ETV Bharat / sports

ಗ್ಲೋಬ್ ಸಾಕರ್ ಪ್ರಶಸ್ತಿ.. ಶತಮಾನದ ಆಟಗಾರ ಗೌರವಕ್ಕೆ ಪಾತ್ರರಾದ ರೊನಾಲ್ಡೊ - ಪೋರ್ಚುಗಲ್​ನ ಫೂಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ

ಅದ್ಭುತ ಆಟಗಾರರೊಂದಿಗೆ ಈ ಕಾರ್ಯಕ್ರಮದ ಭಾಗವಾಗಲು ಮತ್ತು ನಾಮನಿರ್ದೇಶನಗೊಂಡಿರುವುದು ಅದ್ಭುತವಾಗಿದೆ. ಇದು ನನಗೆ ದೊಡ್ಡ ಗೌರವವಾಗಿದೆ. ಆದ್ದರಿಂದ, ಮುಂದಿನ ವರ್ಷ ಈ ಸಾಂಕ್ರಾಮಿಕ ಕೊನೆಯಾಗಲಿದೆ ಎಂದು ನಾನು ಭಾವಿಸುತ್ತೇನೆ..

Cristiano Ronaldo named Player of the Century
ಶತಮಾನದ ಆಟಗಾರ ಗೌರವಕ್ಕೆ ಪಾತ್ರರಾದ ರೊನಾಲ್ಡೊ
author img

By

Published : Dec 28, 2020, 7:49 AM IST

ದುಬೈ: ಗ್ಲೋಬ್ ಸಾಕರ್ ಪ್ರಶಸ್ತಿ ಸಮಾರಂಭದಲ್ಲಿ ಪೋರ್ಚುಗಲ್​ನ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಶತಮಾನದ ಆಟಗಾರ (Player of the Century) ಎಂದು ಹೆಸರಿಸಲಾಯಿತು.

2001 ರಿಂದ 2020ರವರೆಗೆ ಐದು ಬಾರಿ ಬಲೋನ್ ಡಿ ಓರ್ ಪ್ರಶಸ್ತಿ ಪಡೆದಿರುವ ರೊನಾಲ್ಡೊ, ಬಾರ್ಸಿಲೋನಾದ ತನ್ನ ಪ್ರತಿಸ್ಪರ್ಧಿ ಲಿಯೋನೆಲ್ ಮೆಸ್ಸಿಗಿಂತ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂಬ ಕಾರಣಕ್ಕೆ ಈ ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿ ಸ್ವೀಕರಿಸದ ಬಳಿಕ ಮಾತನಾಡಿರುವ ರೊನಾಲ್ಡೊ" ನನಗೆ ಇದೊಂದು ದೊಡ್ಡ ಸಾಧನೆಯಾಗಿದೆ. ನಾನು ಮೊದಲೇ ಹೇಳಿದಂತೆ ನನ್ನ ಜೀವನದಲ್ಲಿ ಫುಟ್‌ಬಾಲ್‌ನೊಂದಿಗೆ ಮುಂದುವರಿಯಲು ಇದು ಪ್ರೇರಣೆ ನೀಡುತ್ತದೆ.

ಅದ್ಭುತ ಆಟಗಾರರೊಂದಿಗೆ ಈ ಕಾರ್ಯಕ್ರಮದ ಭಾಗವಾಗಲು ಮತ್ತು ನಾಮನಿರ್ದೇಶನಗೊಂಡಿರುವುದು ಅದ್ಭುತವಾಗಿದೆ. ಇದು ನನಗೆ ದೊಡ್ಡ ಗೌರವವಾಗಿದೆ. ಆದ್ದರಿಂದ, ಮುಂದಿನ ವರ್ಷ ಈ ಸಾಂಕ್ರಾಮಿಕ ಕೊನೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದರಿಂದಾಗಿ ನೀವು ಕುಟುಂಬಗಳೊಂದಿಗೆ ಹೆಚ್ಚು ಆನಂದಿಸಬಹುದು" ಎಂದಿದ್ದಾರೆ.

34 ವರ್ಷದ ರೊನಾಲ್ಡೊ 2020ರಲ್ಲಿ ಕ್ಲಬ್ ಮತ್ತು ದೇಶಕ್ಕಾಗಿ ಒಟ್ಟು 44 ಗೋಲುಗಳನ್ನು ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.