ಕೋಲ್ಕತಾ: ಐ-ಲೀಗ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಟಿಡ್ಡಿಮ್ ರೋಡ್ ಅಥ್ಲೆಟಿಕ್ ಯೂನಿಯನ್ ಎಫ್‌ಸಿ ತಂಡವನ್ನ ಮಣಿಸಿ ಚೊಚ್ಚಲ ಬಾರಿ ಗೋಕುಲಂ ಕೇರಳ ಎಫ್‌ಸಿ ತಂಡ ಪ್ರಶಸ್ತಿ ಎತ್ತಿ ಹಿಡಿದಿದೆ.
4-1 ಗೋಲುಗಳಿಂದ ಟಿಡ್ಡಿಮ್ ರೋಡ್ ಅಥ್ಲೆಟಿಕ್ ಯೂನಿಯನ್ ಎಫ್‌ಸಿ ತಂಡವನ್ನ ಗೋಕುಲಂ ಕೇರಳ ಎಫ್‌ಸಿ ಸೋಲಿಸಿತು. ಈ ಗೆಲುವು ಪಡೆಯುವ ಮೂಲಕ ಐ-ಲೀಗ್ ಪ್ರಶಸ್ತಿಯನ್ನು ಗೆದ್ದ ಕೇರಳದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಗೋಕುಲಂ ಕೇರಳ ಎಫ್‌ಸಿ ಪರ ಬಿದ್ಯಾಶಾಗರ್ ಸಿಂಗ್ ಅವರ 23 ನೇ ನಿಮಿಷ, ಶರೀಫ್ ಮೊಹಮ್ಮದ್ (69 ನೇ ನಿಮಿಷ), ಎಮಿಲ್ ಬೆನ್ನಿ (74 ನೇ ನಿಮಿಷ), ಡೆನ್ನಿಸ್ ಆಂಟ್ವಿ (77 ನೇ ನಿಮಿಷ) ಗೋಲು ಗಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.