ಪ್ಯಾರಿಸ್: ಫ್ರಾನ್ಸ್ಮತ್ತು ಪ್ಯಾರೀಸ್ ಸೇಂಟ್ ಜರ್ಮನ್ ತಂಡದ ಸ್ಟೈಕರ್ ಕಿಲಿಯನ್ ಎಂಬಪ್ಪೆ ಅವರಿಗೆ ಕೋವಿಡ್ 19 ಸೋಂಕು ತಗುಲಿದೆ. ಹಾಗಾಗಿ ಅವರು ಇಂದು ಫ್ರಾನ್ಸ್ ನೇಷನ್ ಲೀಗ್ನಲ್ಲಿ ಕ್ರೊವೇಷಿಯಾ ವಿರುದ್ಧದ ಪಂದ್ಯದಿಂದ ತಪ್ಪಿಸಿಕೊಳ್ಳಲಿದ್ದಾರೆ ಎಂದು ಫ್ರೆಂಚ್ ಫುಟ್ಬಾಲ್ ಫೆಡರೇಷನ್ ತಿಳಿಸಿದೆ.
ಕಳೆದ ಶನಿವಾರ ಸ್ವೀಡನ್ ವಿರುದ್ಧ ಗೋಲುಗಳಿಸುವ ಮೂಲಕ 1-0 ಗೋಲುಗಳಿಂದ ಲೆಸ್ ಬ್ಲ್ಯೂಸ್ ವಿರುದ್ಧ ಗೆಲ್ಲಲು ಪ್ರಮುಖ ಪಾತ್ರವಹಸಿದ್ದರು. ಆದರೆ ಈಗ ಕ್ರೊಯೇಷಿಯಾ ವಿರುದ್ಧ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಮಂಗಳವಾರ ನಡೆಯುವ ಹಣಾಹಣಿಗೆ ಗೈರುಹಾಜರಾಗಲಿದ್ದಾರೆ ಎಂದು ಫಡೆರೇಷನ್ ತಿಳಿಸಿದೆ.
ಎಂಬಪ್ಪೆ ಕೋವಿಡ್ 19ಗೆ ತುತ್ತಾಗಿರುವ ಪಿಎಸ್ಜಿ ತಂಡದ 7ನೇ ಆಟಗಾರನಾಗಿದ್ದಾರೆ.ಲೀಗ್ ಒನ್ ಚಾಂಪಿಯನ್ ತಂಡದಲ್ಲಿ ಕಳೆದವಾರ 6 ಮಂದಿಗೆ ಸಕರಾತ್ಮಕ ಫಲಿತಾಂಶ ಪಡೆದಿದ್ದರು. ಇದರಲ್ಲಿ ಸ್ಟಾರ್ ಫುಟ್ಬಾಲರ್ ನೇಮರ್, ಮೌರೊ ಇಕಾರ್ಡಿ, ಮಾರ್ಕ್ವಿನ್ಹೋಸ್, ಏಂಜಲ್ ಡಿ ಮಾರಿಯಾ, ಲಿಯಾಂಡ್ರೊ ಪ್ಯಾರೆಡೆಸ್ ಮತ್ತು ಕೀಲರ್ ನವಾಸ್ ಸೇರಿದ್ದಾರೆ. ಇವರು ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯನಂತರ ರಜೆ ತೆಗೆದುಕೊಂಡಿದ್ದರು. ಈ ವೇಳೆ ಕೋವಿಡ್ 19 ವೈರಸ್ ಸೋಂಕು ತಗುಲಿಸಿಕೊಂಡಿದ್ದರು.
ಎಂಬಪ್ಪೆ ಫ್ರಾನ್ಸ್ ನೇಷನ್ ಲೀಗ್ ಫುಟ್ಬಾಲ್ ಟೂರ್ನಿಯಿಂದ ಮೊದಲ ಕೆಲವು ಪಂದ್ಯಗಳಿಂದ ಹೊರಬಿದ್ದಿದ್ದಾರೆ ಎಂದು ರಾಷ್ಟ್ರೀಯ ತಂಡದ ಮ್ಯಾನೇಜ್ಮೆಂಟ್ ತಿಳಿಸಿದೆ. ಸೋಮವಾರ ಇವರು ತರಬೇತಿ ಶಿಬಿರಕ್ಕೆ ಬಂದಂತಹ ಸಮಯದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಇವರಿಗೆ ಕೊರೊನಾ ಇರುವುದು ಖಚಿತಗೊಂಡಿದೆ. ತಕ್ಷಣ ಇವರು ಸ್ವಯಂಪ್ರೇರಿತರಾಗಿ ಕ್ವಾರೆಂಟೀನ್ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.