ETV Bharat / sports

ಫುಟ್ಬಾಲ್​:  ಬೊರುಸ್ಸಿಯಾ ಡಾರ್ಟ್ಮಂಡ್ ಜೊತೆಗೆ ಹೈದರಾಬಾದ್ ಎಫ್‌ಸಿ ಒಪ್ಪಂದ

author img

By

Published : Aug 21, 2020, 2:08 PM IST

ಹೈದರಾಬಾದ್ ಎಫ್‌ಸಿ ತಂಡ ಜರ್ಮನಿಯ ಬೊರುಸ್ಸಿಯಾ ಡಾರ್ಟ್ಮಂಡ್ (ಬಿವಿಬಿ) ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದವನ್ನು ಪ್ರಕಟಿಸಿದೆ.

Hyderabad FC announce partnership with Borussia Dortmund
ಬೊರುಸ್ಸಿಯಾ ಡಾರ್ಟ್ಮಂಡ್ ಜೊತೆಗೆ ಹೈದರಾಬಾದ್ ಎಫ್‌ಸಿ ಒಪ್ಪಂದ

ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ ಕ್ಲಬ್ ಹೈದರಾಬಾದ್ ಎಫ್‌ಸಿ (ಹೆಚ್‌ಎಫ್‌ಸಿ) ಗುರುವಾರ ಜರ್ಮನಿಯ ಫುಟ್ಬಾಲ್​ ತಂಡ ಬೊರುಸ್ಸಿಯಾ ಡಾರ್ಟ್ಮಂಡ್ (ಬಿವಿಬಿ) ನೊಂದಿಗೆ ಎರಡು ವರ್ಷಗಳ ಒಪ್ಪಂದವನ್ನು ಪ್ರಕಟಿಸಿದ್ದು, 2025 ರವರೆಗೆ ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ.

ಬಿವಿಬಿ ತನ್ನ ಅಕಾಡೆಮಿಯಲ್ಲಿ ಹೆಚ್‌ಎಫ್‌ಸಿ ರಚನೆ ಮತ್ತು ಉತ್ತಮ ತಂಡ ನಿರ್ಮಿಸುವುದು ಮತ್ತು ಬೆಂಬಲಿಸುವುದರ ಜೊತೆಗೆ ಹೆಚ್‌ಎಫ್‌ಸಿ ತರಬೇತುದಾರರಿಗೆ ತರಬೇತಿ ಬಗ್ಗೆ ಮಾರ್ಗದರ್ಶನ ನೀಡಲಿದೆ.

"ಹೆಚ್‌ಎಫ್‌ಸಿಯೊಂದಿಗಿನ ಈ ಪಾಲುದಾರಿಕೆಯನ್ನು ಘೋಷಿಸಲು ನಾನು ಸಂತೋಷಪಡುತ್ತೇನೆ. ಈ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಮ್ಮೆಲ್ಲರಿಗೂ ಸಾಕಷ್ಟು ಸವಾಲಿನ ಸಮಯದಲ್ಲಿ ಬರಲಿದೆ. ಏಕೆಂದರೆ ಈ ಸಹಭಾಗಿತ್ವವು ಕ್ರೀಡೆ ಮತ್ತು ವಿಶೇಷವಾಗಿ ಫುಟ್ಬಾಲ್​​​​​ನಲ್ಲಿ ಪ್ರಪಂಚದಲ್ಲಿ ಜನರನ್ನು ಒಂದುಗೂಡಿಸಬಹುದು ಎಂದು ತೋರಿಸುತ್ತದೆ. ಹೆಚ್‌ಎಫ್‌ಸಿ ಮಂಡಳಿಯು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಕೃತಜ್ಞನಾಗಿದ್ದೇನೆ" ಎಂದು ಬೊರುಸ್ಸಿಯಾ ಡಾರ್ಟ್ಮಂಡ್‌ನ ವ್ಯವಸ್ಥಾಪಕ ನಿರ್ದೇಶಕ ಕಾರ್ಸ್ಟನ್ ಕ್ರಾಮರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಒಪ್ಪಂದದೊಂದಿಗೆ, ಹೆಚ್‌ಎಫ್‌ಸಿ ಭಾರತದ ಬಿವಿಬಿಯ ಮೊದಲ ಮತ್ತು ವಿಶೇಷ ಕ್ಲಬ್ ಪಾಲುದಾರನಾಗಲಿದೆ. ಬಿವಿಬಿ ಕ್ಲಬ್ ಪ್ರಸ್ತುತ ಕ್ಲಬ್ ಪಾಲುದಾರಿಕೆಯೊಂದಿಗೆ ಥಾಯ್ ಪ್ರೀಮಿಯರ್ ಲೀಗ್ ಕ್ಲಬ್ ಬುರಿರಾಮ್ ಯುನೈಟೆಡ್, ಆಸ್ಟ್ರೇಲಿಯಾದ ಎನ್‌ಪಿಎಲ್ ಕ್ಲಬ್ ಮಾರ್ಕೊನಿ ಎಫ್‌ಸಿ ಮತ್ತು ಜಪಾನ್‌ನ ಇವಾಟೆ ಗ್ರುಲ್ಲಾ ಮೊರಿಯೊಕಾ ಅವರೊಂದಿಗೆ ಪಾಲುದಾರಿಕೆ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.