ETV Bharat / sports

ಭಾರತ ಫುಟ್ಬಾಲ್​​ ತಂಡದ  ಮಾಜಿ ನಾಯಕ ಕಾರ್ಲ್​ಟನ್​ ಚಾಪ್​ಮನ್​ ನಿಧನ

author img

By

Published : Oct 12, 2020, 4:08 PM IST

ಭಾರತ ತಂಡದ ಪರ ಅವರು 1995 ಮತ್ತು 2001 ರ ನಡುವೆ ಮಿಡ್‌ಫೀಲ್ಡರ್ ಆಗಿ ಆಡಿದ್ದರು ಮತ್ತು ಕೆಲವು ಕಾಲ ತಂಡದ ನಾಯಕರಾಗಿದ್ದರು.

ಕಾರ್ಲ್​ಟನ್​ ಚಾಪ್​ಮನ್
ಕಾರ್ಲ್​ಟನ್​ ಚಾಪ್​ಮನ್

ನವದೆಹಲಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಕಾರ್ಲ್ಟನ್ ಚಾಪ್​ಮನ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

​49 ವರ್ಷದ ಚಾಪ್​ಮನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತೀವ್ರ ಬೆನ್ನು ನೋವಿನ ಕಾರಣ ಭಾನುವಾರ ರಾತ್ರಿ ಆಸ್ಪತ್ರಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಕಾರ್ಲ್​ಟನ್​ ಚಾಪ್​ಮನ್
ಕಾರ್ಲ್​ಟನ್​ ಚಾಪ್​ಮನ್

ಚಾಪ್​ಮನ್​ ಟಾಟಾ ಫುಟ್ಬಾಲ್​ ಅಕಾಡೆಮಿಯಲ್ಲಿ ಪಳಗಿದ ಆಟಗಾರನಾಗಿದ್ದು, ಅವರು ಆಡುವ ದಿನಗಳಲ್ಲಿ ಭಾರತ ತಂಡದ ಅತ್ಯುತ್ತಮ ಮಿಡ್​ಫೀಲ್ಡರ್​ಗಳಲ್ಲಿ ಒಬ್ಬರಾಗಿದ್ದರು. ಅವರು 1990ರಲ್ಲಿ ಟಿಎಫ್​ಎಗೆ ಸೇರ್ಪಡೆಗೊಂಡಿದ್ದರು. ಮೂರು ವರ್ಷಗಳ ನಂತರ ಪೂರ್ವ ಬೆಂಗಾಳ ಕ್ಲಬ್​ ಸೇರಿಕೊಂಡಿದ್ದರು.

1997ರ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಗೋಲ್ಡ್ ಕಪ್​ನಲ್ಲಿ ಇರಾಕ್ ತಂಡದ ವಿರುದ್ಧ ಹ್ಯಾಟ್ರಿಕ್​ ಗೋಲುಗಳಿಸಿ ಭಾರತಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.