗೆ ಸತತ 3ನೇ ಸಲ ಹಾಗೂ ಒಟ್ಟಾರೆ 9ನೇ ಬಾರಿಗೆ ಅರ್ಹತೆ ಪಡೆದಿದೆ.

ಈ ಬ್ಯಾಚ್​ ಉತ್ತಮ ಫಲಿತಾಂಶ ನೀಡಿದಾಗ ಪ್ರಸ್ತುತ 14ರ ತಂಡದ ಹುಡುಗರಿಗೆ ಇನ್ನೂ ಉತ್ತಮ ಫಲಿತಾಂಶ ನೀಡಲು ಉತ್ತಮ ಸಿದ್ದತೆ ನಡೆಸಿಕೊಳ್ಳುವ ಜವಾಬ್ದಾರಿ ನೀಡುತ್ತದೆ. ಏಕೆಂದರೆ ಈ ಹುಡುಗರು ಸಾಧಿಸಿದ ಸಾಧನೆಯನ್ನು ಉತ್ತಮಗೊಳಿಸಲು ಅವರು ಬಯಸುತ್ತಾರೆ. ನೀವೂ ಕೂಡ ಸಾಧನೆ ನಿರಂತರವಾಗಿ ಹೆಚ್ಚಿಸಿಕೊಳ್ಳಲು ಬಯಸುತ್ತೀರಿ ಎಂದು ಚೆಟ್ರಿ ಅಭಿಪ್ರಾಯಪಟ್ಟಿದ್ದಾರೆ.

ಈ ಹಂತದಲ್ಲಿ ಭಾರತದ ಫುಟ್ಬಾಲ್​​​​​​​ ತಂಡ ಏಷ್ಯಾದ ಅಗ್ರ 10 ತಂಡಗಳಲ್ಲಿ ಸ್ಥಾನ ಪಡೆಯಬೇಕು ಎಂದು ನೀವು ಬಯಸುತ್ತೀರಿ. ಇದು ಸಾಧ್ಯವಾಗಬೇಕಾದರೆ ಯುವ ಆಟಗಾರರು ಸೀನಿಯರ್​ ತಂಡದಲ್ಲಿ ಬಂದು ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಚೆಟ್ರಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.