ETV Bharat / sports

ಜರ್ಮನಿ ಫುಟ್​ಬಾಲ್​ ಲೆಜೆಂಡ್​ ಗೆರ್ಡ್​ ಮುಲ್ಲರ್ ನಿಧನ

ಮುಲ್ಲರ್​ ಮ್ಯೂನಿಚ್​ ಪರ 566 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಬಂಡೆಸ್ಲಿಗಾದಲ್ಲಿ 365 ಗೋಲುಗಳನ್ನು ಸಿಡಿಸುವ ಮೂಲಕ ಲೀಗ್​ ಇತಿಹಾಸದಲ್ಲಿ ಗರಿಷ್ಠ ಗೋಲು ಸಿಡಿಸಿದ ಫುಟ್​ಬಾಲ್ ಪ್ಲೇಯರ್ ಎಂಬ ದಾಖಲೆಯನ್ನು ಮುಲ್ಲರ್ ಹೊಂದಿದ್ದರು.

author img

By

Published : Aug 15, 2021, 9:56 PM IST

Bayern Munich legend Gerd Muller passes away aged 75
ಜರ್ಮನಿ ಫುಟ್​ಬಾಲ್​ ಲೆಜೆಂಡ್​ ಗೆರ್ಡ್​ ಮುಲ್ಲರ್ ನಿಧನ

ಮ್ಯುನಿಚ್: ಬೇಯರ್ನ್​ ಮ್ಯೂನಿಚ್ ಮತ್ತು ಜರ್ಮನಿ ತಂಡದ ಮಾಜಿ ಫಾರ್ವರ್ಡ ಆಟಗಾರ ಗೆರ್ಡ್​ ಮುಲ್ಲರ್​ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಕ್ಲಬ್​ ಭಾನುವಾರ ಘೋಷಿಸಿದೆ.

ಮುಲ್ಲರ್​ ಮ್ಯೂನಿಚ್​ ಪರ 566 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಬಂಡೆಸ್ಲಿಗಾದಲ್ಲಿ 365 ಗೋಲುಗಳನ್ನು ಸಿಡಿಸುವ ಮೂಲಕ ಲೀಗ್​ ಇತಿಹಾಸದಲ್ಲಿ ಗರಿಷ್ಠ ಗೋಲು ಸಿಡಿಸಿದ ಫುಟ್​ಬಾಲ್ ಪ್ಲೇಯರ್ ಎಂಬ ದಾಖಲೆಯನ್ನು ಮುಲ್ಲರ್ ಹೊಂದಿದ್ದರು.

" ಗೆರ್ಡ್ ಮುಲ್ಲರ್ ಫುಟ್​ಬಾಲ್ ಜಗತ್ತಿನ ಶ್ರೇಷ್ಠ ಸ್ಟ್ರೈಕರ್ ಮತ್ತು ವಿಶ್ವ ಕ್ರೀಡೆ ಕಂಡ ಉತ್ತಮ ವ್ಯಕ್ತಿ " ಎಂದು ಬೇಯರ್ನ್ ಅಧ್ಯಕ್ಷ ಹರ್ಬರ್ಟ್ ಹೈನರ್ ಮರಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ". ನಾವೆಲ್ಲರೂ ಈ ದುಃಖದ ಸಂದರ್ಭದಲ್ಲಿ ಆತನ ಪತ್ನಿ ಉಸ್ಚಿ ಹಾಗೂ ಆತನ ಕುಟುಂಬದೊಂದಿಗೆ ಜೊತೆ ಇರುತ್ತೇವೆ ಎಂದಿದ್ದಾರೆ.

  • FC Bayern are mourning the passing of Gerd Müller.

    The FC Bayern world is standing still today. The club and all its fans are mourning the death of Gerd Müller, who passed away on Sunday morning at the age of 75.

    — FC Bayern English (@FCBayernEN) August 15, 2021 " class="align-text-top noRightClick twitterSection" data=" ">

ಮುಲ್ಲರ್​ ಬೇಯರ್ನ್​ ಪರ 607 ಪಂದ್ಯಗಳನ್ನಾಡಿದ್ದರು. ಅವರು ಆರು ಆವೃತ್ತಿಗಳಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿದ್ದರು. 1964ರಲ್ಲಿ ಕ್ಲಬ್​ ಸೇರಿಕೊಂಡಿದ್ದ ಮುಲ್ಲರ್​ 4 ಜರ್ಮನ್ ಕಪ್​ ಮತ್ತು ನಾಲ್ಕು ಲೀಗ್​ ಪ್ರಶಸ್ತಿಗಳನ್ನು ಕ್ಲಬ್​ಗೆ ತಂದುಕೊಟ್ಟಿದ್ದರು.

ತಮ್ಮ ರಾಷ್ಟ್ರೀಯ ತಂಡವಾದ ವೆಸ್ಟ್​ ಜರ್ಮನಿ 1972 ರಲ್ಲಿ ಯುರೋಪಿಯನ್ ಚಾಂಪಿಯನ್​ಶಿಪ್​ ಮತ್ತು 1874ರಲ್ಲಿ ವಿಶ್ವಕಪ್​ ಗೆಲ್ಲುವಲ್ಲಿ ಮುಲ್ಲರ್ ಪ್ರಮುಖ ಪಾತ್ರವಹಿಸಿದ್ದರು. ಇವರು ವೆಸ್ಟ್​ ಜರ್ಮನಿ ಪರ 62 ಪಂದ್ಯಗಳಿಂದ 68 ಗೋಲು ಸಿಡಿಸಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​ ಉಳಿಸಬೇಕೆನ್ನುವವರು ಕೊಹ್ಲಿಯನ್ನ ತಮ್ಮ ವಕ್ತಾರರನ್ನಾಗಿ ನೇಮಿಸಲಿ : ಇಯಾನ್ ಚಾಪೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.